<![CDATA[Cini Shodha | Filmi News Online - Kannada]]> https://www.cinishodha.com/ kn Thu, 15 Oct 2026 13:38:22 +0530 <![CDATA[Marriage Party Movie : ಇದು ಪಕ್ಕಾ ಮನೋರಂಜನಾತ್ಮಕ ಚಿತ್ರ!]]> https://www.cinishodha.com/marriage-party-movie-chayyan-shetty-25-09-2026/ https://www.cinishodha.com/marriage-party-movie-chayyan-shetty-25-09-2026/ Thu, 15 Oct 2026 09:41:21 +0530 ಅಧಿಪತ್ರ ಎಂಬ ಮೊದಲ ಸಿನಿಮಾ ಮೂಲಕವೇ ನಿರ್ದೇಶಕರಾಗಿ ಗಮನ ಸೆಳೆದಿದ್ದವರು ಚಯನ್ ಶೆಟ್ಟಿ. ಅವರೀಗ ಮ್ಯಾರೇಜ್ ಪಾರ್ಟಿ (Marriage Party) ಎಂಬ ಪಕ್ಕಾ ಮನೋರಜನಾತ್ಮಕ ಕಥೆಯೊಂದಿಗೆ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಕರಾವಳಿ ಬಾಗದ ಮಜವಾದ ಕಥೆಯನ್ನೊಳಗೊಂಡಿರುವ ಮ್ಯಾರೇಜ್ ಪಾರ್ಟಿಯ ಒಂದು ಫಸ್ಟ್ ಲುಕ್ ಪೋಸ್ಟರ್ ಮಾತ್ರವೇ ಕೆಲ ದಿನಗಳ ಹಿಂದೆ ಬಿಡುಗಡೆಗೊಂಡಿತ್ತು. ಆ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚಿತ್ರದ ಬಿಡುಗಡೆ ದಿನಾಂಕವೀಗ ಘೋಶಣೆಯಾಗಿದೆ. ಇದೇ ಡಿಸೆಂಬರ್ ೪ರಂದು ಮ್ಯಾರೇಜ್ ಪಾರ್ಟಿ ರಾಜ್ಯಾದ್ಯಂತ ತೆರೆಗಾಣಲಿದೆ.

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿದ್ದ ಅಧಿಪತ್ರ ಚಿತ್ರ ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆ ಸಿನಿಮಾ ಮೂಲಕ ಗಹನವಾದೊಂದು ಕಥೆಗೆ ಚಯನ್ ಶೆಟ್ಟಿ ದೃಶ್ಯರೂಪ ನೀಡಿ, ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದರು. ಆದರೆ, ಈ ಬಾರಿ ಮ್ಯಾರೇಜ್ ಪಾರ್ಟಿ ಮೂಲಕ ಮತ್ತೊಂದು ಮಜಲಿನ ಕಥನದೊಂದಿಗೆ ಮೋಡಿಒ ಮಾಡುವ ಸನ್ನಾಹದಲ್ಲಿದ್ದಾರೆ. ಘಟಾನುಘಟಿ ಕಲಾವಿದರೇ ಈ ಸಿನಿಮಾದಲ್ಲಿ ಥರ ಥರದ ಪಾತ್ರಗಳನ್ನು ನಿಭಾಯಿಸಿದ್ದಾರೆ. ಗಟ್ಟಿ ಕಥೆ ಮತ್ತು ಹಾಸ್ಯ ಮಿಳಿತಗೊಂಡಂಥಾ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆದ್ದ ಅದೆಷ್ಟೋ ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಿದ್ದಾವೆ. ಆ ಸಾಲಿಗೆ ಮ್ಯಾರೇಜ್ ಪಾರ್ಟಿ ಕೂಡಾ ಸೇರ್ಪಡೆಗೊಳ್ಳಬಹುದಾ ಎಂಬಂಥಾ ಕೌತುಕ ಸಿನಿಮಾಸಕ್ತರಲ್ಲಿದೆ.

