ಕಿರುತೆರೆ ಕಿಟಕಿ – Cini Shodha

director t n seetharam: ಸೀರಿಯಲ್ ಲೋಕದಲ್ಲಿ ಮತ್ತೆ ಮನ್ವಂತರ?
ಈವತ್ತಿಗೆ ಕನ್ನಡ ಕಿರುತೆ ಜಗತ್ತು ಪಕ್ಕಾ ಟಿಆರ್‌ಪಿ ಭೂಮಿಕೆಯಲ್ಲಿ ಕಾರ್ಯನಿರ್ವಹಿಸುತ್ತಾ ಪ್ರೇಕ್ಷಕ ವಲಯದಲ್ಲೊಂದು ರೇಜಿಗೆ ಮೂಡಿಕೊಳ್ಳುವಂತೆ ಮಾಡಿದೆ. ಅಲ್ಲಿ ಅದರದ್ದೇ ಆದ ಆರ್ಥಿಕ ಲೆಕ್ಕಾಚಾರಗಳಿದ್ದಾವೆ. ಇಂಥಾ ವಹಿವಾಟುಗಳ ಅಬ್ಬರದಲ್ಲಿ ಕ್ರಿಯೇಟಿವಿಟಿ ಎಂಬುದು ಹೆಚ್ಚೂಕಮ್ಮಿ ಕಳೆದೇ ಹೋಗಿದೆ. ಕಥೆಯ ಹುಟ್ಟೂ ಕೂಡಾ ವಾಹಿನಿ ಮಂದಿಯ ಕೈಯಲ್ಲಿ ಸಿಕ್ಕು ನರಳುವಂಥಾ ಸ್ಥಿತಿ ಕಿರುತೆರೆ ಜಗತ್ತನ್ನು ಮೆಲ್ಲಗೆ ಪ್ರೇಕ್ಷಕರಿಂದ ವಿಮುಖಗೊಳ್ಳುವಂತೆ ಮಾಡುತ್ತಿದೆ. ಕಾಸು ಕೊಟ್ಟ ಮಂದಿಯ ಕೈಯಲ್ಲಿ ರಿಮೋಟು ಇದೆಯಾದರೂ, ಯಾವ ಚಾನೆಲ್ಲು ಬದಲಾಯಿಸಿದರೂ ಮತ್ತದೇ ರೋಧನೆ. ಇಂಥಾ ಹೊತ್ತಿನಲ್ಲಿ ಕಿರುತೆರೆ ಪ್ರೇಕ್ಷಕರು ಹೊರಳಿಕೊಳ್ಳೋದು ದಶಕಗಳ ಹಿಂದಿನ ಧಾರಾವಾಹಿಗಳ ಜಮಾನದತ್ತ!

ಅಂಥಾ ಕಿರುತೆರೆ ಜಗತ್ತಿನ ಸುವರ್ಣ ಯುಗವೊಂದರ ಭಾಗವಾಗಿದ್ದುಕೊಂಡೇ, ಕಿರುತೆ ಪ್ರೇಕ್ಷಕರ ಅಭಿರುಚಿಯನ್ನು ಹೆಚ್ಚುವಂತೆ ಮಾಡಿದ್ದವರು ಟಿ.ಎನ್ ಸೀತಾರಾಮ್. ಮಾಯಾಮೃಗ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಸೀತಾರಾಮ್ ಅವರದ್ದು ಯಾವಾಗಲೂ ಭಿನ್ನ ಪಥ. ಈವತ್ತಿಗೂ ಅವರು ನಿರ್ದೇಶನ ಮಾಡಿದ ಧಾರಾವಾಹಿಗಳ ಟೈಟಲ್ ಸಾಂಗ್ ಅನ್ನು ಹುಡುಕಿ ಹುಡುಕಿ ಕೇಳುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಬಹುಶಃ ಅದು ಕನ್ನಡ ಕಿರುತೆರೆ ಜಗತ್ತಿನ ಪಾಲಿಗೆ ಎಂದಿಗೂ ಘಮ ಕಳೆದುಕೊಳ್ಳದ ಗಂಧವಿದ್ದಂತೆ. ಸೀತಾರಾಮ್ ನಿರ್ದೇಶನದ ಸೀರಿಯಲ್ಲುಗಳ ಟೈಟಲ್ ಸಾಂಗ್ ಕೇಳಿದರೇನೇ ತೊಂಬತ್ತರ ದಶಕದ ಆಚೀಚಿನ ಅನಿರ್ವಚನೀಯ ಅನುಭವವೊಂದು ಎದೆತುಂಬಿಕೊಳ್ಳುತ್ತೆ.

