ಜಾಪಾಳ್ ಜಂಕ್ಷನ್ – Cini Shodha

Krishi Thapanda: ಕೃಷಿಗೆ ಮತ್ತೊಂದು ಮಂಡೆಬಿಸಿ!
ಆರಂಭಿಕವಾಗಿ ನಗುಮೊಗದಿಂದ, ನಟಿಸಿದ ಬೆರಳೆಣಿಕೆಯಷ್ಟು ಪಾತ್ರಗಳಿಂದ ಸಿನಿಮಾ ಮತ್ತು ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗಿದ್ದಾಕೆ ಕೃಷಿ ತಾಪಂಡ. ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಮಕಾಣಿಸಿಕೊಳ್ಳುತ್ತಿದ್ದ ಈ ಹುಡುಗಿ ಏಕಾಏಕಿ ವರ್ಷಗಟ್ಟಲೆ ಗಾಯಬ್ ಆಗಿ ಬಿಟ್ಟಿದ್ದಳು. ಆ ಅವಧಿಯಲ್ಲೀಕೆ ಮಾಡಿಕೊಂಡಿದ್ದದ್ದು ಪಕ್ಕಾ ಭಾನಗಡಿ ಎಂಬುದು ಜಾಹೀರಾದದ್ದು ರೊಕ್ಕದ ಕುಳ ಅರವಿಂದ್ ವೆಂಕಟೇಶ ರೆಡ್ಡಿ ಎಂಬಾತ ಸಂತ್ರಸ್ತನ ಅವತಾರದಲ್ಲಿ ಪ್ರತ್ಯಕ್ಷನಾದಾಗಲೇ. ಹಾಗೆ ಮಾಧ್ಯಮಗಳೆದುರು ಬಂದಿದ್ದ ರೆಡ್ಡಿ ಕೃಷಿ ಮಾಡಿದ್ದಳೆನ್ನಲಾದ ದೋಖಾ ಪುರಾಣವನ್ನು ಇಂಚಿಂಚಾಗಿ ಹಂಚಿಕೊಂಡಿದ್ದ. ಆತನ ಮಾತುಗಳಲ್ಲಿ ಪ್ರಾಮಾಣಿಕತೆಯ ಪಸೆ ಇದ್ದುದರಿಂದ, ಕೃಷಿಯ ಕಡೆಯಿಂದಾಗಿರೋ ತಪ್ಪುಗಳೇ ಢಾಳಾಗಿದ್ದದ್ದರಿಂದ ನಗುಮೊಗದ ಹಿಂದೆಯೂ ಕರಾಳ ಆಸ್ತವವಿರಬಹುದೆಂಬ ಅಂದಾಜು ಎಲ್ಲರಿಗೂ ಸಿಕ್ಕಿತ್ತು. ಅದಾದ ಬಳಿಕ ಒಂದಷ್ಟು ಪಾಡ್‌ಕಾಸ್ಟುಗಳಲ್ಲಿ ವೇದಾಂತ ಮಾತಾಡಲಾರಂಭಿಸಿದ್ದ ಕೃಷಿ ತಾಪಂಡಗೀಗ ಮತ್ತೆ ಮಂಡೆ ಬಿಸಿ ಶುರುವಾಗಿದೆ; ಗೆಣೆಕಾರ ವಿಶಾಖ್ ಎಂಬಾತ ಆಕೆಯ ಅಂತಃಪುರದಲ್ಲಿಯೇ ನೇಣು ಬಿಗಿದುಕೊಂಡು ಗೋಣು ಚೆಲ್ಲುವ ಮೂಲಕ!

ಕೃಷಿ ಮನೆಯೊಳಗೇ ಹೆಣವಾದ!

ಕೃಷಿ ತಾಪಂಡ ಹಾಗೂ ಉದ್ಯಮಿ ಅರವಿಂದ್ ವೆಂಕಟೇಶ ರೆಡ್ಡಿ ನಡುವಿನ ವಿವಾದದಲ್ಲಿ ದೊಡ್ಡ ಮಟ್ಟದಲ್ಲಿಯೇ ಕೇಳಿ ಬಂದಿದ್ದ ಹೆಸರು ವಿಶಾಖ್‌ನದ್ದು. ತಾನು ಕೇಳಿದಷ್ಟು ಹಣ, ಆಸ್ತಿ, ವಾಹನ ಸೇರಿದಂತಗೆ ಎಲ್ಲವನ್ನೂ ಕೊಟ್ಟರೂ ಕೂಡಾ ಕೃಷಿ ಮತ್ತೋರ್ವನೊಂದಿಗೆ ಸಂಬಂಧ ಹೊಂದಿದ್ದಳೆಂಬುದು ರೆಡ್ಡಿಯ ಆರೋಪವಾಗಿತ್ತು. ಇದರ ಜೊತೆಗೇ, ತನ್ನದೇ ಕಾಸಲ್ಲಿ ಮಾಲ್ಡೀವ್ಸ್‌ಗೆ ಸೋಲೋ ಟ್ರಿಪ್ ಹೋಗೋದಾಗಿ ಹೇಳಿದ್ದ ಕೃಷಿ, ತನ್ನ ಬಾಯ್‌ಫ್ರೆಂಡ್ ಜೊತೆ ಸುತ್ತಾಡಿದ್ದಳು ಎಂಬಂಥಾ ಮಾತುಗಳನ್ನೂ ರೆಡ್ಡಿ ಆಡಿದ್ದ. ಹಾಗೆ ರೆಡ್ಡಿಯೊಂದಿಗೆ ಸಂಬಂಧದಲ್ಲಿರುವಾಗಲೇ ಕೃಷಿಯೊಂದಿಗೆ ಅಡ್ಡಾಡುತ್ತಿದ್ದಾತ ಉದ್ಯಮಿ ವೈಶಾಕ್ ಎಂಬ ಗುಮಾನಿ ಹಬ್ಬಿಕೊಂಡಿದ್ದದ್ದು ತಿಂಗಳ ಹಿಂದೆ ನಡೆದಿದ್ದ ಬೆದರಿಕೆ ಪುರಾಣವೊಂದರ ಮೂಲಕ.

ರೆಡ್ಡಿ ಬಳಿಯಿಂದ ಒಂದಷ್ಟು ಕೋಟಿ ಗುಂಜಿಕೊಳ್ಳಲು ಸ್ಕೆಚ್ಚು ಹಾಕಿದ್ದ ವೈಶಾಖ್‌ಗೆ ಸರಿಯಾಗಿಯೇ ಬಿಸಿ ಮುಟ್ಟಿತ್ತು. ಈ ಪ್ರಕರಣದಲ್ಲಿ ಅತ ಅರೆಸ್ಟ್ ಆಗಿದ್ದೂ ನಡೆದಿತ್ತು. ಇಂಥಾ ವೈಶಾಖ್ ಕೃಷಿ ತಾಪಂಡ ಇಲ್ಲದ ಸಮಯದಲ್ಲಿ, ಆಕೆಯದ್ದೇ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃಷಿ ಅದೆಂಥಾದ್ದೀಓ ಪ್ರಕೃತಿ ಚಿಕಿತ್ಸೆಗೆ ಹೋಗಿದ್ದಾಗಲೇ ವೈಶಾಖ್ ಆಕೆಯ ಮೊಬೈಲಿಗೆ ಮೆಸೇಜು ಬಿಟ್ಟಿದ್ದಾನೆ. ಆ ಮೂಲಕ ತಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿಕೊಂಡಿದ್ದಾನೆ. ಕೃಷಿ ಕರೆ, ಮೆಸೇಜುಗಳ ಮೂಲಕ ಗೆಣೆಕಾರನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾಳೆ. ಆದರೂ ಕೂಡಾ ವೈಶಾಖ್ ಕೃಷಿಯ ಅಂತಃಪುರದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡು ಬಿಟ್ಟಿದ್ದಾನೆ!

ಸುಂದರ ಸಂಸಾರ ಛಿದ್ರವಾಗಿತ್ತು

ಆತ್ಮಹತ್ಯೆ ಮಾಡಿಕೊಂಡಿರುವ ವೈಶಾಖ್ ಕೂಡಾ ಉದ್ಯಮಿಯಾಗಿದ್ದವನು. ಆತನಿಗೆ ಅತೀವವಾಗಿ ಪ್ರೀತಿಸುವ ಹೆಂಡತಿಯಿದ್‌ದಳು. ಎದೆಮಟ್ಟ ಬೆಳೆದಿದ್ದ ಹದಿನಾಲಕ್ಕು ವರ್ಷದ ಮುದ್ದಾದ ಮಗನೂ ಇದ್ದ. ಉದ್ಯಮದಲ್ಲಿ ಹಂತ ಹಂತವಾಗಿ ಯಶ ಕಾಣುತ್ತಾ ಬಂದಿದ್ದ ವೈಶಾಖ್‌ಗೆ ಯಾವುದರಲ್ಲಿಯೂ ಕಡಿಮೆ ಇರಲಿಲ್ಲ. ಇದೀಗ ವೈಶಾಕ್ ಸಾವಿನ ನಂತರ ಹೊರ ಬೀಳುತ್ತಿರುವ ಸುದ್ದಿಗಳು ಮತ್ತು ಖುದ್ದು ಆತನ ಹೆಂಡತಿಯ ಹೇಳಿಕೆಯ ಪ್ರಕಾರ ಹೇಳೋದಾದರೆ, ಕೃಷಿ ತಾಪಂಡಳೊಂದಿಗಿನ ನಂಟಿನಿಂದಲೇ ವೈಶಾಖ್ ನೆಮ್ಮದಿ ಕೆಡಿಸಿಕೊಂಡಿದ್ದ. ಕೃಷಿಯ ಮೋಹಕ್ಕೆ ಬಿದ್ದು ತನ್ನ ಸುಂದರ ಸಂಸಾರವನ್ನು, ಖಾಸಗಿ ಬದುಕಿನ ನೆಮ್ಮದಿಯನ್ನು ಅಕ್ಷರಶಃ ಕಳೆದುಕೊಂಡಿದ್ದ.

ಗಂಡ, ಮಗು ಸೇರಿದಂತೆ ಪುಟ್ಟ ಸಂಸಾರವನ್ನೇ ಪ್ರಪಂಚವಾಗಿಸಿಕೊಂಡಿದ್ದ ವೈಶಾಖ್ ಹೆಂಡತಿಗೆ ವರ್ಷಾಂತರಗಳಿಂದಲೇ ಗಂಡನ ಮೇಲೊಂದು ಅನುಮಾನ ಮೂಡಿಕೊಂಡಿತ್ತು. ಕೃಷಿಯೊಂದಿಗಿನ ಮೋಹಕ್ಕೆ ಬಿದ್ದಿದ್ದ ವೈಶಾಖ್ ವೈಕ್ತಿತ್ವ, ಮಾತು, ವರ್ತನೆಗಳಲ್ಲಿ ಆಗಿದ್ದ ಬದಲಾವಣೆಗಳನ್ನು ಆ ಹೆಣ್ಣುಮಗಳು ಸೂಕ್ಷ್ಮವಾಗಿ ಗಮನಿಸುತ್ತಾ ಆಘಾತಗೊಂಡಿದ್ದರು. ಇದೆಲ್ಲವನ್ನೂ ವೈಶಾಖ್ ಚಾಲಾಕಿತನದಿಂದಲೇ ಸಂಭಾಳಿಸಿದ್ದ. ಕೃಷಿಯೊಂದಿಗೆ ಅಂತಾ ಯಾವ ಸಂಬಂಧವೂ ಇಲ್ಲ ಎಂಬಂತೆ ಬಿಂಬಿಸಿಕೊಂಡಿದ್ದ. ಆದರೆ, ತಿಂಗಳ ಹಿಂದೆ ಅರವಿಂದ ವೆಂಕಟೇಶ್ ರೆಡ್ಡಿಗೆ ಕೊರಿಯರ್ ಮೂಲಕ ಬೆದರಿಕೆ ಹಾಕುವ ದುಸ್ಸಾಹಸ ಮಾಡಿ ತಗುಲಿಕೊಂಡ ನೋಡಿ? ಆ ಮೂಲಕ ವೈಶಾಖ್ ತನ್ನ ಮಡದಿಯ ಮುಂದೆ, ಹೆತ್ತವರ ಮುಂದೆ ಬೆತ್ತಲಾಗಿದ್ದ. ಈಗಷ್ಟೇ ಜಗತ್ತಿನತ್ತ ಅಬೋಧ ಕಣ್ಣುಗಳಿಂದ ದಿಟ್ಟಿಸುತ್ತಿದ್ದ ಪುಟ್ಟ ಮಗನ ಮುಂದೆ ವಿಲನ್ ಆಗಿದ್ದ. ಅಲ್ಲಿಗೆ ವೈಶಾಖ್‌ನ ಸುಂದರ ಸಂಸಾರ ಮತ್ತೆಂದೂ ಸರಿ ಮಾಡಲಾರದಂತೆ ಛಿದ್ರಗೊಂಡಿತ್ತು.