ಸಾಮಾನ್ಯವಾಗಿ, ಕಡಲ ತಡಿಯ ಕಥೆ ಎಂದಾಕ್ಷಣವೇ ಇತ್ತೀಚಿನ ದಿನಗಳಲ್ಲಿ ಎಲ್ಲರ ಚಿತ್ತ ಭೂತಾರಾಧನೆಯ ಸುತ್ತಾ ಕೀಲಿಸಿಕೊಳ್ಳೋದಿದೆ. ಸದ್ಯದ ಮಟ್ಟಿಗೆ ಅಂಥಾದ್ದೊಂದು ಟ್ರೆಂಡ್ ಚಾಲ್ತಿಯಲ್ಲಿದೆ. ಆದರೆ, ಮ್ಯಾರೇಜ್ ಪಾರ್ಟಿಯಲ್ಲಿ ಅಂಥಾ ಸಿದ್ಧ ಸೂತ್ರವನ್ನು ಮೀರಿದ ಕಥೆಯಿದೆ ಎಂಬ ಸುಳಿವನ್ನಷ್ಟೇ ಚಿತ್ರತಂಡ ಜಾಹೀರು ಮಾಡಿದೆ. ಅಂದುಕೊಂಡಂತೆಯೇ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಮ್ಯಾರೇಜ್ ಪಾರ್ಟಿ ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಮೊದಲ ಹಾಡನ್ನು ಬಿಡುಯಗಡೆಗೊಳಿಸಲು ಚಿತ್ರತಂಡ ತಯಾರಿ ನಡೆಸುತ್ತಿದೆ.

ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ ಅವರು ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಸಾಹಿತ್ಯ, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿಷ್ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ಮುಂತಾದವರ ತಾರಾಗಣವಿರುವ ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗಾಣಲಿದೆಯಂತೆ.

]]>
<![CDATA[Ranabaali Movie Updates : ರಣಬಾಲಿ ಬಿಡುಗಡೆಗಾಗಿ ಭರ್ಜರಿ ತಯಾರಿ!]]> https://www.cinishodha.com/ranabali-movie-updates-17-09-2026/ https://www.cinishodha.com/ranabali-movie-updates-17-09-2026/ Wed, 14 Oct 2026 23:33:27 +0530 <![CDATA[Puttannana Katthe Movie : ಸಿದ್ದು ಪೂರ್ಣಚಂದ್ರ ಬೊಗಸೆಯಲ್ಲಿ ಮತ್ತೊಂದು ಅಚ್ಚರಿ!]]> https://www.cinishodha.com/puttannana-katthe-movie-16-09-2026/ https://www.cinishodha.com/puttannana-katthe-movie-16-09-2026/ Wed, 14 Oct 2026 10:35:43 +0530 <![CDATA[Upendra Limaye-Rishi : ಕನ್ನಡ ಚಿತ್ರರಂಗಕ್ಕೆ ಬಹುಭಾಷಾ ನಟನ ಆಗಮನ!]]> https://www.cinishodha.com/upendra-limaye-rishi-18-09-2026/ https://www.cinishodha.com/upendra-limaye-rishi-18-09-2026/ Wed, 14 Oct 2026 00:31:41 +0530 ನಾಯಕ ನಟನಾಗಿ ಅತ್ಯಂತ ಸೂಕ್ಷ್ಮವಾಗಿ ಕಥೆ, ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಲೇಹಂತ ಹಂತವಾಗಿ ಗೆಲುವು ಕಾಣುತ್ತಿರುವವರು ರಿಷಿ. ಕವಲುದಾರಿ ಮುಂತಾದ ಒಂದಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿರುವ ರಿಷಿಯೀಗ ಮತ್ತೊಂದು ಸಿನಿಮಾಕ್ಕಾಗಿ ತಯಾರಿ ಆರಂಭಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡಿರುವ ಕಿಶೋರ್ ಭಾರ್ಗವ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ವಿಶೇಷವೆಂದರೆ, ಸದರಿ ಸಿನಿಮಾ ಮೂಲಕ ಮರಾಠಿ ಚಿತ್ರರಂಗದ ಸ್ಟಾರ್ ನಟ, ಬಾಲಿವುಡ್ ಮಟ್ಟದಲ್ಲಿಯೂ ಹೆಸರಾಗಿರುವ ಉಪೇಂದ್ರ ಲಿಮಾಯೆ ಕನ್ನಡ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ.