ಹೀಗೆ ಧಾರಾವಾಹಿ ನಿರ್ದೇಶನದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಟಿ.ಎನ್ ಸೀತಾರಾಮ್ ಇತ್ತೀಚಿನ ವರ್ಷಗಳಲ್ಲಿ ಕಿರುತೆರೆಯಿಂದ ದೂರ ಸರಿದಿದ್ದಾರೆ. ಇಂಥಾ ಘಳಿಗೆಯಲ್ಲಿ ಅವರು ಮರಳಿ ಬರಬೇಕೆಂಬ ನಿರೀಕ್ಷೆಯಿಟ್ಟುಕೊಂಡವರ ಸಂಖ್ಯೆ ದೊಡ್ಡದಿದೆ. ಅಂಥವರಿಗೆಲ್ಲ ಸಿಹಿ ಸುದ್ದಿಯೊಂದನ್ನು ಖುದ್ದು ಅವರೇ ಹಂಚಿಕೊಂಡಿದ್ದಾರೆ. ಜಗತ್ತಿನ ಕೆಲ ಅಪರೂಪದ ಕಾದಂಬರಿಗಳನ್ನು ದೃಶ್ಯೀಕರಿಸಿ, ಎಪಿಸೋಡುಗಳ ರೂಪದಲ್ಲಿ ಭೂಮಿಕಾಶ ಯೂಟ್ಯೂಬ್ ಚಾನೆಲ್ಲಿನಲ್ಲಿ ಬಿಡುಗಡೆಗೊಳಿಸೋದಾಗಿ ಹೇಳಿಕೊಂಡಿದ್ದಾರೆ. ಕಾದಂಬರಿ ಯಾವ ದೇಶದ್ದೇ ಆದರೂ ಅದನ್ನು ಈ ನೆಲದ ಸೊಗಡಿಗೆ ಒಗ್ಗಿಸಿ ಧಾರಾವಾಹಿಯಾಗಿ ಚಿತ್ರೀಕರಿಸೋದಾಗಿ ಸೀತಾರಾಮ್ ಅವರು ಹೇಳಿಕೊಂಡಿದ್ದಾರೆ. ಅಂತೂ ಅವರು ಕಿರುತೆರೆಯಿಂದ ಸದ್ಯಕ್ಕೆ ಅಂತರ ಕಾಯ್ದುಕೊಂಡಿದ್ದರೂ, ಯೂಟ್ಯೂಬ್ ಚಾನೆಲ್ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತೀರ್ಮಾನಿಸಿದಂತಿದೆ.

The post director t n seetharam: ಸೀರಿಯಲ್ ಲೋಕದಲ್ಲಿ ಮತ್ತೆ ಮನ್ವಂತರ? appeared first on Cini Shodha.

actress amulya: ಟಿಆರ್‌ಪಿ ದಾಹಕ್ಕೆ ಸರಕಾಯ್ತು ಕಣ್ಣೀರು!
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ರಿಯಾಲಿಟಿ ಶೋಗಳು ಕುಟುಂಬ ಸಮೇತರಾಗಿ ನೋಡುವ ಗುಣವನ್ನೇ ಕಳೆದುಕೊಂಡಿವೆ. ಡಬಲ್ ಮೀನಿಂಗ್ ಡೈಲಾಗುಗಳು, ಆಂಕರುಗಳೆನ್ನಿಸಿಕೊಂಡವರ ಅತಿರೇಕದ ವರ್ತನೆ ಮತ್ತು ಏನನ್ನೂ ಬಿಡದಂತೆ ಟಿಆರ್‌ಪಿಗಾಗಿ ಬಾಯಿ ಬಿಡುವ ಹೀನ ಮನಃಸ್ಥಿತಿ… ಇಂಥಾ ದಾರಿದ್ರ್ಯವೇ ಸದ್ಯದ ಮಟ್ಟಿಗೆ ಕನ್ನಡದ ಕಿರುತೆರೆ ಜಗತ್ತಿನಲ್ಲಿ ತಾಂಡವವಾಡುತ್ತಿದೆ. ಅದರಲ್ಲಿಯೂ ಒಂದು ಕಾಲಕ್ಕೆ ಹೊಸಾ ಥರದ ಕಾರ್ಯಕ್ರಮಗಳ ಮೂಲಕ ವಿಶ್ವಾಸ ಗಿಟ್ಟಿಸಿಕೊಂಡಿದ್ದ ಜೀ ಕನ್ನಡ ವಾಹಿನಿಯೀಗ ಅಭಿಮಾನಿ ಪ್ರೇಕ್ಷಕ ವರ್ಗವನ್ನೇ ಮುಜುಗರಕ್ಕೀಡು ಮಾಡಿದೆ.

ಈ ಹಿಂದೆ ಭರ್ಜರಿ ಬ್ಯಾಚುಲರ್ಸ್ ಅಂತೊಂದು ಪಕ್ಕಾ ಬರಗೆಟ್ಟ ಶೋವೊಂದು ಇದೇ ವಾಹಿನಿಯಲ್ಲಿಮ ಪ್ರಸಾರವಾಗಿತ್ತು. ಮಾನವಂತರು ನೋಡಲು ಹಿಂದೇಟು ಹಾಕುವಂತಿದ್ದ ಆ ಶೋ ಕಡೆಗೂ ಮುಗಿದಿದೆ. ಅದರ ಬ ಎನ್ನಲ್ಲಿಯೇ ನಾವು ನಮ್ಮವಬರು ಎಂಬ ಹೊಸಾ ಶೋ ಶುರುವಾಗಿದೆ. ಇದರಲ್ಲಿ ಅಮೂಲ್ಯ, ತಾರಾ ಮತ್ತು ಶರಣ್ ಥರದವರು ಜಡ್ಜುಗಳಾಗಿದ್ದರಿಂದ ಕೊಂಚ ನಿರೀಕ್ಷೆ ಇತ್ತು. ಆದರೆ, ಈ ಶೋ ಆರಂಭದಲ್ಲಿಯೇ ಪಕ್ಕಾ ಟಿಆರ್‍ಪಿ ಹಿಂಡಿಕೊಳ್ಳುವ ಪಥದಲ್ಲಿ ಹೆಜ್ಜೆಯಿಟ್ಟಿದೆ. ತೀರ್ಪುಗಾರಳಾಗಿ ಕುಂತಿರೋ ಅಮುಲ್ಯಾಳನ್ನು ವಿನಾಕಜಾರಣ ಅಳಿಸುವ ಮೂಲಕ ಮೈಲೇಜು ಗಿಟ್ಟಿಸಿಕೊಳ್ಳಲು ನೋಡಿ ಪ್ರೇಕ್ಷಕರಿಂ ದ ಹೀನಾಮಾನ ಉಗಿಸಿಕೊಂಡಿದೆ.