ವೈಶಾಖ್‌ನ ಮೂರ್ಖ ನಡೆ

ಕೃಷಿ ತಾಪಂಡ ಉದ್ಯಮಿ ರೆಡ್ಡಿಯೊಂದಿಗೆ ಸಂಬಂಧದಲ್ಲಿರುವಾಗಲೇ ವೈಶಾಖ್ ಜೊತೆಗೂ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದಳೆಂಬ ಆರೋಪವೂ ಕೇಳಿ ಬಂದಿತ್ತು. ಖುದ್ದು ರೆಡ್ಡಿ ಇದೇ ಅರ್ಥ ಹೊಮ್ಮಿಸುವ ಆರೋಪಗಳನ್ನು ಮಾಡಿದ್ದ. ಅದೆಲ್ಲವೂ ನಿಜವೆಂಬುದು ಕೃಷಿಯ ಗೆಣೆಕಾರ ವೈಶಾಖ್‌ನ ಮೂರ್ಖ ನಡೆಯಿಂದಲೇ ಸಾಬೀತಾಗಿತ್ತು. ವೈಶಾಖ್ ಇದೇ ವರ್ಷದ ಜನವರಿ ಇಪ್ಪತ್ನಾಲಕ್ಕನೇ ತಾರೀಕಿನಂದು ಅನಾಮಧೇಯ ಕೊರಿಯರ್ ಮೂಲಕ ಅರವಿಂದ ವೆಂಕಟೇಶ್ ರೆಡ್ಡಿಗೆ ಬೆದರಿಕೆ ಪತ್ರ ರವಾನಿಸಿದ್ದ. ಅದರಲ್ಲಿ ಒಂದಷ್ಟು ವಿಚಾರಗಳನ್ನು ನಮೂದಿಸಿದ್ದ. ಕೃಷಿ ತಾಪಂಡಳೊಂದಿಗಿನ ವಿವಾದವನ್ನು ಖಾಸಗಿಯಾಗಿ ಬಗೆಹರಿಸಿಕೊಂಡು ಆಕೆಯ ತಂಟೆಗೆ ಬಾರದಂತೆ ತಾಕೀತು ಮಾಡಿದ್ದ.

ಇದಲ್ಲದೇ ಕೃಷಿಯೊಂದಿಗಿನ ವಿವಾದಕ್ಕೆ ಸಂಬಂಧಿಸಿದಂತೆ ಆರೇಳು ಕೋಟಿ ಕೊಟ್ಟರೆ ಬಚಾವಾಗಬದೆಂಬಂತೆ ಬೆದರಿಕೆ ಹಾಕಿದ್ದ. ಡ್ರೈವರ್ ಮೂಲಕ ಈ ಹಣವನ್ನು ತಲುಪಿಸಬೇಕೆಂದೂ ಗಡುವು ನಿಗಧಿ ಮಾಡಿದ್ದ. ಅದಾಗಲೇ ಕೃಷಿ ಸೃಷ್ಟಿಸಿದ್ದ ರಂಖಲುಗಳಿಂದ ರೋಸತ್ತು ಹೋಗಿದ್ದ ರೆಡ್ಡಿ ಈ ಬೆದರಿಕೆ ಕಂಡು ರೊಚ್ಚಿಗೆದ್ದವನೇ, ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಅದರ ಹಾದಿ ಹಿಡಿದು ಹೊರಟ ಪೊಲೀಸರು ಅತ್ಯಂತ ಲೀಲಾಜಾಲವಾಗಿ ಈ ಪ್ರಕರಣವನ್ನು ಬೇಧಿಸಿದ್ದರು. ಯಾಕೆಂದರೆ, ಮೂರ್ಖ ವೈಶಾಖ್ ತನಗೆ ಪರಿಚಯವಿದ್ದ ಗ್ಯಾರೇಜೊಂದರ ಹುಡುಗನ ಮೂಲಕ ಈ ಬೆದರಿಕೆ ಪತ್ರವನ್ನು ಕೊರಿಯರ್ ಮಾಡಿದ್ದ. ಆ ಕೊರಿಯರ್ ಕಳಿಸಿದ್ದ ಸೆಂಟರನ್ನು ಪತ್ತೆಹಚ್ಚಿ, ಆ ಹುಡುಗನನ್ನು ವಿಚಾರಿಸುತ್ತಲೇ ಅದರ ಹಿಂದಿರೋದು ವೈಶಾಖ್ ಎಂಬ ವಿಚಾರ ಖಾತರಿಯಾಗಿತ್ತು. ಆತನನ್ನು ಪೊಲೀಸರು ಬಂಧಿಸಿದ್ದು ಕೃಷಿ ತಾಪಂಡಾಳ ಮನೆಯಿಂದಲೇ!

ಕೃಷಿಯದ್ದು ಇದೆಂಥಾ ಹಳವಂಡ?

ಅಷ್ಟಕ್ಕೂ ಕೃಷಿ ಮತ್ತು ಅರವಿಂದ್ ವೆಂಕಟೇಶ ರೆಡ್ಡಿ ನಡುವಿನ ಅಫೇರಿನ ಕಿಸುರು ಮೊದಲು ಜಾಹೀರಾದದ್ದೇ ಕೃಷಿ ತಾಪಂಡಳ ಮೂಲಕ. ಏಕಾಏಕಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಕೃಷಿ, ತನಗೆ ಉದ್ಯಮಿ ಅರವಿಂದ ವೆಂಕಟೇಶ್ ರೆಡ್ಡಿ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆಂಬ ಆರೋಪ ಮಾಡಿದ್ದಳು. ಆ ಸಂಬಂಧವಾಗಿ ಬಂಧನಕ್ಕೀಡಾಗಿದ್ದ ರೆಡ್ಡಿ ಕ್ಷಣಾರ್ಧದಲ್ಲಿಯೇ ಬೇಲ್ ಪಡೆದು ವಾಪಾಸಾದವನೇ ಕೃಷಿಯ ಒಂದೊಂದೇ ಕಲ್ಯಾಣ ಗುಣಗಳನ್ನು ಎಳೆ ಎಳೆಯಾಗಿ ತೆರೆದಿಕಟ್ಟಿದ್ದ. ಕನಿಷ್ಠ ಪಕ್ಷ ಸಾರ್ವಜನಿಕವಾಗಿ, ಮಾಧ್ಯಮಗಳ ಮುಂದೆ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ನೈತಿಕತೆಯೂ ಇಲ್ಲದಂತೆ ಕೃಷಿ ಮರೆಗೆ ಸರಿದು ಬಿಟ್ಟಿದ್ದಳು. ಇಂಥಾ ಕೃಷಿ ಇತ್ತೀಚೆಗೆ ಕೆಲ ಯೂಟ್ಯೂಬ್ ಚಾನೆಲ್ಲುಗಳ ಮೂಲಕ ತನ್ನ ವೇದನೆಗಳನ್ನು ಹಂಚಿಕೊಂಡಿದ್ದಳು. ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಏನೇನೋ ಒದರಾಡಲಾರಂಭಿಸಿದ್ದಳು. ಅದನ್ನು ಕೇಳಿದ ಒಂದಷ್ಟು ಮಂದಿ ಕನಿಕರ ಪಟ್ಟುಕೊಂಡಿದ್ದೂ ಇದೆ.

ಆದರೆ, ಅರವಿಂದ ರೆಡ್ಡಿಯ ಜೊತೆ ಸಂಬಂಧ ಹಳಸಿದ ನಂತರ ಸುಮ್ಮನಿರದ ಕೃಷಿ ವೈಶಾಖ್ ಮೂಲಕ ಬೆದರಿಕೆ ರವಾನಿಸಿ ಕಾಸು ಪೀಕಲು ಸ್ಕೆಚ್ಚು ಹಾಕಿದ್ದೇಕೆ? ಅದರಲ್ಲಿ ಕೃಷಿಯ ಕೈವಾಡ ಇಲ್ಲವೇ ಇಲ್ಲ ಅಂತಿಟ್ಟುಕೊಳ್ಳೋಣ; ತೀರಾ ಒಂದೇ ಮನೆಯಲ್ಲಿರುತ್ತಿದ್ದ ವೈಶಾಖ್ ಕೃಷಿಗೆ ಹೇಳದೆ ಇಂಥಾ ಕೆಲಸ ಮಾಡಲು ಸಾಧ್ಯವಾ? ತನ್ನಿಂದಲೇ ವೈಶಾಕ್ ಸಂಸಾರ ಹದಗೆಟ್ಟು, ಓರ್ವ ನಿಷ್ಪಾಪಿ ಹೆಣ್ಣು ಮಗಳು ನೊಂದು ನಿಂತಿದ್ದಾಗ ಎಲ್ಲವನ್ನು ಬಗೆಹರಿಸಲು ಕೃಷಿ ಯಾಕೆ ಪ್ರಯತ್ನಿಸಲಿಲ್ಲ? ಹೆಂಡತಿಯೊಂದಿಗೆ ಕಿತ್ತಾಡಿಕೊಂಡು ಬರುತ್ತಿದ್ದ ವೈಶಾಖ್‌ನನ್ನು ತನ್ನ ಮನೆಯಲ್ಲಿಯೇ ಯಾಕೆ ಬಿಟ್ಟುಕೊಳ್ಳುತ್ತಿದ್ದಳು? ಓರ್ವ ಹೆಣ್ಣಾಗಿ ಈ ಹಿಂದಿನ ವಿವಾದದಿಂದ ಅನುಭವಿಸಿದ ಮಾನಸಿಕ ಯಾತನೆಯ ಬಗ್ಗೆ ಸಂತ್ರಸ್ತೆಯಂತೆ ಹೇಳಿಕೊಳ್ಳುವ ಕೃಷಿಗೆ ಮತ್ತೋರ್ವ ಹೆಣ್ಣು ಮಗಳ ಕಣ್ಣೀರು ಯಾಕೆ ತಾಕಲಿಲ್ಲ? ಒಟ್ಟಾರೆಯಾಗಿ, ಕೃಷಿಯ ಕಡೆಯಿಂದಾಗಿರೋ ಯಡವಟ್ಟುಗಳು ಇಂಥಾ ಆಘಾತಗಳ ರೂಪದಲ್ಲಿ ಆಕೆಯೆಡೆಗೇ ಮರಳುತ್ತಿರುವಂತಿದೆ!

keywords: vaishak suicide case, krishi thapanda, avr reddy, crime

The post Krishi Thapanda: ಕೃಷಿಗೆ ಮತ್ತೊಂದು ಮಂಡೆಬಿಸಿ! appeared first on Cini Shodha.

Reeshma Nanaiah: ತಮಿಳಿನತ್ತ ಮುಖ ಮಾಡಿದ ಮಚ್ ಲಕ್ಷ್ಮಿ!
ನಾಕಾಣಿ ಕೆಲಸ ಮಾಡಿ ಎಂಟಾಣೆ ಪೋಸು ಕೊಡೋ ವಿಚಾರದಲ್ಲಿ ಜೋಗಿ ಪ್ರೇಮ್ಸ್ ಸಾರ್ವಕಾಲಿಕ ಮಾದರಿ ಆಸಾಮಿ. ಬರೆಈ ಹೈಪುಗಳತ್ತಲೇ ಗಮನ ಹರಿಸಿದರೆ ಸಿನಿಮಾವೊಂದು ಯಾವ್ಯಾವ ಥರದಲ್ಲಿ ಹಳ್ಳ ಹಿಡಿಯಬಹುದೆಂಬುದಕ್ಕೂ ಪ್ರೇಮ್ಸ್ ತಾಜಾ ಉದಾಹರಣೆ. ಇಂಥಾ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ರಕ್ತದಲ್ಲಿ ಅದ್ದಿ ತೆಗೆದಂತಿದ್ದ ಕಲಾಕೃತಿ ಕೆಡಿ ದ ಡೆವಿಲ್ ಚಿತ್ರ. ಎಲ್ಲ ಹೈಪುಗಳಾಚೆಗೂ ಸದರಿ ಸಿನಿಮಾ ಚಿತ್ರಮಂದಿರಗಳಿಂದ ಎಗರಿಕೊಂಡಿದೆ. ಇದರ ಪರಿಣಾಮಗಳು ನಾನಾ ತೆರನಾಗಿ ಪ್ರತಿಫಲಿಸುತ್ತಲೇ ಇದ್ದಾವೆ. ಯಾವುದೇ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶ ಕಂಡಾಗ, ಅದರ ಭಾಗವಾದವರ ನಸೀಬು ಲಕಲಕಿಸುತ್ತೆ. ಅದೇ ರೀತಿ ಭಾರೀ ನಿರೀಕ್ಷೆ ಮೂಡಿಸಿದ್ದ ಚಿತ್ರವೊಂದು ತೋಪೆದ್ದಾಗ ಸಹಜವಾಗಿಯೇ ತಂಡದ ನಾನಾ ಮಂದಿಯ ವೃತ್ತಿ ಬದುಕು ಹೊಯ್ದಾಡಲಾರಂಭಿಸುತ್ತೆ. ಕೆಡಿ ಚಿತ್ರದ ಭೂಮಿಕೆಯಲ್ಲಿ ಅಂಥಾದ್ದೊಂದು ಸೋಲಿನ ಪರಿಣಾಮ ಪ್ರಧಾನವಾಗಿ ನಾಯಕಿಯಾಗಿ ನಟಿಸಿದ್ದ ರೀಷ್ಮಾ ನಾಣಯ್ಯಳನ್ನು ಪೀಡಿಸುತ್ತಿರುವಂತಿದೆ!