ಇಂಥಾದ್ದೊಂದು ಸುದ್ದಿಯ ಮೂಲಕವೇ ರಿಷಿ ನಾಯಕನಾಗಿ ನಟಿಸಲಿರುವ ಈ ಚಿತ್ರವೀಗ ಸದ್ದು ಮಾಡಲಾರಂಭಿಸಿದೆ. ತನ್ನ ಮುಂದಿನ ಹೆಜ್ಜೆಗಾಗಿ ಸುದೀರ್ಘ ಕಾಲಾವಧಿಯಲ್ಲಿ ತಾಲೀಮು ನಡೆಸಿರುವ ರಿಷಿ ಪ್ರತಿಭಾನ್ವಿತ ನಿರ್ದೇಶರು ಮತ್ತು ಅದಕ್ಕೆ ಪೂರಕವಾದ ತಂಡದೊಂದಿಗೆ ಅಖಾಡಕ್ಕಿಳಿದಿದ್ದಾರೆ. ಇದೀಗ ತಾರಾಗಣದ ಆಯ್ಕೆ ಕಾರ್ಯ ಚಾಲ್ತಿಯಲ್ಲಿದೆ. ಒಂದಷ್ಟು ಮುಖ್ಯ ಪಾತ್ರಗಳತ್ತ ಗಮನ ಹರಿಸಿರುವ ಚಿತ್ರತಂಡ ಉಪೇಂದ್ರ ಲಿಮಾಯೆಯನ್ನು ಮುಖ್ಯ ಖಳನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದೆ. ಖುದ್ದು ಲಿಮಾಯೆ ಖುಷಿಯಿಂದ ಇ ಪಾತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಇದೀಗ ನಾಯಕಿಗಾಗಿ ಹುಡುಕಾಟ ಆರಂಭವಾಗಿದೆ. ಆ ಪಾತ್ರಕ್ಕೊಪ್ಪುವಂಥಾ ನಟಿಗಾಗಿ ಶೋಧ ಕಾರ್ಯ ಚಾಲ್ತಿಯಲ್ಲಿದೆ. ಹೊಸಬರಿಗೆ ಮಣೆ ಹಾಕುತ್ತಾರಾ? ಸ್ಟಾರ್ ನಟಿಯೇ ನಾಯಕಿಯಾಗುತ್ತಾರಾ ಎಂಬ ಪ್ರಶ್ನೆಗೆ ಇಷ್ಟರಲ್ಲಿಯೇ ಉತ್ತರ ಸಿಗಲಿದೆ. ಉಪೇಂದ್ರ ಲಿಮಾಯೆ ಈ ಸಿನಿಮಾದಲ್ಲಿ ನಟಿಸುತ್ತಿರೋದರಿಂದ ಕುತೂಹಲ ಇಮ್ಮಡಿಯಾಗಿದೆ. ಲಿಮಾಯೆ ಮರಾಠಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರೋದಲ್ಲದೇ, ಅನಿಮಲ್, ಪೆಡ್ಡಿಯಂಥಾ ಸಿನಿಮಾಗಳ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿಯೂ ಬಹುಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ.

ಹಂಗೇಸ್ ಸಾಯಿ ವಿಷನ್ಸ್ ಬ್ಯಾನರ್‌ನಡಿಯಲ್ಲಿ ವಸಂತ್ ಹಂಗೆ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಸಂಭಾಷಣೆ, ಸಾಹಿತ್ಯ ಮತ್ತು ಸಂಕಲನದ ಹೊಣೆಯನ್ನು ಸೋಮಶೇಖರ ವಹಿಸಿಕೊಂಡಿದ್ದಾರೆ. ಅನಂತ ಭಾರದ್ವಾಜ್ ಛಾಯಾಗ್ರಹಣ ಮತ್ತು ಸ್ಕಂದ ಕಶ್ಯಪ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿರಲಿದೆ. ಸದ್ಯದ ಮಟ್ಟಿಗೆ ತಾರಾಗಣದ ಆಯ್ಕೆ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಇದೇ ನವೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಆರಂಭಿಸಲು ಯೋಜನೆ ಸಿದ್ಧಗೊಂಡಿದೆ. ಈ ಸಿನಿಮಾದವ ಶೀರ್ಷಿಕೆ, ತಾರಾಗಣದ ವಿವರಗಳು ಹಂತ ಹಂತವಾಗಿ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿವೆ.

]]>