ರಕ್ಷಾ ಬಂಧನದಂದು ಮರೆಯಾದ ಅಮೂಲ್ಯಾ ಅಣ್ಣನ ಎಐ ವೀಡಿಯೋ ಮೂಲಕ ಈ ಶೋನ ಮಂದಿ ಅಮೂಲ್ಯಾಗೆ ಸರ್‌ಪ್ರೈಸ್ ಕೊಟ್ಟಿದೆ. ಅದನ್ನು ಕಂಡು ಅಮೂಲ್ಯಾ ಭಾವಿಕಳಾಗಿ ಅತ್ತಿದ್ದಾಳೆ. ಅಣ್ಣನನ್ನು ಕಳೆದುಕೊಂಡಸ ನೋವಿನ್ನೂ ಆಕೆಯಲ್ಲಿ ಹಸಿಯಾಗಿದೆ. ಇಂಥಾ ಹೊತ್ತಿನಲ್ಲಿ ಅದನ್ನು ಮತ್ತೆ ನೆನಪಿಸಿ ಕಣ್ಣೀರುಗರೆಸಿ, ಟಿಆರ್‌ಪಿ ಗಿಟ್ಟಿಸುವ ವಾಹಿನಿಯ ಪ್ಲಾನಿಗೆ ಲಾತಾ ಬಿದ್ದಿದೆ. ಇಂಥಾ ಶೋವನ್ನು ಆಸ್ಥಾನ ಕಲಾವಿದ ನಿರಂಜನ್ ದೇಶಪಾಂಡೆ ನಡೆಸಿಕೊಡುತ್ತಿದ್ದಾನೆ. ಈ ಹಿಂದೆ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಈತ ಜಾನ್ ಸೀನ್ಸ್‌ನ ಕಸಿನ್ ಬ್ರದರ್‌ನಂತೆ ತೊನೆಯಲು ಹೋಗಿ ಉಗಿಸಿಕೊಂಡಿದ್ದ. ಇಂಥಾ ಮಹಾನ್ ನಿರೂಪಕನ ಸಾರಥ್ಯದಲ್ಲಿ ಇನ್ನೂ ಎಂತೆಂಥಾ ಅಸಹ್ಯಗಳನ್ನು ನೋಡೋದಿದೆಯೋ…

The post actress amulya: ಟಿಆರ್‌ಪಿ ದಾಹಕ್ಕೆ ಸರಕಾಯ್ತು ಕಣ್ಣೀರು! appeared first on Cini Shodha.

deepika das: ಸೋಶಿಯಲ್ ಮೀಡಿಯಾಗೆ ಸೀಮಿತವಾದರೇ ದೀಪಿಕಾ ದಾಸ್?
ಕಿರುತೆರೆಯಲ್ಲಿ ಒಂದು (serial) ಧಾರಾವಾಹಿ ಯಶಸ್ಸಿನ ಲಯ ಹಿಡಿದು ಬಿಟ್ಟರೆ ಸಾಕು; ಅದರ ಲೀಡ್ ರೋಲ್ ಗಳಲ್ಲಿ ಕಾಣಿಸಿಕೊಂಡವರ ನಸೀಬೇ ಬದಲಾಗಿ ಬಿಡೋದಿದೆ. ಸಾಕಷ್ಟು ಮಂದಿ ಅಂಥಾ ಯಶಸ್ಸಿನ ಕಂದೀಲು, ಹಿರಿತೆರೆಯ ದಿಕ್ಕನ್ನು ಬೆಳಗಿ ಬಿಡುತ್ತದೆಂಬ ನಂಬಿಕೆ ಹೊಂದಿರುತ್ತಾರೆ. ಅದು ಕೆಲವೊಮ್ಮೆ ನಿಜವಾಗಿದೆ. ಹಲವಾರು ಬಾರಿ ಸುಳ್ಳಾಗಿದೆ. ಹಾಗೆ ನಿರೀಕ್ಷೆಯೆಲ್ಲ ಕಮರಿದ ಬಳಿಕ ಕೆಲ ನಟ ನಟಿಯರು ಗೊಂದಲದ ನಡುವೆಯೇ ಮಂಕಾಗೋದೂ ಇದೆ. ಆಯ್ಕೆಯ ಗೊಂದಲ, ಸಣ್ಣಗಿನ ಬಿಗುಮಾನಗಳೆಲ್ಲವೂ ಸೇರಿಕೊಂಡು ನೇಪಥ್ಯಕ್ಕೆ ಸರಿದವರ ಸಂಖ್ಯೆಯೂ ಸಾಕಷ್ಟಿದೆ. ಒಂದು ಕಾಲದಲ್ಲಿ (naagini serial) ನಾಗಿಣಿಯಾಗಿ ಬುಸುಗುಡುತ್ತಾ, ಕಿರುತೆರೆ ಪ್ರೇಕ್ಷಕರನ್ನೆಲ್ಲ ಅಪಾದಮಸ್ತಕ ಆವರಿಸಿಕೊಂಡಿದ್ದರಲ್ಲಾ ದೀಪಿಕಾ ದಾಸ್? (deepika das) ಆಕೆಯೂ ಅಂಥಾ ನೇಪಥ್ಯದ ಪಥದಲ್ಲಿದ್ದಾರಾ ಅಂತೊಂದು ಅನುಮಾನ ಖುದ್ದು ಅಭಿಮಾನಿಗಳನ್ನೇ ಕಾಡುತ್ತಿದೆ.