ಒಂದು ವೇಳೆ ಪ್ರೇಮ್ಸ್ ಸೃಷ್ಟಿಸಿದ್ದ ಹೈಪುಗಳಿಗೆ ಸರಿಸಮಾನವಾಗಿ ಕೆಡಿ ದ ಡೆವಿಲ್ ಮೂಡಿ ಬಂದಿದ್ದರೆ, ಇಷ್ಟು ಹೊತ್ತಿಗೆಲ್ಲ ರೀಷ್ಮಾ ನಾಣಯ್ಯ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕುತ್ತಿದ್ದರೋ ಏನೋ. ಆದರೆ, ಅಂಥಾ ಸಕಾರಾತ್ಮಕವಾದ ಯಾವ ವಾತಾವರಣಗಳೂ ಆಕೆಯ ಮುಂದೆ ಕಾಣಿಸುತ್ತಿಲ್ಲ. ಹಾಗೆ ನೋಡಿದರೆ, ಆರಂಭದಲ್ಲಿ ಸದರಿ ಸಿನಿಮಾ ಆರಂಭಿಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದದ್ದು ಇದೇ ರೀಷ್ಮಾಳ ಪೋಸ್ಟರ್ ಒಂದರ ಮೂಲಕ. ಪಕ್ಕಾ ಮಾಸ್ ಲುಕ್ಕಿನಲ್ಲಿ ಮೂಳೆ ಕಡಿಯುತ್ತಾ ಕೂತಿದ್ದ ರೀಷ್ಮಾಳ ರಗಡ್ ಲುಕ್ ಕಂಡು ಕೇಡಿಯ ಬಗ್ಗೆ ತಂತಾನೇ ಕುತೂಹಲ ಮೂಡಿಕೊಂಡಿತ್ತು. ಆದರೆ, ಪ್ರೇಮ್ಸ್ ತೀರಾ ಓವರ್ ಆಕ್ಟಿಂಗ್ ಅನ್ನಿಸುವಂತೆ ಆ ಪಾತ್ರವನ್ನು ಕಟ್ಟಿ ಕೊಟ್ಟರೇ ಹೊರತು, ರೀಷ್ಮಾಳ ಪಾತ್ರವನ್ನು ನೋಡುಗರ ಎದೆಗಿಳಿಯುವಂತೆ ರೂಪಿಸುವತ್ತ ಗಮನಹರಿಸಲಿಲ್ಲ.

ಅದೇನು ದುರ್ವಿಧಿಯೋ ಗೊತ್ತಿಲ್ಲ; ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಯುಐ ಚಿತ್ರದಲ್ಲಿಯೂ ರೀಷ್ಮಾ ಪಾತ್ರವನ್ನು ಪ್ರೇಮ್ಸ್ ರೀತಿಯಲ್ಲಿಯೇ ಪೇಲವವಾಗಿಸಿದ್ದರು. ಏಕ್‌ಲವ್‌ಯಾದಂಥಾ ಸಿನಿಮಾ ಮೂಲಕ ಬೆಳಕಿಗೆ ಬಂದಿದ್ದ ಈ ಹುಡುಗಿ, ಆ ನಂತರ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಭರಪೂರ ಗೆಲುವು ದಕ್ಕಿರಲಿಲ್ಲ. ಆದರೆ, ಏಕಾಏಕಿ ಯುಐ ಮೂಲಕ ರಿಯಲ್ ಸ್ಟಾರ್‌ಗೆ ರೀಷ್ಮಾ ನಾಯಕಿಯಾದಾಗ ಎಲ್ಲರೂ ಅಚ್ಚರಿಗೀಡಾಗಿದ್ದರು. ಇನ್ನು ಮುಂದೆ ಈ ಹುಡುಗಿ ಸ್ಯಾಂಡಲ್ವುಡ್ಡಿನ ಮುಖ್ಯನಾಯಕಿಯಾಗಿ ನೆಲೆ ಕಂಡುಕೊಳ್ಳುತ್ತಾಳೆಂಬ ಭರವಸೆಯೊಂದು ತಂತಾನೇ ಮೂಡಿಕೊಂಡಿತ್ತು. ಆದರೆ, ಉಪೇಂದ್ರ ಯುಐ ಅನ್ನು ನಿರೀಕ್ಷಿತ ಮಟ್ಟದಲ್ಲಿ ಕಟ್ಟಿ ಕೊಡುವಲ್ಲಿ ಸೋತಿದ್ದರು. ಅತಿಯಾದ ಬುದ್ಧಿವಂತಿಕೆಯೇ ಪ್ರೇಕ್ಷಕರನ್ನು ಸಿನಿಮಾ ಮಂದಿರದಿಂದ ದೂರ ನಿಲ್ಲುವಂತೆ ಮಾಡಿ ಬಿಟ್ಟಿತ್ತು. ಇದೆಲ್ಲದರಾಚೆಗೆ ರೀಷ್ಮಾ ಪಾತ್ರದ ಬಗ್ಗೆಯೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ಪ್ರೇಕ್ಷಕರು ಆಕರ್ಷಿತರಾಗಲಿಲ್ಲ.

ಒಂದು ವೇಳೆ ಯುಐ ನಿರೀಕ್ಷಿತ ಗೆಲುವು ಕಂಡಿದ್ದರೂ ಕೂಡಾ ಕೊಡಗಿನ ಹುಡುಗಿಯ ಲಕ್ಕು ಕುದುರುತ್ತಿತ್ತು. ಅಂತೂ ಉಪ್ಪಿ ಹಾಗೂ ಪ್ರೇಮ್ಸ್ ದೆಸೆಯಿಂದಾಗಿ ಸ್ಯಾಂಡಲ್ವುಡ್ಡಿನಲ್ಲಿ ಲಕಲಕಿಸಬಹುದಾಗಿದ್ದ ರೀಷ್ಮಾ ನಾಣಯ್ಯ ಮಂಕಾಗುವಂತಾಗಿದೆ. ಸದ್ಯದ ಮಟ್ಟಿಗೆ ರೀಷ್ಮಾ ಪ್ರೇಮ್ಸ್ ಕೊಟ್ಟಿದ್ದ ಹಳೇ ಮಚ್ಚು ಬಿಸಾಡಿ ತಮಿಳಿನತ್ತ ಮುಖ ಮಾಡಿದ್ದಾರೆ. ಅಲ್ಲಿ ಒಂದು ಸಿನಿಮಾಕ್ಕೆ ಆಕೆ ನಾಯಕಿಯಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಹೀಗೆ ರೀಷ್ಮಾ ಏಕಾಏಕಿ ತಮಿಳಿನತ್ತ ಮುಖ ಮಾಡಿರೋದಕ್ಕೆ ಕನ್ನಡ ಚಿತ್ರರಂಗದಲ್ಲಿನ ಅವಕಾಶಗಳ ಕೊರತೆ ಕಾರಣ ಎಂಬಂತೆಯೂ ಚರ್ಚೆಗಳಾಗುತ್ತಿವೆ. ಪರಭಾಷೆಗಳಲ್ಲಾದರೂ ಕನ್ನಡತಿ ಮಚ್ ಲಕ್ಷ್ಮಿಯ ಲಕ್ಕು ಕುದುರಬಹುದಾ ಎಂಬುದು ಸದ್ಯದ ಕುತೂಹಲ!

keywords: reeshma nanaiah, kd the devil movie, sandalwood

The post Reeshma Nanaiah: ತಮಿಳಿನತ್ತ ಮುಖ ಮಾಡಿದ ಮಚ್ ಲಕ್ಷ್ಮಿ! appeared first on Cini Shodha.

Kd The Devil Song Controvercy: ಗಡಂಗಿನಲ್ಲಿ ಕುಂತು ಬರೆದನಾ ಪುಡಾಂಗು ಪ್ರೇಮ್?
ನಾಕಾಣೆ ಕೆಲಸ ಮಾಡಿ ಎಂಟಾಣೆ ಪೋಸು ಕೊಡೋ ನೌಟಂಕಿ ಪಟ್ಟುಗಳಲ್ಲಿ ನಿರ್ದೇಶಕ ಪ್ರೇಮ್ ನಿಸ್ಸೀಮ. ಕ್ರಿಯಾಶೀಲ ಕ್ಷೇತ್ರದಲ್ಲಿರುವವರಿಗೆ ಬಾಯಿಬೇಧಿ ಅತಿಯಾದರೆ ಏನನ್ನೂ ಸೃಷ್ಟಿಸಲಾರದ ನಿರ್ಜಲೀಕರಣ ಬಾಧಿಸುತ್ತೆ. ಆ ಬಳಿಕ ನಿರ್ಲಜ್ಜ ನಡೆ ಅನುಸರಿಸಬೇಕಾಗುತ್ತೆ. ಸದ್ಯಕ್ಕೆ ರಕ್ಷಿತಾ ಗಂಡ ಪ್ರೇಮ್ ಅಂಥಾ ಸ್ಥಿತಿ ತಲುಪಿಕೊಂಡಿದ್ದಾನೆ. ದ ವಿಲನ್ ಸಂದರ್ಭದಲ್ಲೇ ಪ್ರೇಮ್ ಓರ್ವ ನಿರ್ದೇಶಕನಾಗಿ ಖಾಲಿಯಾಗಿದ್ದಾನೆಂಬ ಸ್ಪಷ್ಟ ಸಂದೇಶ ರವಾನೆಯಾಗಿತ್ತು. ಈ ಸಿನಿಮಾದ ಭೂಮಿಕೆಯಲ್ಲಿ ಪ್ರೇಮ್ ಪ್ರಯೋಗಿಸಿದ್ದ ಪ್ರಚಾರದ ಪಟ್ಟುಗಳು ಪ್ರೇಕ್ಷಕರಲ್ಲೊಂದು ರೇಜಿಗೆ ಮೂಡಿಸಿತ್ತು. ಆ ನಂತರದಲ್ಲಿ ಕೊಂಚ ಬದಲಾದಂತೆ ಕಂಡಿದ್ದ ಪ್ರೇಮ್ ಇದೀಗ ಧ್ರುವ ಸರ್ಜಾ ಅಭಿನಯದ ಕೆಡಿ ದ ಡೆವಿಲ್ ಎಂಬ ಚಿತ್ರದ ಸಾರಥಿಯಾಗಿದ್ದಾನೆ. ಈ ಸಿನಿಮಾದ ಒಂದು ಐಟಂ ಸಾಂಗ್ ಇದೀಗ ಜೋಗಿ ಪ್ರೇಮ್ ಮಾನವನ್ನು ಗಾಂಧಿನಗರದ ಗಟಾರದಂಚಿಗೆ ತಂದು ನಿಲ್ಲಿಸಿದೆ.

ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ ಎಂಬ ಹಾಡು ಬಿಡುಗಡೆಗೊಂಡೇಟಿಗೆ ಉಗುಳುಗಳ ಮೂಲಕವೇ ಪ್ರೇಕ್ಷಕರು ಅದ್ದೂರಿ ಸ್ವಾಗತ ಕೋರಿದ್ದಾರೆ. ಪ್ರೇಕ್ಷಕರ ಅಭಿರುಚಿಯನ್ನು ಪ್ರೇಮ್‌ನಂಥವರು ತಪ್ಪಾಗಿ ಗ್ರಹಿಸೋದೇ ಹೆಚ್ಚು. ಬಹುಶಃ ಸೋಶಿಯಲ್ ಮೀಡಿಯಾದ ಚಪ್ರಿ ಗ್ಯಾಂಗೊಂದನ್ನು ದೃಷ್ಟಿಯಲ್ಲಿಟ್ಟುಕೊಂಡು, ಆ ಪಡೆಯ ಮೂಲಕವೇ ಅದ್ದೂರಿ ಹಿಟ್ ಆಗುತ್ತದೆಂಬ ಭ್ರಮೆಯ ಮೂಲಕ ಪ್ರೇಮ್ ಈ ಹಾಡು ಬರೆದಿದ್ದಿರಬಹುದು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಮಂದಿ ಈ ಹಾಡಿನ ವಿರುದ್ಧ ಕೊತಗುಡುತ್ತಿರುವ ರೀತಿಯಿದೆಯಲ್ಲಾ? ಅದು ಪ್ರೇಮ್‌ಗೆ ಮಾತ್ರವಲ್ಲ; ಈತನಂತೆ ತಾತ್ಕಾಲಿಕ ಜನಪ್ರಿಯತೆಯ ತಲುಬಿಗೆ ಬಿದ್ದು ಅಶ್ಲೀಲ ಸಾಹಿತ್ಯ ಗೀಚೋ ಮಂದಿಗೆಲ್ಲ ಅಕ್ಷರಶಃ ಯಕ್ಕಡದೇಟಿನಂತಿದೆ.

challenging star darshan: ಗಡಂಗು ಪುಡಾಂಗು ಮತ್ತು ಗೆಳೆತನ!

ಪ್ರೇಮ್ ಓರ್ವ ಅದ್ಭುತ ಗೀತ ಸಾಹಿತಿ ಅನ್ನೋದರಲ್ಲಿ ಎರಡು ಮಾತಿಲ್ಲ. ಜೋಗಿ ಚಿತ್ರದ ಹಾಡುಗಳ ಮೂಲಕವೇ ಅದು ಸಾಬೀತಾಗಿದೆ. ಆ ನಂತರವೂ ಪ್ರೇಮ್ ಕಡೆಯಿಂದ ಅಂಥಾದ್ದೊಂದು ಮ್ಯಾಜಿಕ್ಕು ಹಂತ ಹಂತವಾಗಿ ನಡೆಯುತ್ತಾ ಬಂದಿದೆ. ತಾಯಿ ಸೆಂಟಿಮೆಂಟ್, ಪ್ರೇಮಗೀತೆಗಳಾಚೆಗೆ ಬಿಡುಬೀಸಾದ ಶೈಲಿಯ ಹಾಡುಗಳನ್ನೂ ಈತ ಬರೆದಿದ್ದ. ಆದರೆ, ಅವ್ಯಾವುದರಲ್ಲಿಯೂ ಅಶ್ಲೀಲತೆಯ ಛಾಯೆ ಇರಲಿಲ್ಲ. ಕೆಡಿ ಹಾಡಿನಲ್ಲಿ ಮಾತ್ರ ಅಶ್ಲೀಲ ಸಾಹಿತ್ಯ ಬಿಟ್ಟು ಬೇರೇನೂ ಇಲ್ಲ. ಬಹುಶಃ ಪ್ರೇಮ್ಸ್ ಗಡಂಗಿನಲ್ಲಿ ಕೂತು ಈ ಹಾಡು ಬರೆದಿರಬಹುದೇನೋ… ದುರಂತವೆಂದರೆ, ಹೆಣ್ಣು ಕುಲಕ್ಕೆ ಅವಮಾನದಂತಿರೋ ಈ ಹಾಡನ್ನು ರಕ್ಷಿತಾ ಬಿಡಿಗಡೆಗೊಳಿಸಿದ್ದಾರೆ. ಆಂಕರ್ ಅನುಶ್ರೀ ಅದೇ ಗಲೀಜು ಗೀತೆಗೆ ಕುಣಿದು ಸಂಭ್ರಮಿಸಿದ್ದಾಳೆ. ಇದೆಲ್ಲವೂ ಸಿನಿಮಾ ಜಗತ್ತು ಕಾಣುತ್ತಿರೋ ಬೌಧಿಕ ಅದಃಪತನದ ಸ್ಪಷ್ಟ ಸೂಚನೆಯೆಂಬಂತೆ ಕಾಣಿಸುತ್ತಿದೆ.

ಸಿನಿಮಾ ಹಾಡುಗಳ ಮಟ್ಟಿಗೆ ಕನ್ನಡದಲ್ಲೊಂದು ಸಂಪನ್ನ ಹಿನ್ನೆಲೆಯಿದೆ. ಆಗಾಗ ಪೋಲಿ ಸಾಂಗುಗಳು ಹುಟ್ಟಿಕೊಂಡರೂ ತೀರಾ ಸೆರಗು ಸರ್ಸೆ ಅಂತ ಬೇಲಾಡೋ ಕಾಮುಕ ಮಟ್ಟಕ್ಕಿಳಿದಿರಲಿಲ್ಲ. ಹೇಳಿಕೇಳಿ ಜೋಗಿ ಪ್ರೇಮ್ ಮಾತುಗಾರ. ಈ ವಿವಾದಕ್ಕಾತ ಚಾಲಾಕಿತನದ ಉತ್ತರ ಕೊಟ್ಟು ನುಣುಚಿಕೊಳ್ಳಬಹುದು. ಆದರೆ, ಇದೊಂದು ಹಾಡಿನ ಮೂಲಕ ಇಷ್ಟೂ ವರ್ಷಗಳ ಕಾಲ ಹುರಿಗೊಂಡಿದ್ದ ಘನತೆ ಗೌರವಗಳು ಪ್ರೇಮ್‌ನ ಉಡುದಾರದಿಂದ ಉಣುಚಿಕೊಂಡಿರೋದಂತೂ ಸತ್ಯ. ಕೆಲಸಕ್ಕೆ ಬಾರದ ಮೀಟಿಂಗುಗಳನ್ನು ನಡೆಸುತ್ತಾ, ಜ್ವಲಂತ ಸಮಸ್ಯೆಗಳತ್ತ ಕುರುಡು ಕಿವುಡಾಗುವ ಚಲನಚಿತ್ರ ವಾಣಿಜ್ಯ ಮಂಡಳಿ ಇಂಥಾ ಅಶ್ಲೀಲ ಸಾಹಿತ್ಯಕ್ಕೆ ಕಡಿವಾಣ ಹಾಕುವಂಥಾ ಕ್ರಮಕ್ಕೂ ಮುಂದಾಗಬೇಕಿದೆ. ಇಲ್ಲದೇ ಹೋದರೆ, ಜೋಗಿ ಪ್ರೇಮ್ ಸಂತಾನಿಗರು `ಎತ್ತೇ ಎತ್ತೆ ಒಸಿ ಲಂಗಾ ಎತ್ತೆ’ ಅಂತ ಹಾಡು ಬರೆಯೋ ಕಾಲ ದೂರವೇನಿಲ್ಲ!

keywords: jogi prem, kdthedavil, kd movie, sarse sarse serga sarse song controvercy

The post Kd The Devil Song Controvercy: ಗಡಂಗಿನಲ್ಲಿ ಕುಂತು ಬರೆದನಾ ಪುಡಾಂಗು ಪ್ರೇಮ್? appeared first on Cini Shodha.

Dog Sathish v/s Kiccha Sudeep: ಅತೀ ಬುದ್ಧಿವಂತ ಸುದೀಪ್ ಈಗೇನಂತಾರೆ?
ಈಗೊಂದಷ್ಟು ದಿನಗಳಿಂದ ಊರುತುಂಬಾ ನಾಯಿ ಸತೀಶನೆಂಬೋ ಹಡಬೇ ಆಸಾಮಿಯ ಹಾವಳಿ ವಿಪರೀತಕ್ಕಿಟ್ಟುಕೊಂಡಿದೆ. ಕ್ಯಾಕರಿಸಿ ತುಪುಕ್ಕನೆ ಮುಕಕ್ಕುಗಿದರೂ `ಅಷ್ಟೂ ಜನರನ್ನ ಬಿಟ್ಟು ನಂಗೇ ಉಗಿದಿದ್ದಾರಂದ್ರೆ ನಾನು ಎಷ್ಟು ಫೇಮಸ್ ಅಂತ ಇಮ್ಯಾಜಿನ್ ಮಾಡ್ಕಳಿ’ ಅನ್ನುವಷ್ಟು ನಾಯಿ ಸತೀಶ ಮೂರೂ ಬಿಟ್ಟು ನಿಂತಿದ್ದಾನೆ. ಇಂಥವನು ಪಬ್ಲಿಕ್ ಟಾಯ್ಲೆಟ್ಟಿನಲ್ಲಿ ಉಚ್ಚೆ ಹುಯ್ಯವಾಗಲೂ ಒಂದು ವೀಡಿಯೋ ಮಾಡಿ, ಅದಕ್ಕೆ ಕಿಚ್ಚ ಸುದೀಪ್ ಅಭಿನಯದ ದಾದ ಯಾರ್ ಗೊತ್ತಾ ಅಂತೊಂದು ಹಾಡನ್ನು ಹಿನ್ನೆಲೆಗೆ ಸೇರಿಸಿಕೊಂಡಿದ್ದಾನೆ. ಹಾಗಾದೇಟಿಗೆ ಅವನ್ಯಾರೋ ರಜತ್ ನಾಯಿ ಸತೀಶನ ವಿರುದ್ಧ ಮಾತಾಡಿ, ಪೊಲೀಸ್ ಸ್ಟೇಷನ್ನಿನಲ್ಲಿ ಕೇಸು ಜಡಿದ ನೋಡಿ? ಅದಾದ ಮೇಲೆ ಥೇಟು ಹುಚ್ಚುನಾಯಿ ಕಚ್ಚಿದವನಂತಾಡ ಹತ್ತಿದ್ದಾನೆ!

ಈಗಂತೂ ನಾಯಿ ಸತೀಶ ಕಿಚ್ಚನಿಗೇ ಕಚ್ಚಲು ಅಣಿಯಾಗಿ ನಿಂತು ಬಿಟ್ಟಿದ್ದಾನೆ. ಬಹುಶಃ ಪ್ರಥಮ್ ಎಂಬಾತನನ್ನು ಹೊರತುಪಡಿಸಿದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಜನಸಾಮಾನ್ಯರ ಜೀವ ತಿಂದವರಲ್ಲಿ ನಾಯಿ ಸತೀಶನೇ ಉತ್ತುಂಗದಲ್ಲಿದ್ದಾನೆ. ಸದಾ ಚಾಲ್ತಿಯಲ್ಲಿರಬೇಕೆಂಬ ಇಂಥಾದ್ದೇ ತಲುಬು ಪ್ರಥಮ್‌ಗೆ ಅಮರಿಕೊಂಡಿತ್ತು. ಅದರ ಸಲುವಾಗಿಯೇ ಒಂದಷ್ಟು ಎಡವಟ್ಟು ಮಾಡಿಕೊಂಡಿದ್ದ ಪ್ರಥಮ ಇತ್ತಿತ್ತಲಾಗಿ ತೆಪ್ಪಗಾದಂತಿದೆ. ಆದರೆ, ನಾಯಿ ಸತೀಶನ ಪ್ರವರಗಳು ಮಾತ್ರ ಅನೂಚಾನವಾಗಿ ಮುಂದವರೆಯುತ್ತಿವೆ. ಮಾಧ್ಯಮಗಳ ಮುಂದೆ ಶರ್ಟಿನ ಕಾಲರು ಜಗ್ಗಿ ಲಕ್ಷ ಕೋಟಿಯ ಕಥೆ ಪುಂಗುವ ಈ ಅವಿವೇಕಿಯೀಗ ಸ್ಟಾರ್ ನಟ ಸುದೀಪ್ ಮಾನವನ್ನೂ ಹರಾಜಿಗಿಡುವ ಕೆಲಸ ಮಾಡುತ್ತಿದ್ದಾನೆ.