ಕೊಂಚ ಅಂತರ್ಮುಖಿಯಂತೆ ಕಾಣುತ್ತಾ, ಅಹಮ್ಮಿಕೆಯಂತೆ ಗೋಚರಿಸೋ ಪದರಿನೊಳಗೊಂದು ಮಮಕಾರವನ್ನು ಕಾಪಿಟ್ಟುಕೊಂಡಿರುವಾಕೆ ದೀಪಿಕಾ ದಾಸ್. ಬಿಗ್ ಬಾಸ್ ಶೋಗಳ ಮೂಲಕ ಆಕೆಯ ವ್ಯಕ್ತಿತ್ವದ ಮತ್ತೊಂದು ಮಜಲು ಪ್ರೇಕ್ಷಕರೆದುರು ಜಾಹೀರಾಗಿತ್ತು. ಹಾಗೆ ದೀಪಿಕಾ ಬಿಗ್ ಬಾಸ್ ಶೋಗೆ ಬಂದ ನಂತರದಲ್ಲಿ ಅವಕಾಶಗಳು ಸಾಲುಗಟ್ಟೋದೂ ಇದೆ. ಪ್ರತಿಭೆ ಸೇರಿದಂತೆ, ಎಲ್ಲವನ್ನೂ ಹೊಂದಿರುವ ದೀಪಿಕಾ ಕೂಡಾ ಬಿಗ್ ಬಾಸ್ ಬಳಿಕ ಮಿಂಚಬಹುದೆಂದು ಅಂದುಕೊಳ್ಳಲಾಗಿತ್ತು. ಆದರೆ, ಬರಬರುತ್ತಾ ಅದೂ ಸುಳ್ಳಾದಂತಿದೆ. ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ದೀಪಿಕಾ ಬರೀ ಸೋಶಿಯಲ್ ಮೀಡಿಯಾಗಳಿಗೆ ಮಾತ್ರವೇ ಸೀಮಿತವಾದಂತಿದೆ!

ಬಿಗ್ ಬಾಸ್ ಶೋನಿಂದ ಹೊರ ಬಂದ ನಂತರ ದೀಪಿಕಾ ಮತ್ತು ಸಹ ಸ್ಪರ್ಧಿಯಾಗಿದ್ದ ಶೈನ್ ಶೆಟ್ಟಿ ಸುತ್ತ ಒಂದಷ್ಟು ರೂಮರುಗಳು ಹಬ್ಬಿಕೊಂಡಿದ್ದವು. ಅವರಿಬ್ಬರು ಇನ್ನೇನು ಮದುವೆಯಾಗಿಯೇ ಬಿಡುತ್ತಾರೆಂಬರ್ಥದಲ್ಲಿಯೂ ಕಪೋಲಕಲ್ಪಿತ ಸುದ್ದಿಗಳು ಹರಿದಾಡಿದ್ದವು. ಅದರ ಹಿಂದೆ ಎಂಥಾ ಕಿಸುರಿದ್ದರೂ, ಅಂಥಾ ಅಂತೆಕಂತೆಗಳೇ ದೀಪಿಕಾಳು ಒದಷ್ಟು ಕಾಲ ಚಾಲ್ತಿಯಿಟ್ಟಿದ್ದಂತೂ ಸತ್ಯ. ಆ ನಂತರದಲ್ಲಿ ದೀಪಿಕಾ ಅಲ್ಲಿಲ್ಲಿ ರೌಂಡು ಹೊಡೆಯೋದು, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದೆಲ್ಲ ನಡೆಯುತ್ತಿದೆ. ಅದರ ಸುತ್ತ ಒಂದಷ್ಟು ಸುದ್ದಿಗಳೂ ಆಗುತ್ತಿವೆ. ಆದರೆ, ಆಕೆಯ ವೃತ್ತಿ ಬದುಕಿನ ದಿಕ್ಕು ದೆಸೆಗಳು ಮಾತ್ರ ಈ ಕ್ಷಣಕ್ಕೂ ಸ್ಪಷ್ಟವಿಲ್ಲ.

ಇದೆಲ್ಲವನ್ನೂ ನೋಡಿದರೆ, ದೀಪಿಕಾ ದಾಸ್ ಗೆ ಅವಕಾಶಗಳ ಕೊರತೆ ಕಾಡುತ್ತಿದೆಯಾ ಅಂತೊಂದು ಗುಮಾನಿ ಸಹಜವಾಗಿಯೇ ಕಾಡುತ್ತದೆ. ಒಂದು ಕೋನದಿಂದ ಅದರಲ್ಲಿ ಸತ್ಯವಿರುವಂತೆಯೂ ಭಾಸವಾಗುತ್ತದೆ. ಸಿನಿಮಾ ರಂಗದಲ್ಲಿ ನಾಯಕಿಯಾಗಿ, ಒಳ್ಳೆ ಪಾತ್ರಗಳಲ್ಲಿ ಮಿಂಚುವ ಅವಕಾಶಗಳ ದೀಪಿಕಾ ಮುಂದಿದದವು. ಆದರೆ ಅವ್ಯಾವುವೂ ಫಲಿಸಿದಂತಿಲ್ಲ. ಈ ಹಿಂದೆಯೂ ಒಂದಷ್ಟು ಸಿನಿಮಾಗಳಲ್ಲಿ ದೀಪಿಕಾ ನಟಿಸಿದ್ದರು. ಆದರೆ, ಅವ್ಯಾವುವೂ ಬರಖತ್ತಾಗಿರಲಿಲ್ಲ. ಇದೀಗ ಮತ್ತೆಇರುತೆರೆಗೆ ಮರಳಲು ಆಕೆಗೆ ಇಷ್ಟವಾಗುತ್ತಿಲ್ಲ ಅನ್ನಿಸುತ್ತಿದೆ. ಈ ನಡುವೆ ಅಂತರಪಟ ಅಂತೊಂದು ಧಾರಾವಾಹಿಯಲ್ಲಿ ಆಕೆ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಅದೂ ಕೂಡಾ ನೋಡ ನೋಡುತ್ತಲೇ ಗಾಯಬ್ ಆಗಿದೆ. ಇದೆಲ್ಲ ಏನೇ ಇದ್ದರೂ ಕಿರುತೆರೆಯಲ್ಲಿ ಗೆದ್ದು ಬುಸುಗುಟ್ಟಿದ್ದ ನಾಗಿಣಿ, ಹಿರಿತೆರೆಯಲ್ಲಿಯೂ ಗೆಲುವಿನ ಹಾದಿ ಹಿಡಿಯುವಂತಾಗಲಿ ಎಂಬುದು ಅಭಿಮಾನಿಗಳ ಬಯಕೆ!

The post deepika das: ಸೋಶಿಯಲ್ ಮೀಡಿಯಾಗೆ ಸೀಮಿತವಾದರೇ ದೀಪಿಕಾ ದಾಸ್? appeared first on Cini Shodha.

vaishnavi gowda: ಮತ್ತೆ ಕಿರುತೆರೆಗೆ ಮರಳಿದಳು ಅಗ್ನಿಸಾಕ್ಷಿ ಸನ್ನಿಧಿ!
ಅಗ್ನಿಸಾಕ್ಷಿ (agni sakshi) ಅಂತೊಂದು ಸೀರಿಯಲ್ ಮೂಲಕವೇ ಅಗಾಧ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದಾಕೆ (vaishnavi gowda) ವೈಷ್ಣವಿ ಗೌಡ. ಕಿರುತೆರೆ ಪ್ರೇಕ್ಷಕರು ಯಾವ ಪರಿಯಾಗಿ ಆ ಧಾರಾವಾಹಿಯನ್ನು ಅಪ್ಪಿಕೊಂಡಿದ್ದರೆಂದರೆ, ಅದರ ಪಾತ್ರಗಳನ್ನು ತಮ್ಮ ನಡುವಿನ ಜೊತೆಗಾರರೆಂಬಂತೆ ಭಾವಿಸಿಕೊಂಡಂತಿದ್ದರು. ಅಂಥಾದ್ದೊಂದು ಧಾರಾವಾಹಿಯ ನಾಯಕಿಯಾಗಿ, ಸಾದಾ ಸೀದ ಹುಡುಗಿಯಾಗಿ ನಟಿಸಿದ್ದ ವೈಷ್ಣವಿ (vaishnavi) ಅಪಾರ ಪ್ರಮಾಣದಲ್ಲಿ ಅಭಿಮಾನಿ ಬಳಗವನ್ನೂ ತನ್ನದಾಗಿಸಿಕೊಂಡಿದ್ದಳು. ತೀರಾ ಇತ್ತೀಚಿನವರೆಗೂ ಆಕೆಯ ನಿಜವಾದ ಹೆಸರೇ ಅಭಿಮಾನಿಗಳ ಪಾಲಿಗೆ ಅಪರಿಚಿತವಾಗಿತ್ತು. ಯಾಕೆಂದರೆ, ಆಕೆ ಎಲ್ಲರ ಪಾಲಿಗೆ ಅಗ್ನಿಸಾಕ್ಷಿಯ (agnisakshi sannidhi) ಸನ್ನಿಧಿಯಾಗಿ ಆಪ್ತಳಾಗಿದ್ದಳು!