ಇಂಥವನ ವಿರುದ್ಧ ರಜತ್, ವಿನಯ್ ಮುಂತಾದವರು ಸೆಟೆದೆದ್ದು ನಿಂತಿದ್ದಾರೆ. ಸುದೀಪ್‌ರನ್ನು ಮುಟ್ಟಬೇಕೆಂದರೆ ಈ ಎಂಟೆದೆಯ ಬಂಟರನ್ನು ದಾಟಿಕೊಂಡು ಹೋಗಬೇಕು ಅಂತೆಲ್ಲ ಮಾಸ್ ಡೈಲಾಗಿನ ಕಾಮಿಡಿಕ ಮಾಡಲಾರಂಭಿಸಿದ್ದಾರೆ. ತಮಾಶೆಯೆಂದರೆ, ಈಗ ಯಾವ ನಾಯಿ ಸತೀಶ ಹುಚ್ಚು ನಾಯಿ ಕಡಿದಂತಾಡುತ್ತಿದ್ದಾನೋ, ಆತನನ್ನು ಮುಖ್ಯಭೂಮಿಕೆಗೆ ತಂದು ಬಿಟ್ಟಿದ್ದರಲ್ಲಿ ಕಿಚ್ಚನ ಪಾತ್ರವೇನು ಕಡಿಮೆ ಇದೆಯಾ? ಇದುವರೆಗೂ ಬಿಗ್ ಬಾಸ್ ಶೋ ಬಗ್ಗೆ ಅಪಸ್ವರವೆದ್ದಾಗೆಲ್ಲ ತನ್ನ ಅತಿಬುದ್ಧಿವಂತಿಕೆಯ ಮಾತುಗಳ ಮೂಲಕ ಜಾರಿಕೊಳ್ಳುತ್ತಾ ಬಂದಿದ್ದವರು ಕಿಚ್ಚ. ಇಂಥಾ ಕಿಚ್ಚಾ ಬಿಗ್ ಬಾಸ್ ಮನೆಗೆ ಹುಚ್ಚರನ್ನು ಸೇರಿಸಿಕೊಳ್ಳೋದರ ಬಗ್ಗೆ ಪ್ರಶ್ನೆ ಎದುರಾದಾಗ ನಾವೂ ಹುಚ್ಚರೆ ಅನ್ನುವ ಮೂಲಕ ಮೀಸೆಯ ಮೊನೆಯಲ್ಲಿ ಹುಳ್ಳಗೆ ನಕ್ಕಿದ್ದನ್ನು ಯಾರೂ ಮರೆತಿಲ್ಲ.

ದ್ರೋನ್ ಪ್ರತಾಪನಂಥಾ ಪುಂಗುವೀರರನ್ನು, ಬುಲೆಟ್ ರಕ್ಷಕ್ ಥರದ ಎಳಸು ಕುನ್ನಿಗಳನ್ನು, ಸೋನು ಗೌಡಳಂಥವರನ್ನೆಲ್ಲ ತಂದು ಒಟ್ಟಿಕೊಂಡು ಅದ್ಯಾವ ಸೀಮೆಯ ಸಾಧನೆ ಮಾಡಿದರೋ ಸುದೀಪ್? ಅದು ಅವರಿಗೆ ಮಾತ್ರವೇ ಗೊತ್ತಿರಲು ಸಾಧ್ಯ. ಅಷ್ಟಕ್ಕೂ ಈ ನಾಯಿ ಸತೀಶ ನೂರು ಕೋಟಿ ನಾಯಿಯ ಕಥೆ ಒದರುತ್ತಲೇ ಪ್ರವರ್ಧಮಾನಕ್ಕೆ ಬಂದಿದ್ದ. ಈತನ ಬಡಾಯಿಗಳ ಬಗ್ಗೆ ಜಗತ್ತಿಗೆಲ್ಲ ಗೊತ್ತಾಗಿ ಹೋಗಿತ್ತು. ಇಂಥವನನ್ನು ಸುದೀಪ್ ನಡೆಸುವ ಶೋವೊಂದಕ್ಕೆ ಸೇರಿಸಿಕೊಳ್ಳುತ್ತಾರೆಂದರೆ ಅದಕ್ಕಿಂತಲೂ ನಾಚಿಕೆಗೇಡಿನ ವಿಚಾರ ಬೇರೇನಿದೆ? ಹೀಗೆ ಸುದೀಪ್ ಕಾರಣದಿಂದಲೇ ಮುಂಚೂಣಿಗೆ ಬಂದ ನಾಯಿ ಸತೀಶ ಇದೀಗ ಕಿಚ್ಚನಿಗೇ ಕಚ್ಚಲು ತಯಾರಾಗಿ ನಿಂತಿದ್ದಾನೆ. ಸುದೀಪ್‌ಗೇನು ಕೋಡಿದೆಯಾ ಅಂತೆಲ್ಲ ಕಂಡ ಕಂಡಲ್ಲಿ ಒದರಲಾರಂಭಿಸಿದ್ದಾನೆ, ಅಂತೂ ಕಿಚ್ಚನ ಘನತೆಯನ್ನು ನೂರು ಕೋಟಿಯ ಜೂಲುನಾಯಿಯ ಒಡೆಯ ನಾಯಿ ಸತೀಶ ಬೀದಿಗೆ ತಂದಿದ್ದಾನೆ. ಇದರ ಹಿಂದಿರೋ ಅಸಲೀ ತಪ್ಪು ಯಾರದ್ದು? ಈ ಪ್ರಶ್ನೆಗೆ ಕಿಚ್ಚಾ ಸುದೀಪ ಉತ್ತರ ಹುಡುಕಬಹುದಾ?

keywords: kiccha sudeep, dog sathish controvercy, rajath, vinay gowda, biggboss season12, sandalwood

The post Dog Sathish v/s Kiccha Sudeep: ಅತೀ ಬುದ್ಧಿವಂತ ಸುದೀಪ್ ಈಗೇನಂತಾರೆ? appeared first on Cini Shodha.

Suri Anna Movie Publicity Stunts: ಸೂರಿ ಅಣ್ಣನ ಸುತ್ತ ರೌಡಿಗಳು, ಸೈಕೋಗಳ ಹುತ್ತ!
ಕೊರೋನಾ ನಂತರದಲ್ಲಿ ವರ್ಷಗಟ್ಟಲೆ ಕೋಮಾಕ್ಕೆ ಜಾರಿದ್ದ ಕನ್ನಡ ಚಿತ್ರರಂಗವೀಗ ಮೆಲ್ಲಗೆ ಚೇತರಿಸಿಕೊಳ್ಳುತ್ತಿದೆ. ಒಂದಷ್ಟು ಚೆಂದದ ಪ್ರಯತ್ನಗಳ ಮೂಲಕ ಮತ್ತೆ ಪ್ರೇಕ್ಷಕರನ್ನು ಸಿನಿಮಾ ಮಂದಿರಗಳತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಓಟಿಟಿ ಮುಂತಾದವುಗಳು ಬೆರಳ ಮೊನೆಯಲ್ಲೇ ಇದ್ದರೂ ಕೂಡಾ, ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಸಂಭ್ರಮದತ್ತ ಪ್ರೇಕ್ಷಕರು ಹೊರಳಿಕೊಳ್ಳುತ್ತಿದ್ದಾರೆ. ಇಂಥಾದ್ದೊಂದು ಸಕಾರಾತ್ಮಕ ಕಾಲಘಟ್ಟದಲ್ಲಿ ಚಿತ್ರ ವಿಚಿತ್ರ ಪ್ರಚಾರದ ಪಟ್ಟುಗಳ ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ದುರಾದೃಷ್ಟಕರ ಘಟನಾವಳಿಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇಂಥಾ ವ್ಯಾಧಿ ಉಲ್ಬಣಿಸಿರೋದು ಸೂರಿ ಅಣ್ಣನ ಮಗ್ಗುಲಲ್ಲಿ. ಕ್ರಿಯಾಶೀಲ ಪ್ರಚಾರದ ಎದೆಮೇಲೀಗ ಅರೆಹುಚ್ಚರ ಕಥಕ್ಕಳಿ ಕಂಡು ಸಿನಿಮಾ ಪ್ರೇಮಿಗಳೆಲ್ಲ ಬೆಚ್ಚಿಬಿದ್ದಿದ್ದಾರೆ!

ಸಲಗ ಚಿತ್ರದ ಸೂರಿ ಅಣ್ಣನಾಗಿ ಪ್ರಸಿದ್ಧಿ ಪಡೆದಿದ್ದ ದಿನೇಶ್ ಅಲಿಯಾಸ್ ಸೂರಿ ಈ ಚಿತ್ರವನ್ನು ನಿರ್ದೇಶನ ಮಾಡಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡು, ನಾಯಕನಾಗಿಯೂ ನಟಿಸಿದ್ದಾನೆ. ಒಂದಷ್ಟು ಮಂದಿ ರಿಯಲ್ ರೌಡಿಗಳನ್ನು ತಾರಾಗಣಕ್ಕೆ ಗುಡ್ಡೆ ಹಾಕಿಕೊಳ್ಳುವ ಮೂಲಕ ಸೂರಿ ಅಣ್ಣ ಆರಂಭದಿಂದಲೂ ಸದ್ದು ಮಾಡುತ್ತಾ ಬಂದಿದ್ದ. ಓಂ ನಂತರ ತನ್ನದೇ ದಾಖಲೆ ಎಂಬಂತೆ ತೋರಿಸಿಕೊಂಡು ಬಂದಿದ್ದ ಸೂರಿ ಅಣ್ಣ ಈಗ ಸಿನಿಮಾ ಮಂದಿರಕ್ಕೆ ಬಂದು, ಯಾವ ಕ್ಷಣದಲ್ಲಾದರೂ ಸಂಪೂರ್ಣವಾಗಿ ಎಗರಿಕೊಳ್ಳುವ ಭಯದಲ್ಲಿ ಗೇಟಿನಂಚಿಗೆ ಬಂದು ನಿಂತಿದ್ದಾನೆ. ಒಂದೊಳ್ಳೆ ಚಿತ್ರಕ್ಕೂ ಕೂಡಾ ಒಂದಷ್ಟು ಸವಾಲೆದುರಾಗೋದಿದೆ. ಬರಖತ್ತಾಗಬಹುದಾದ ಸಿನಿಮಾಗಳೇ ವಾರ ಕಳೆಯೋ ಮುನ್ನವೇ ಸಿನಿಮಾ ಮಂದಿರಗಳಿಂದ ಮಾಯವಾದ ಉದಾಹರಣೆಗಳೂ ಇದ್ದಾವೆ. ಹಾಗಂಥ ಅಂಥಾ ಸಿನಿಮಾ ತಂಡದವರ್‍ಯಾರೂ ಸೂರಿ ಅಣ್ಣನ ರೀತಿ ಥರ್ಡ್ ಕ್ಲಾಸ್ ಗಿಮಿಕ್ಕುಗಳ ಮೊರೆ ಹೋಗಿರಲಿಲ್ಲ ಅನ್ನೋದೂ ಅಷ್ಟೇ ಸತ್ಯ!

ಚಿತ್ರೀಕರಣದ ಹಂತದಲ್ಲಿಯೇ ವಸೂರಿಯಣ್ಣನ ಗಿಮಿಕ್ಕುಗಳಿಗೆ ಚಾಲನೆ ಸಿಕ್ಕಿತ್ತು. ಅದ್ಯಾವನೋ ರೌಡಿಯೋರ್ವ ಶೂಟಿಂಗ್ ಸ್ಪಾಟಿಂಗೆ ಬಂದು ಕಿರಿಕ್ ಮಾಡೋ ಸನ್ನಿವೇಶ ಸೃಷ್ಟಿಸುವ ಮೂಲಕ ಒಂದು ಮಟ್ಟಿಗೆ ಪ್ರಚಾರ ಪಡೆದುಕೊಂಡಿದ್ದ. ಅದಾದೇಟಿಗೆ ರೌಡಿಶೀಟರ್ ಯಶಸ್ವಿನಿ ಎಂಟ್ರಿ ಕೊಟ್ಟಿದ್ದಳು. ಹೆಣ್ಣುಮಕ್ಕಳನ್ನು ಹೀಗಳೆಯುವ ಡೈಲಾಗ್ ವಿರುದ್ಧ ಸೂರಿಅಣ್ಣನನ್ನು ಬೆಂಡೆತ್ತುವ ಮಾತಾಡೋ ಮೂಲಕ ಸೀದಾ ಜೈಲು ಪಾಲಾಗಿ ಬಿಟ್ಟಿದ್ದಳು. ಅದಾದ ನಂತರ ಸೂರಿ ಅಣ್ಣನ ಬತ್ತಳಿಕೆಯಿಂದ ಹೊರ ಬಂದ ಮೊಂಡು ಬಾಣ ಅಮುಕುಡುಮುಕು ಎಂಬೋ ಗಾಂಜಾ ಗಿರಾಕಿ. ಈ ಅಯೋಗ್ಯ ಒಂದೇ ಡೈಲಾಗನ್ನು ವಿಕಾರವಾಗಿ ಅರಚುತ್ತಾ ಒಂದಿಡೀ ಕರ್ನಾಟಕಕ್ಕೇ ಬವಳಿ ಬರಿಸಿದ್ದಾನೆ. ಇಂಥವನು ಪೆಟ್ರೋಲ್ ಕುಡಿಯೋ ನಾಟಕವಾಡೋ ಮೂಲಕ ವಿಕೃತ ಪ್ರಚಾರದ ಪಟ್ಟುಗಳು ಪೊಲೀಸ್ ಇಲಾಖೆಯ ಗಮನ ಸೆಳೆಯುವಂತೆ ಮಾಡಿದೆ.