ಇಂಥಾ ವೈಷ್ಣವಿ ಚಿತ್ರರಂಗಕ್ಕೆ ನಾಯಕಿಯಾಗಿ ಕಾಲಿಟ್ಟಾಗ ದೊಡ್ಡ ಮಟ್ಟದ ಗೆಲುವು ಕೈ ಹಿಡಿಯಬಹುದೆಂದೇ ಅನೇಕರು ಭಾವಿಸಿದ್ದದ್ದು ಸುಳ್ಳಲ್ಲ. ಅದಕ್ಕೆ ಸರಿಯಾಗಿ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಅವತರಿಸಿದ್ದ ಆಕೆಗೇಕೋ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವು ಕೈ ಹಿಡಿಯಲಿಲ್ಲ. ಅದು ಸಿನಿಮಾ ವಿಚಾರದಲ್ಲಿ ವೈಷ್ಣವಿಗೆ ಎದುರಾದ ಸೋಲಾ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರ ಸಿಗುವುದಿಲ್ಲ. ವಷ್ಣವಿಯ ಮುಂದೆ ಅದೃಷ್ಟ ಪರೀಕ್ಷೆಗೆ ಇನ್ನೊಂದಷ್ಟು ಅವಕಾಶಗಳು ಇದ್ದಂತಿದೆ. ವಾತಾವರಣ ಹೀಗಿರುವಾಗಲೇ ಆಕೆ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾಳೆ; ಸೀತಾ ರಾಮ ಎಂಬ ಹೊಸಾ ಬಗೆಯ ಕಥನವನ್ನೊಳಗೊಂಡಿರುವ ಧಾರಾವಾಹಿಯ ಮೂಲಕ…

ಅಂದಹಾಗೆ, ಸೀತಾರಾಮ ಧಾರಾವಾಹಿ ಇದೇ ಜೂನ್ 17ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಟಿಆರ್‍ಪಿಯಲ್ಲಿ ಮುಂಚೂಣಿಯಲ್ಲಿರುವ ಭೂಮಿಗೆ ಬಂದ ಭಗವಂತ ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿಯೇ ಸೀತಾರಾಮ ಪ್ರೇಕ್ಷಕರ ಮುಂದೆ ಬರಲಿದೆ. ಈ ಹಿಂದೆ ಮಂಗಳಗೌರಿ ಮದುವೆ ಧಾರಾವಾಹಿಯ ನಾಯಕನಾಗಿದ್ದ ಗಗನ್ ಈ ಧಾರಾವಾಹಿಯ ನಾಯಕ. ನಾಯಕಿಯಾಗಿ ವೈಷ್ಣವಿ ಸಾಥ್ ಕೊಟ್ಟಿದ್ದಾಳೆ. ಗಗನ್ ಮಂಗಳಗೌರಿ ಧಾರಾವಾಹಿಯಲ್ಲಿ ಚೆಂದಗೆ ನಟಿಸಿದ್ದನಾದರೂ ಕಮಂಗಿ ನಿರ್ದೇಶಕನ ಹುಚ್ಚಾಟಕ್ಕೆ ಸಿಕ್ಕು ಆ ಸೀರಿಯಲ್ಲು ಮರ್ಯಾದೆ ಕಳೆದುಕೊಂಡಿತ್ತು. ಟಿಆರ್‍ಪಿ ಹುಚ್ಚಿಗೆ ಬಿದ್ದು ಆಡಿದ ಆಟಗಳಿಂದಾಗಿ ಮಧ್ಯದಲ್ಲೇ ಗಗನ್ ಎದ್ದು ನಡೆದಿದ್ದ. ಆ ಬಳಿಕ ಸುದೀಘ ಕಾಲ ಮರೆಯಾಗಿದ್ದ ಗಗನ್ ಈಗ ರಾಮನಾಗಿ ಮರಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜೀ ಕನ್ನಡ ವಾಹಿನಿ ಬೇರೆ ತೆರೆನಾದ ಕಥೆಗಳಿಗೆ ಮಣೆ ಹಾಕುತ್ತಿದೆ. ಅತ್ತೆ ಸೊಸೆ ಜಗಳ, ಜುಟ್ಟಿನ ಕಾಳಗದ ಹೊರತಾಗಿ ಭಿನ್ನ ಪಥದಲ್ಲಿ ಹೆಜ್ಜೆ ಇಡುತ್ತಿದೆ. ಭೂಮಿಗೆ ಬಂದ ಭಗವಂತ, ಅಮೃತಧಾರೆಯಂಥಾ ಸೀರಿಯಲ್ಲುಗಳು ಆ ಬದಲಾವಣೆಗೆ ಉದಾಹರಣೆಯಾಗಿ ನಿಲ್ಲುತ್ತವೆ. ಸೀತಾರಾಮ ಧಾರಾವಾಹಿ ಕೂಡಾ ವಿಶಿಷ್ಟ ಕಥೆಯನ್ನೊಳಗೊಂಡಿರುವ ಲಕ್ಷಣಗಳು ದಟ್ಟವಾಗಿಯೇ ಗೋಚರಿಸುತ್ತಿವೆ. ವೈಷ್ಣವಿ ಪಾಲಿಗೂ ಕೂಡಾ ಈ ಧಾರಾವಾಹಿ ಬಹುಮುಖ್ಯ. ಯಾಕೆಂದರೆ, ಬಿಗ್‍ಬಾಸಿಗೆ ಹೋಗಿ ಬಂದರೂ ಹಿರಿತೆರೆಯಲ್ಲಿ ಆಕೆಗೆ ನೆಲೆಕಂಡುಕೊಳ್ಳುವ ಅವಕಾಶಗಳು ಸಿಕ್ಕಿರಲಿಲ್ಲ. ಇದೀಗ ಆಕೆ ಸೀತೆಯಾಗಿ ಮತ್ತೆ ಸೀರಿಯಲ್ ಲೋಕಕ್ಕೆ ಮರಳಿದ್ದಾಳೆ. ಮುಂದೇನಾಗುತ್ತದೆಂಬುದಕ್ಕೆ ಕಾಲವೇ ಉತ್ತರಿಸಲಿದೆ!

The post vaishnavi gowda: ಮತ್ತೆ ಕಿರುತೆರೆಗೆ ಮರಳಿದಳು ಅಗ್ನಿಸಾಕ್ಷಿ ಸನ್ನಿಧಿ! appeared first on Cini Shodha.

actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!
ಕಿರುತೆರೆಯಲ್ಲಿ ಒಂದಷ್ಟು ಪ್ರಸಿದ್ಧಿ ಪಡೆಯುತ್ತಲೇ ಏಕಾಏಕಿ ಹಿರಿತೆರೆಗೆ ಲಗ್ಗೆಯಿಡೋದು ಅನೇಕ ನಟ ನಟಿಯರ ಮಹಾ ಕನಸು. ಆದರೆ, ಆ ಯೋಗ ಮಾತ್ರ ಅಷ್ಟು ಸಲೀಸಾಗಿ ಎಲ್ಲರಿಗೂ ದಕ್ಕುವಂಥಾದ್ದಲ್ಲ. ಆದರೆ, ಹಿರಿತೆರೆಯಲ್ಲಿ (film industry) ಮಿಂಚುವ ಸೆಳೆತವಿರುತ್ತದಲ್ಲಾ? ಅದು ನಾನಾ ಆಟ ಆಡಿಸುತ್ತೆ. ಕೆಲವರನ್ನು ಹತ್ತಿದ ಏಣಿಯನ್ನೇ ಒದ್ದು ಕೆಡವಿ ಬಿಡುವಂತೆಯೂ ಪ್ರೇರೇಪಿಸುತ್ತೆ. ಹಾಗೆ ತಿಮಿರು ತೋರಿಸಿ ಸೀರಿಯಲ್ಲುಗಳಿಂದ ಅರ್ಧಕ್ಕೇ ಎದ್ದು ಬಂದವರನೇಕರು ಹೇಳ ಹೆಸರಿಲ್ಲದಂತೆ ಮಾಯವಾಗಿದ್ದಾರೆ. ಇನ್ನೂ ಕೆಲ ಮಂದಿ ಗಾಂಧಿನಗರದ ಸಂದಿಗೊಂದಿಗಳಲ್ಲಿ ಅಂತರ್‍ಪಿಶಾಚಿಗಳಂತೆ ಅಂಡಲೆಯುತ್ತಿದ್ದಾರೆ. ಈ ಹುಡುಗಿ (ramola) ರಮೋಲಾ ಕನ್ನಡತಿ (kannadathi) ಎಂಬ ಹಿಟ್ ಸೀರಿಯಲ್ಲಿನಿಂದ ಇದ್ದಕ್ಕಿಂದಂತೆ ಮಾಯವಾಗಿ, ಸಿನಿಮಾದಲ್ಲಿ ಪ್ರತ್ಯಕ್ಷಳಾದಾಗ ಬಹುತೇಕರು ಈಕೆಯೂ ಸೋತವರ ಸಾಲಿಗೆ ಸೇರುತ್ತಾಳೆಂದೇ ಅಂದುಕೊಂಡಿದ್ದರು. ಆದರೆ, ಆಕೆಯೀಗ ಅಕ್ಷರಶಃ ಅವಕಾಶಗಳ ಒಡ್ಡೋಲಗದಲ್ಲಿ ಮಿಂಚಲಾರಂಭಿಸಿದ್ದಾಳೆ!

ವರ್ಷದ ಹಿಂದೆ ಕನ್ನಡತಿ ಅಂತೊಂದು ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಪ್ರತಿಭಾನ್ವಿತ ನಟಿ ರಂಜನಿ ರಾಘವನ್ ಆ ಸೀರಿಯಲ್ಲಿನ ನಾಯಕಿಯಾಗಿ ನಟಿಸಿದ್ದಳು. ಆಕೆಗೆ ಸದಾ ಕಾಟ ಕೊಡುವ ಖಡಕ್ ವಿಲನ್ ಸಾನಿಯಾ ಆಗಿ ಕಾಣಿಸಿಕೊಂಡಿದ್ದಾಕೆ ರಮೋಲಾ. ಹಾಗೆ ನೋಡಿದರೆ, ಈ ಸೀರಿಯಲ್ಲು ರಂಜಿನಿ ರಾಘವನ್ ಪಾಲಿಗೆ ಮತ್ತಷ್ಟು ಖ್ಯಾತಿ ತಂದು ಕೊಟ್ಟಿತ್ತು. ರಮೋಲಾ ನಿರ್ವಹಿಸಿದ್ದ ಸಾನಿಯಾ ಎಂಬ ಪಾತ್ರ ರಂಜಿನಿಯನ್ನು ಸರಿಗಟ್ಟುವಂತೆ ಪ್ರಚಾರ ಪಡೆದುಕೊಂಡಿತ್ತು. ವಿಲನ್ ಪಾತ್ರದ ಮೂಲಕವೂ ರಮೋಲಾ ತನ್ನ ಕ್ಯೂಟ್ ಲುಕ್ಕು, ಅಭಿನಯದಿಂದ ಮನ ಗೆದ್ದಿದ್ದಳು.