ಅಮುಕುಡುಮುಕು ಮಂಜ, ಅವನ್ಯಾರೋ ತಲೆಮಾಸಿದ ನವಾಜ್ ಸೇರಿದಂತೆ ಒಂದಷ್ಟು ಮಂದಿಯನ್ನಿಟ್ಟುಕೊಂಡು ಸೂರಿ ಪ್ರೇಕ್ಷಕರೊಳಗೊಂದು ರೇಜಿಗೆ ಮೂಡಿಸಿ ಬಿಟ್ಟಿದ್ದಾನೆ. ಅಯೋಗ್ಯ ಅಮುಕು ಡುಮುಕ ಸಿನಿಮಾ ಮಂದಿರದ ಖಾಲಿ ಸೀಟುಗಳ ಮುಂದೆ ಪಾಪನಿವೇದನೆ ಮಾಡಿಕೊಳ್ಳುವ ಮೂಲಕ ಸೂರಿ ಅಣ್ಣನನ್ನು ನಿಖಾಲಿಯಾಗಿಸುವಲ್ಲಿಗೆ ಈ ವಿಕೃತ ಪ್ರಚಾರದ ಪಟ್ಟುಗಳು ಪರ್ಯಾವಸಾನ ಹೊಂದಿವೆ. ಕೆಜಿಎಫ್ ಸಿನಿಮಾ ನೋಡಿ ಅದ್ಯಾವನೋ ತೆಲುಗುವಾಳ್ಳುವೊಬ್ಬ ಕಣ್ಣಲ್ಲಿ ನೀರು ಸುರಿಸುತ್ತಾ ರಿವ್ಯೂ ಕೊಟ್ಟಿದ್ದ. ಅದನ್ನು ನೋಡಿ ನವಾಜ್ ಎಂಬೋ ಕೊಳಕುಮಂಡಲವೊಂದು ಪೊದೆಯಿಂದ ಆಚೆ ಬಂದು ಏಕಾಏಕಿ ಚಿತ್ರಮಂದಿರಗಳ ಮುಂದೆ ಪ್ರತ್ಯಕ್ಷವಾಗಿತ್ತು. ದುರಂತವೆಂದರೆ ಒಂದಷ್ಟು ಸಿನಿಮಾ ತಂಡಗಳು ಖುದ್ದಾಗಿ ನವಾಜನನ್ನು ಕರೆಸಿ ರಿವ್ಯೂ ಕೊಡಿಸಲಾರಂಭಿಸಿದ್ದವು. ಬರಗೆಟ್ಟ ಕೆಲ ಯು ಟ್ಯೂಬ್ ಚಾನೆಲ್ಲುಗಳು ನವಾಜನನ್ನು ಫೋಕಸ್ ಮಾಡಿತ್ತಾ ವ್ಯೂವ್ಸ್ ಹೆಚ್ಚಿಸಿಕೊಳ್ಳುವ ಕಸರತ್ತು ನಡೆಸಿದ್ದವು. ಇಂಥಾ ಅವಿವೇಕಿಗೆ ಕಿಚ್ಚನ ಸಾರಥ್ಯದ ಬಿಗ್ ಬಾಸ್‌ನಲ್ಲಿ ಅವಕಾಶ ಕೊಟ್ಟಿದ್ದೇ ಈ ಶತಮಾನದ ಘೋರ ದುರಂತ!

ಈಗ ಕಂಡ ಕಂಡಲ್ಲಿ, ನಾನಾ ಅವತಾರದಲ್ಲಿ ಪಿತಗುಡುತ್ತಿರುವ ಅಮುಕುಡುಮುಕುಗಳೆಲ್ಲ ಅಂಥಾದ್ದೊಂದು ದುರಂತದ ನಡುವೆ ಹುಟ್ಟಿಕೊಂಡ ವಿಚಿತ್ರ ಶಿಶುಗಳೆಂಬುದು ಸತ್ಯ. ಇಂಥವರಿಂದ ಸಿನಿಮಾಗಳಿಗೆ ಹಿನ್ನಡೆಯೇ ಹೆಚ್ಚೆಂಬುದು ಸಿನಿಮಾ ಮಂದಿಗೆ ಅರ್ಥವಾಗಿತ್ತು. ಆದರೆ, ರೌಡಿಗಳನ್ನು ಗುಡ್ಡೆ ಹಾಕಿಕೊಂಡು ಸಿನಿಮಾ ಮಾಡಿದ್ದ ಸೂರಿ ಅಣ್ಣನಿಗೆ ಮಾತ್ರ ಆ ಸತ್ಯದ ಅರಿವಾಗಿರಲಿಲ್ಲ. ಇಂಥಾ ವಿಕ್ಷಿಪ್ತ ವಿಕೃತ ಆಸಾಮಿಗಳನ್ನು ಮುಂದಿಟ್ಟುಕೊಂಡು, ಸವಕಲು ಗಿಮಿಕ್ಕುಗಳನ್ನು ಮಾಡುತ್ತಾ ಸೂರಿ ಅಣ್ಣ ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿದ್ದಾನೆ. ಈಗ ಸೂರಿ ಅಣ್ಣನ ಶೋ ಇರುವ ಸಿನಿಮಾ ಮಂದಿರಗಳಲ್ಲಿ ಅಮುಕುಡುಮುಕು ಮಂಜ ಸೂರಿ ಅಣ್ಣನ ಜೊತೆ ನೊಣ ಹೊಡೆಯುವಂಥಾ ಸ್ಥಿತಿ ನಿರ್ಮಾಣಗೊಂಡಿದೆ. ಸಿನಿಮಾ ಮಂದಿ ಇನ್ನಾದರೂ ನವಾಜ್, ಅಮುಕುಡುಮುಕು ಮಂಜ ಮುಂತಾದ ಅಯೋಗ್ಯರನ್ನು ದೂರವಿಟ್ಟರೆ, ಬಡಪಾಯಿ ಪ್ರೇಕ್ಷಕರು ಸಿನಿಮಾ ಮಂದಿರದತ್ತ ಧಾವಿಸುವ ಧೈರ್ಯ ಮಾಡಬಹುದೇನೋ…

keywords: suri anna movie, cheap publicity gimmick, amukudumuku

The post Suri Anna Movie Publicity Stunts: ಸೂರಿ ಅಣ್ಣನ ಸುತ್ತ ರೌಡಿಗಳು, ಸೈಕೋಗಳ ಹುತ್ತ! appeared first on Cini Shodha.

Cult Movie Controvercy: ಜಮೀರ್ ಮರ್ಜಿಗೆ ಬಿದ್ದು ಇದೆಂಥಾ ಮಾತಾಡಿದರು ಸಿದ್ದರಾಮಯ್ಯ?
ಸಿನಿಮಾ ರಂಗಕ್ಕೆ ರಾಜಕೀಯ, ಸೈದ್ಧಾಂತಿಕ ಸಂಘರ್ಷಗಳ ನೆರಳು ಬಿದ್ದು ಒಂದಷ್ಟು ವರ್ಷಗಳೇ ಕಳೆದು ಹೋಗಿವೆ. ಆದರೆ, ನೆರೆಯ ತಮಿಳುನಾಡು, ಆಂಧ್ರಪ್ರದೇಶದಂಥಾ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಅದರ ಪ್ರಮಾಣ ತುಸು ಕಡಿಮೆ ಇದ್ದಂತಿತ್ತು. ನಾನಾ ಭಾಗ್ಯಗಳ ಮೂಲಕ ಹೆಸರಾಗಿರುವ ಸಿಎಂ ಸಿದ್ದರಾಮಯ್ಯ ಇದೀಗ ಸಿನಿಮಾ ರಾಜಕೀಯ ಪ್ರೇರಿತ ಪ್ರಚಾರದ ಭಾಗ್ಯ ಕರುಣಿಸಿದ್ದಾರೆ. ಇದರ ಭಾಗವಾಗಿ ತನ್ನ ಬಲಗೈ ಭಂಟನಂತಿರೋ ಸಚಿವ ಜಮೀರ್ ಅಹ್ಮದ್ ಖಾನ್ ಸುಪುತ್ರ ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾವನ್ನು ಹಾಡಿ ಹೊಗಳುವ ಮೂಲಕ ತನ್ನ ಘನತೆಗೆ ತಾನೇ ಕುಂದಾಗುವಂತೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಸಿನಿಮಾ ಪ್ರೇಮಿಯೇನಲ್ಲ. ಅವರು ಸಿನಿಮಾಗಳನ್ನು ನೋಡಿ ಸಂಭ್ರಮಿಸೋದು ತೀರಾ ವಿರಳ. ಇತ್ತೀಚೆಗಷ್ಟೇ ಲ್ಯಾಂಡ್ ಲಾಡ್ ಚಿತ್ರ ನೋಡೋದಾಗಿ ಹೇಳಿಕೊಂಡಿದ್ದ ಸಿದ್ದು, ಅದಕ್ಕೂ ಮುನ್ನವೇ ಜಮೀರ್ ಪುತ್ರನ ಕಲ್ಟ್ ಮೂವಿ ನೋಡಿದ್ದಾರೆ. ಇದೊಂದು ಹೊಸ ಮಾದರಿಯ ಚಿತ್ರ ಎಂಬ ಅಭಿಪ್ರಾಯ ಪ್ರಕಟಿಸುವ ಮೂಲಕ ಸಿನಿಮಾ ಪ್ರೇಮಿಗಳನ್ನು ಕಂಗಾಲಾಗಿಸಿದ್ದಾರೆ!

ಸೀರಿಯಸ್ ಕಾಮಿಡಿ

ರಾಜಕಾರಣಿಗಳು ಆಗಾಗ ಸಿನಿಮಾ ನೋಡೋದೇನೂ ಹೊಸತಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ, ಕರ್ನಾಟಕ ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿಯೆಂಬ ಕುಖ್ಯಾತಿ ಗಳಿಸಿದ್ದ ಬಸವರಾಜ ಬೊಮ್ಮಾಯಿಯಂತೂ ಸಿನಿಮಾ ನೋಡೋದು, ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳೋದನ್ನೇ ಕಸುಬಾಗಿಸಿಕೊಂಡಿದ್ದನ್ನು ಕರುನಾಡು ಕಂಡಿದೆ. ಹಾಗಿರುವಾಗ ಸಿದ್ದರಾಮಯ್ಯ ಸಿನಿಮಾವೊಂದನ್ನು ನೋಡೋದಾಗಲಿ, ಆ ಬಗ್ಗೆ ವಿಮರ್ಶೆ, ಅಭಿಪ್ರಾಯ ಹಂಚಿಕೊಳ್ಳೋದಾಗಲಿ ತಪ್ಪೇನಲ್ಲ. ಆದರೆ, ಅವರು ನೋಡಿದ್ದು ಎಂಥಾ ಸಿನಿಮಾವನ್ನು? ಅವರ ಕಡೆಯಿಂದ ವ್ಯಕ್ತವಾಗುತ್ತಿರೋದು ಯಾವ ಬಗೆಯ ಅಭಿಪ್ರಾಯ ಎಂಬುದಿಲ್ಲಿ ಮುಖ್ಯವಾಗುತ್ತೆ. ಈ ನಿಟ್ಟಿನಲ್ಲಿ ನೋಡ ಹೋದರೆ, ಕಲ್ಟ್ ವಿಚಾರದಲ್ಲಿ ಸಿದ್ದಣ್ಣನದ್ದು ಪಕ್ಕಾ ರಾಜಕೀಯ ಮರ್ಜಿಗೆ ಬಿದ್ದ ನಡೆಯೆಂಬುದು ಖುಲ್ಲಂಖುಲ್ಲ ಖಾತರಿಯಾಗುತ್ತೆ.

ಝೈದ್ ಖಾನ್ ತನ್ನ ತೋಪು ಸರಕನ್ನು ಗೆಲ್ಲಿಸಲು ಏನೇನು ಬೇಕೋ ಅಂಥಾ ಎಲ್ಲ ಕಸರತ್ತುಗಳನ್ನು ನಡೆಸುತ್ತಿದ್ದಾನೆ. ಹಾಗೆ ನೋಡಿದರೆ, ಬಿಡುಗಡೆಯಾಗಿ ಎರಡನೇ ದಿನ ಹೊರಳಿಕೊಳ್ಳುವಷ್ಟರಲ್ಲಿ, ಜಮೀರ್ ಮಗನ ಕಲ್ಟ್ ಸೋಲಿನ ಕಮರಿಯತ್ತ ಉರುಳಿಕೊಂಡಿತ್ತು. ಪ್ರಚಾರವನ್ನು ಊರಗಲ ನಡೆಸುವ ಮಂದಿ ಕಂಟೆಂಟನ್ನು ನಿರಾಸೆಯಾಗದ ರೀತಿಯಲ್ಲಿ ಕಟ್ಟಿ ಕೊಡಬೇಕಾಗುತ್ತೆ. ಆದರೆ, ಕಲ್ಟ್ ಎಂಬುದು ಎಲ್ಲೆಲ್ಲಿಂದಲೋ ಬಿಡಿಬಿಡಿ ದೃಷ್ಯಗಳನ್ನು ಯಥಾವತ್ತಾಗಿ ಎತ್ತಿಕೊಂಡು ಮಾಡಿರುವ ಹಳಸಲು ಚಿತ್ರಾನ್ನದಂಥಾ ಸಿನಿಮಾ. ಇಂಥಾ ಚಿತ್ರವನ್ನು ನೋಡಿದ ಸಿದ್ದರಾಮಯ್ಯ ಸೀದಾ ಎದ್ದು ಮನೆಗೆ ತೆರಳಿ ದಣಿವಾರಿಸಿಕೊಂಡಿದ್ದರೆ ಟ್ರೋಲಾಗೋದಾದರೂ ತಪ್ಪುತ್ತಿತ್ತು. ಆದರೆ, ಅವರು ಕಲ್ಟ್ ಇತ್ತೀಚಿನ ಸಿನಮಾನದ ಹೊಸಾ ಮಾದರಿಯ ಚಿತ್ರ ಅಂತೆಲ್ಲ ಕೊಂಡಾಡಿದ್ದಾರೆ. ಕುಟುಂಬ ಸಮೇತರಾಗಿ ನೋಡುವ ಚಿತ್ರ ಎಂಬಂತೆ ಪ್ರಮೋಷನ್ನು ನಡೆಸಿದ್ದಾರೆ. ಅದಾಗಲೇ ಕಲ್ಟ್ ಚಿತ್ರ ನೋಡಿ ಕಂಗಾಲೆದ್ದಿದ್ದ ಒಂದಷ್ಟು ಬಡಪಾಯಿ ಪ್ರೇಕ್ಷಕರ ಪಾಲಿಗೆ ಸಿದ್ದಣ್ಣನ ಮಾತುಗಳೆಲ್ಲವೂ ಅಕ್ಷರಶಃ ಕಾಮಿಡಿಯಂತೆ ಕೇಳಿಸಿದ್ದರೆ ಅಚ್ಚರಿಯೇನಿಲ್ಲ!

ಭಟ್ಟಿಯಿಳಿಸಿದ ಸರಕು

ಇಡೀ ರಾಜ್ಯದಲ್ಲಿ ಸಮಸ್ಯೆಗಳು ನಡಮುರಿದುಕೊಂಡು ಬಿದ್ದಿವೆ. ಇಂಥಾ ದುರಿತ ಕಾಲದಲ್ಲಿ ಪ್ರಯೋಗಾತ್ರಮಕ ಗುಣ ಹೊಂದಿರುವ, ಪ್ರೇಕ್ಷಕರಿಗೆ ಇಷ್ಟವಾಗಿರುವ ಸಿನಿಮಾವೊಂದರ ಬಗ್ಗೆ ಸಿದ್ದರಾಮಯ್ಯ ವಕಾಲತ್ತು ವಹಿಸಿದ್ದರೆ ಆ ಕಥೆ ಬೇರೆಯದು. ಆದರೆ, ಸಿದ್ದಣ್ಣ ನೋಡಿದ್ದು ಮತ್ತು ಮಾತಾಡಿದ್ದು ಅದಾಗಲೇ ಜನ ಮೂಲೆಗೆ ಗದುಮಿದ್ದ ಕಲ್ಟ್ ಚಿತ್ರದ ಬಗ್ಗೆ. ಸಿದ್ದರಾಮಯ್ಯನವರ ಮುಕ್ತಕಂಠದ ಮೆಚ್ಚುಗೆಗೂ, ಈ ಚಿತ್ರ ಮೂಡಿ ಬಂದಿರುವ ರೀತಿಗೂ ಏನ ಆದರೂ ಸೂತ್ರ ಸಂಬಂಧ ಇದೆಯಾ ಎಂಬ ನಿಟ್ಟಿನಿನಲ್ಲಿ ನೋಡ ಹೋದರೆ, ಅಲ್ಲೆದುರಾಗೋದು ಆಘಾತ ಮಾತ್ರ. ಯಾಕೆಂದರೆ, ಕಲ್ಟ್ ಎಂಬುದು ಒಂದು ಸಿನಿಮಾದ ಪಾಲಿಗೆ ಬೆನ್ನಹುರಿಯಂಥಾ ಕಥೆಯೇ ನೆಟ್ಟಗಿಲ್ಲದ ಚಿತ್ರ. ಹೇಗೋ ಆರಂಭವಾಗುತ್ತೆ. ಮತ್ಯಾವ ದಿಕ್ಕಿನಲ್ಲೋ ಕದಲುತ್ತೆ. ಹಿಂದೆ ನೋಡಿದ್ದಕ್ಕೂ, ಕಣ್ಣೆದುರು ಚಲಿಸುವ ದೃಷ್ಯಗಳಿಗೂ ಕನೆಕ್ಷನ್ನೇ ಸಿಗದೆ ಪ್ರೇಕ್ಷಕರು ಕಂಗಾಲಾಗುವಂತಿದೆ.

ಈ ಸಿನಿಮಾದಲ್ಲಿ ನಾನಾ ಸಿನಿಮಾಗಳ ನೇರ ನೆರಳಿದೆ. ಮೊದಲಾರ್ಧದ ತುಂಬೆಲ್ಲ ಕಳೆದ ವರ್ಷ ತೆರೆಗಂಡು ಸೂಪರ್ ಹಿಟ್ ಆಗಿದ್ದ ತೆಲುಗು ಚಿತ್ರ ಬೇಬಿಯ ಇರುವಿಕೆ ಕಾಣುತ್ತೆ. ಒಂದಷ್ಟು ಭಾಗಗಳಲ್ಲಿ ಇದು ಬೇಬಿಯ ರೀಮೇಕ್ ಇರಬಹುದಾ ಅಂತೊಂದು ಗುಮಾನಿಯೂ ಕಾಡುತ್ತೆ. ಆದರೆ, ಈ ವಿಚಾರದಲ್ಲಿ ನಿರ್ದೇಶಕರು ಗಣನೀಯವಾಗಿ ತಮ್ಮ ಕ್ರಿಯೇಟಿವಿಟಿಯನ್ನು ಪ್ರಯೋಗಿಸಿದ್ದಾರೆ. ಅದರ ಫಲವಾಗಿಯೇ ಬೇಬಿಯಲ್ಲಿ ಹುಡುಗಿಯ ಚಹರೆ ಕಲ್ಟ್‌ನಲ್ಲಿ ನಾಯಕನ ಪಾಲಾಗಿದೆ. ಇನ್ನು ದ್ವಿತೀಯಾರ್ಧದಲ್ಲಿ ಬಾಲಿವುಡ್ಡಿನ ವಿವಾದಾತ್ಮಕ ಚಿತ್ರ ಅನಿಮಲ್‌ನ ದೃಷ್ಯಗಳು ಮಕ್ಕಿಕಾಮಕ್ಕಿ ಕಾಣಿಸಿಕೊಂಡು ಪ್ರೇಕ್ಷಕರನ್ನು ದಿಗಿಲುಗೊಳಿಸುತ್ತವೆ. ಈ ಹಿಂದೆ ಝೈದ್ ಖಾನ್ ತನಗೆ ಅನಿಮಲ್ ಚಿತ್ರ ಇಷ್ಟ ಅಂತ ಹೇಳಿಕೊಂಡಿದ್ದ. ಬಹುಶಃ ಎಳವೆಯಿಂದಲೂ ಬೇಕಿನಿಸಿದ್ದನ್ನು ಅಪ್ಪನ ಕಾಸಿನ ಬಲದಿಂದ ಪಡೆದುಕೊಂಡು ಅಭ್ಯಾಸವಿರೋ ಝೈದ್ ಸೂಚನೆಯ ಮೇರೆಗೇ ಹಿಂದಿಯ ಅನಿಮಲ್ಲು ಕಲ್ಟ್‌ಗೆ ಎಗರಿಕೊಂಡಿರಬಹುದು. ವಿಶೇಷವೆಂದರೆ, ಒಂದಷ್ಟು ಸಿನಿಮಾ ಮಂದಿ ಒಂದೊಳ್ಳೆ ಸಿನಿಮಾ ಕಥೆಯಿಂದ ಪ್ರೇರಿತರಾಗುತ್ತಾರೆ. ಆದರೆ, ಕಲ್ಟ್ ನಿರ್ದೇಶಕರು ದೃಷ್ಯಗಳನ್ನೇ ಭಟ್ಟಿ ಇಳಿಸಿದ್ದಾರೆ.

ಸಿದ್ದಣ್ಣನ ಕಣ್ಣೀರು

ಇನ್ನುಳಿದಂತೆ ಸಿದ್ದರಾಮಯ್ಯನವರು ಈ ಸಿನಿಮಾದ ದೃಷ್ಯಗಳನ್ನು ಕಂಡು ಕಣ್ಣೀರಾದ ಬಗ್ಗೆಯೂ ಸುದ್ದಿಗಳು ಹಬ್ಬಿಕೊಳ್ಳುತ್ತಿವೆ. ಸಿದ್ದರಾಮಯ್ಯನವರು ಹೇಳಿಕೇಳಿ ರಫ್ ಅಂಡ್ ಟಫ್ ವ್ಯಕ್ತಿತ್ವದವರು. ಸಹಜೀವಿಗಳು ಚುನಾವಣಾ ಸಂದರ್ಭದಲ್ಲಿ ಕಣ್ಣಿಗೆ ವಿಕ್ಸ್ ಮೆತ್ತಿಕೊಂಡು ಗಳಗಳನೆ ಅತ್ತರೂ, ಸಿದ್ದಣ್ಣ ಕಣ್ಣೀರನ್ನು ಅಸ್ತ್ರವಾಗಿಸಿಕೊಂಡವರಲ್ಲ. ಇಂಥಾ ಸಿಎಂ ಸಾಹೇಬರು ಕಣ್ಣೀರಾಗುವಂಥಾ, ಭಾವುಕವಾಗುವಂತಾ, ಇಲ್ಲವಾದ ಮಗನನ್ನು ನೆನೆಸಿಕೊಳ್ಳುವಂಥಾ ಯಾವ ದೃಷ್ಯಗಳು ಕಲ್ಟ್ ನಲ್ಲಿವೆ ಅಂತ ನೋಡ ಹೋದರೆ, ನಾಯಕ ಝೈದ್ ಖಾನ್ ಎದೆಯೊಡೆದುಕೊಂಡು ಎಣ್ಣೆ ಹೊಡೆಯುವ, ಡ್ರಗ್ಸ್‌ಗೆ ದಾಸನಾಗಿ ನರಳಿ ಸುಖಿಸುವ ಒಂದಷ್ಟು ದೃಷ್ಯಗಳು ಕಾಣಿಸುತ್ತವೆ. ಇಂಥಾ ದುರಂತಮಯ ಸನ್ನಿವೇಶಗಳೇ ಸಿದ್ದರಾಮಯ್ಯನವರಿಗೆ ಮಗನನ್ನು ನೆನಪಾಗಿಸಿ ಕಣ್ಣೀರು ಹನಿದಿರಬಹುದಾ? ಓರ್ವ ತಂದೆಯಾಗಿ ಅವರೊಳಗಿನ ಭಾವುಕತೆಯನ್ನು ಪ್ರಶ್ನಿಸುವಂತಿಲ್ಲ!