ಆ ಸೀರಿಯಲ್ಲು ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ರಮೋಲಾ ಸಾನಿಯಾ ಪಾತ್ರದಿಂದ ನಿರ್ಗಮಿಸಿದ್ದಳು. ಸಾಮಾನ್ಯವಾಗಿ ಇಂಥಾ ಪಾತ್ರಗಳಲ್ಲಿ ಮಿಂಚಿದ ಕಲಾವಿದರು ಬದಲಾವಣೆಯಾದಾಗ ಸ್ವಲ್ಪ ಸಮಯದ ನಂತರ ಪ್ರೇಕ್ಷಕರು ಹೊಸಬರಿಗೆ ಹಿಒಂದಿಕೊಳ್ಳುತ್ತಾರೆ. ಆದರೆ ಕನ್ನಡತಿ ಅಭಿಮಾನಿಗಳು ಮಾತ್ರ ಸಾನಿಯಾ ಪಾತ್ರಕ್ಕೆ ಸೂಟ್ ಆಗೋದು ರಮೋಲಾ ಮಾತ್ರ ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು. ಆದರೆ, ಅಂಥಾ ಯಶಸ್ವಿ ಪಾತ್ರ ಬಿಟ್ಟು ಹೋದ ರಮೋಲಾ ಚಿತ್ರರಂಗದಲ್ಲಿ ಬರಖತ್ತಾಗೋದು ಕಷ್ಟವಿದೆ ಎಂದೇ ಅನೇಕರು ಅಂದುಕೊಂಡಿದ್ದರು. ಅದರ ಬೆನ್ನಿಗೇ ಈಕೆ ರಿಚ್ಚಿ ಚಿತ್ರದಲ್ಲಿ ನಟಿಸುತ್ತಿದ್ದಾಂಬ ಸುದ್ದಿ ಬಂದಿತ್ತು. ಆ ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅದರ ಹಾಡೊಂದು ಬಿಡುಗಡೆಯಾಗಿ ರಮೋಲಾ ರೊಮ್ಯಾಂಟಿಕ್ ಮೂಡಲ್ಲಿ ಮಿಂಚಿದ್ದಾಳೆ. ಅದಾಗಲೇ ರಮೋಲಾ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

ಕೇವಲ ಚಂದ, ವೈಯ್ಯಾರಗಳಿದ್ದರೆ ಸಾಲದು; ಸಿಕ್ಕ ಪಾತ್ರಗಳನ್ನು ಆವಾಹಿಸಿಕೊಳ್ಳುವ ಕಸುವಿರುವ ಕಲಾವಿದರು ಮಾತ್ರವೇ ಕಿರುತೆರೆ, ಚಿತ್ರರಂಗದಲ್ಲಿ ಭದ್ರವಾದ ನೆಲೆ ಕಂಡುಕೊಳ್ಳಲು ಸಾಧ್ಯ. ಅಂಥಾ ಪ್ರತಿಭೆ ಖಂಡಿತವಾಗಿಯೂ ರಮೋಲಾಗಿದೆ. ಈಕೆ ಕನ್ನಡತಿ ಧಾರಾವಾಹಿ ಬಿಟ್ಟು ಬಂದಾಗ `ಆ ಹುಡುಗಿಗೆ ದುರಂಹಕಾರ ಹೆಚ್ಚು’ ಎಂಬಂಥಾ ರೂಮರುಗಳು ಹಬ್ಬಿಕೊಂಡಿದ್ದವು. ಆದರೆ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಮೋಲ ಮೊದಲ ಚಿತ್ರವನ್ನು ಯಶಸ್ವಿಯಾಗಿ ಮುಗಿಸಿಕೊಂಡಿದ್ದಾಳೆ. ಆ ಚಿತ್ರದ ಭಾಗವಾಗಿದ್ದವರ ಟೀಮಿನ ಮತ್ತೊಂದು ಚಿತ್ರಕ್ಕೂ ಆಯ್ಕೆಯಾಗಿದ್ದಾಳೆ. ಚಿತ್ರ ತಂಡದಲ್ಲಿ ಆಕೆಯ ಬಗ್ಗೆ ಮೆಚ್ಚುಗೆಯಿದೆಯೇ ಹೊರತು, ಯಾವ ತಕರಾರುಗಳೂ ಇಲ್ಲ. ಈ ಹುಡುಗಿಯ ಸ್ಪೀಡು ನೋಡಿದರೆ, ನಿಸ್ಸಂದೇಹವಾಗಿ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ಕಂಡುಕೊಳ್ಳುವಂತಿದೆ!

The post actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ! appeared first on Cini Shodha.