ಆದರೆ, ಪ್ರಶ್ನೆ ಎದ್ದಿರೋದು ಹಾಗೂ ಇಲ್ಲದ, ಎಲ್ಲಿಯೂ ಸಲ್ಲದ ಸಿನಿಮಾವೊಂದನ್ನು ರಾಜಕೀಯ ಪ್ರೇರಿತವಾಗಿ ಸಿದ್ದರಾಮಯ್ಯನವರು ಪ್ರಮೋಟ್ ಮಾಡಿರೋದರ ಬಗ್ಗೆ. ಕಲ್ಟ್ ಅನ್ನೋದೊಂದು ಪಕ್ಕಾ ಕಮರ್ಶಿಯಲ್ ಉದ್ದೇಶದ ಪಡಪೋಶಿ ಚಿತ್ರ. ಇದರ ಹಣೆಬರಹ ಎರಡು ದಿನ ಕಳೆಯೋದರೊಳಗಾಗಿ ಸಮಸ್ತರಿಗೂ ಗೊತ್ತಾಗಿ ಬಿಟ್ಟಿದೆ. ಹಾಗಾದರೆ, ಈ ಕ್ಷಣಕ್ಕೂ ಹೌಸ್ ಫುಲ್ ಪ್ರದರ್ಶನ ಅಂತೆಲ್ಲ ಸುದ್ದಿಯಾಗುತ್ತಿದೆಯಲ್ಲಾ ಅಂತೊಂದು ಪ್ರಶ್ನೆ ಕಾಡೋದು ಸಹಜ. ಇದರ ಹಿಂದೆ ಜಮೀರ್ ಮಗನ ಕಾಸಿನಾಟದ ಕಿಸುರಿದೆ. ಲಕ್ಷಗಟ್ಟಲೆ ಕಾಸು ಸುರಿದು, ಟಿಕೆಟ್ ಖರೀದಿಸಿ ಆ ಮೂಲಕ ಸಿನಿಮಾ ಮಂದಿರಗಳನ್ನು ತುಂಬಿಸಲಾಗುತ್ತಿದೆ ಎಂಬ ಅಸಹನೆಯೊಂದು ಸಿನಿಮಾ ರಂಗದಲ್ಲಿಯೇ ನಿಗಿನಿಗಿಸುತ್ತಿದೆ. ಮೇಲುನೋಟಕ್ಕಿದು ಒಂದು ತೋಪು ಸಿನಿಮಾವನ್ನು ಗೆಲ್ಲಿಸುವ ಹಣವಂತರ ಸಹಜ ಸರ್ಕಸ್ಸಿನಂತೆ ಕಾಣಿಸಬಹುದು. ಆದರೆ, ಅದು ಕನ್ನಡ ಚಿತ್ರರಂಗದ ಮೇಲೆ ಬೀರೋ ಅನಾಹುತಕಾರಿ ಪರಿಣಾಮ ದೀರ್ಘಕಾಲಿಕವೆಂಬುದು ಸತ್ಯ!

ನಂಬಿಕೆಯ ಮೇಲೆ ಕತ್ತರಿ

ಕೆಜಿಎಫ್, ಕಾಂತಾರದಂಥಾ ಸಿನಿಮಾಗಳು ಪ್ಯಾನಿಂಡಿಯಾ ಮಟ್ಟದಲ್ಲಿ ಗೆಲುವು ಕಂಡಿವೆ. ಇದರಿಂದಾಗಿ ಕನ್ನಡ ಸಿನಿಮಾ ರಂಗದ ಘನತೆ ರಾಷ್ಟ್ರ ಮಟ್ಟಕ್ಕೇರಿದೆ. ಆದರೆ, ಒಂದಿಡೀ ಚಿತ್ರರಂಗದ ಬೆಳವಣಿಗೆಗೆ ಇಂಥಾ ಸಿನಿಮಾಗಳಿಂದಾಗೋ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು. ಚಂಡಮಾರುತ ಬಂದು ಹೋದ ಮೇಲೆ ಮ್ಲಾನ ವಾತಾವರಣವೊಂದು ನಿರ್ಮಾಣವಾಗುತ್ತದಲ್ಲಾ? ಅಂಥಾದ್ದೇ ಸ್ಥಿತಿ ಪ್ಯಾನಿಂಡಿಯಾ ಸಿನಿಮಾಗಳು ತೆರೆಗಂಡ ನಂತರ ಕನ್ನಡ ಚಿತ್ರರಂಗವನ್ನು ಆಚವರಿಸಿಕೊಳ್ಳುತ್ತೆ. ಇಂತಾ ವಾತಾವರಣದಲ್ಲಿ ಅದೆಷ್ಟೋ ಚೆಂದದ ಸಿನಿಮಾಗಳು ನಾನಾ ಅಡೆತಡೆಗಳನ್ನು ಎದುರಿಸಿ ಸೋತು ಮಾಯವಾಗುತ್ತವೆ. ಇಂಥಾ ಅದೆಷ್ಟೋ ಆಘಾತದ ನಂತರ ಹಂತ ಹಂತವಾಗಿ ಪ್ರೇಕ್ಷಕರಲ್ಲೊಂದು ನಂಬಿಕೆ ಮೂಡಿಸಿ, ಕರ್ನಾಟಕಕ್ಕೆ ಸೀಮಿತವಾದ ಚಿತ್ರವನ್ನೂ ನೋಡುವಂತೆ ಮಾಡುವಷ್ಟರಲ್ಲಿ ಅದೆಷ್ಟೋ ಸೋಲುಗಳೆದುರಾಗಿವೆ. ಅನೇಕರು ಲುಕ್ಸಾನಿನ ಶೂಲಕ್ಕೆ ಸಿಕ್ಕು ಕಂಗಾಲಾಗಿದ್ದಾರೆ. ಹೀಗೆ ಸಾಗಿ ಬಂದು ಕನ್ನಡ ಚಿತ್ರರಂಗದಲ್ಲಿ ಈಗೊಂದು ಲವಲವಿಕೆಯ ವಾತಾವರಣ ನಿರ್ಮಾಣವಾಗಿತ್ತು. ಇಂಥಾ ಹೊತ್ತಿನಲ್ಲಿ ಕಲ್ಟ್ ಮೂಲಕ ಝೈದ್ ಖಾನ್ ಪ್ರೇಕ್ಷಕ ವಲಯದಲ್ಲಿ ಮೂಡಿಕೊಂಡಿದ್ದ ನಂಬಿಕೆಯ ಚಿಗುರಿನ ಮೇಲೆ ಕತ್ತರಿಯಾಡಿಸಿ ಬಿಟ್ಟಿದ್ದಾನೆ!

ಅಷ್ಟಕ್ಕೂ ಈತ ತನ್ನ ತಂದೆ ಜಮೀರ್ ಅಹ್ಮದ್ ಪ್ರಭೆ ಬಳಸಿಕೊಂಡೇ ಕಲ್ಟ್ ಚಿತ್ರದ ಪ್ರಮೋಷನ್ನು ನಡೆಸಿದ್ದ. ಶಿಡ್ಲಘಟ್ಟದಲ್ಲಿ ಅವನ್ಯಾರೋ ಅಯೋಗ್ಯ ರಾಜೀವ್ ಗೌಡ ಎಂಬಾತ ಪೌರಾಯುಕ್ತೆಯನ್ನು ಹೀನಾಯವಾಗಿ ನಿಂದಿಸಿದ ವಿಚಾರ ವಿವಾದವೆಬ್ಬಿಸಿತ್ತು. ಹೀಗೆ ಕಾಂಗ್ರೆಸ್ ಸರ್ಕಾರದ ಅಧಿಕಾರ ಬಲವನ್ನು ಬಳಸಿಕೊಂಡೇ ಊರುತುಂಬಾ ಪ್ರಚಾರ ನಡೆಸಿದ್ದ ಝೈದ್ ಖಾನ್ ತನ್ನ ಮೂರಡಿ ದೇಹದೊಳಗೆ ಆರಡಿಯ ಸಲ್ಮಾನ್ ಖಾನ್‌ನನ್ನೇ ಆವಾಹಿಸಿಕೊಂಡಂತಿದ್ದ. ಅದ್ಯಾರೋ ಅಭಿಮಾನಿಗಳು ಸಭೆಯಿಂದೆದ್ದು ಬಂದು ಝೈದ್‌ನನ್ನು ನೋಡಲು ವೇದಿಕೆಗೆ ನುಗ್ಗೋದಂತೆ, ಝೈದ್ ಖಾನ್ ಸಾಕಿಕೊಂಡ ಅಂಗರಕ್ಷಕರು ತಡೆಯೋದಂತೆ, ಕರುಣಾಳು ಝೈದ್ ಖಾನ್ ತನ್ನ ಅಭಿಮಾನಿಯನ್ನು ಅಂಗರಕ್ಷಕರಿಂದ ಬಿಡಿಸಿ ಅಪ್ಪಿಕೊಳ್ಳೋದಂತೆ… ಇಂಥಾ ಹಳಸಲು ಸ್ಕ್ರಿಪ್ಟೆಡ್ ನಾಟಕಗಳ ಮೂಲಕ ಪ್ರಚಾರದಲ್ಲಿಯೂ ಈ ಚಿತ್ರತಂಡ ಸ್ವಂತಿಕೆ ಕಳೆದುಕೊಂಡಿತ್ತು.

ಅಪ್ಪನ ಕಾಸಲ್ಲಿ ಕಲ್ಟ್ ಕಿತಾಪತಿ

ಯಾರೋ ಬಡಪಾಯಿಗಳು ಕಲ್ಟ್ ಸಿನಿಮಾ ಮಾಡಿದ್ದರೆ ಈ ಸಿನಿಮಾವೀಗ ಹೇಳ ಹೆಸರಿಲ್ಲದಂತೆ ಗಾಯಬ್ ಆಗುತ್ತಿತ್ತು. ಕಲ್ಟ್ ಈಗ ಸಿನಿಮಾ ಮಂದಿರಗಳಲ್ಲಿರೋದೇ ಜಮೀರ್ ಅಹ್ಮದ್ ಕಾಸಿನ ಬಲದಿಂದ. ಹೀಗೆ ಒತ್ತಾಯಪೂರ್ವಕವಾಗಿ ಓಡುತ್ತಿರೋ ಸಿನಿಮಾವೊಂದನ್ನು ಘನತೆವೆತ್ತ ಸಿಎಂ ಸಿದ್ದರಾಮಯ್ಯ ಮೆಚ್ಚಿಕೊಂಡಾಡುತ್ತಾರೆಂದರೆ, ಹೊಸಾ ಮಾದರಿಯ ಚಿತ್ರ, ಕುಟುಂಬ ಸಮೇತ ನೋಡಬೇಕಾದ ಚಿತ್ರ ಅಂತೆಲ್ಲ ಸರ್ಟಿಫಿಕೆಟು ಕೊಡುತ್ತಾರೆಂದರೆ ಏನೆನ್ನಬೇಡ? ಸಿದ್ದು ಮಾತು ಕೇಳಿ ಖುದ್ದು ಅವರನ್ನು ಮೆಚ್ಚಿಕೊಳ್ಳುವವರೇ ಹೋಗಿ ಸಿನಿಮಾ ನೋಡಿದರೆ ಅವರೇನು ಅಂಡುಕೊಳ್ಳಲಿಕ್ಕಿಲ್ಲ? ನಾನಾ ಕೊರತೆಗಳಿಂದ ಕೃಶವಾಗಿ, ಹಣಬಲದಿಂದಲೇ ಜೀವ ಉಳಿಸಿಕೊಂಡಿರುವ ಚಿತ್ರವೊಂದರ ಪರ ವಕಾಕಲತ್ತು ವಹಿಸೋದರಿಂದಾಗುವ ಅನಾಹುತಗಳ ಬಗ್ಗೆ ಸಿದ್ದಣ್ಣನಿಗೆ ಅರಿವಿಲ್ಲವೇ? ಇಂಥಾ ಹತ್ತಾರು ಪ್ರಶ್ನೆಗಳಿವೆ. ಅದಕ್ಕೆ ಸಿದ್ದರಾಮಯ್ಯ ಮಾತ್ರವೇ ಉತ್ತರಿಸಲು ಸಾಧ್ಯ!

ಯಾವಾಗ, ಸಿಎಂ ಸಿದ್ದರಾಮಯ್ಯ ಕಲ್ಟ್ ಚಿತ್ರವನ್ನು ಹೊಗಳಿದರೋ, ಅದಾಗಿ ದಿನದೊಪ್ಪತ್ತಿನಲ್ಲಿಯೇ ಮತ್ತೊಂದು ತಗಡು ಡ್ರಾಮಾವನ್ನು ಝೈದ್ ಖಾನ್ ಸೃಷ್ಟಿಸಿದ್ದಾನೆ. ಸಿಎಂ ಸಾಹೇಬರು ಕುಟುಂಬ ಸಮೇತ ಕಲ್ಟ್ ನೋಡಲು ಹೇಳಿದ್ದಾರೆಂದು ಪರಿವಾರ ಸಮೇತವಾಗಿ ಪಟಾಲಮ್ಮೊಂದು ಗ್ಲೋಬಲ್ ಮಾಲ್‌ಗೆ ದಾಂಗುಡಿಯಿಟ್ಟಿದೆ. ಅಲ್ಲಿ ಮಾಲ್ ಸಿಬ್ಬಂದಿ ಸಿನಿಮಾ ನೋಡಲು ಅವಕಾಶ ಕೊಟ್ಟಿಲ್ಲ ಅಂತ ಆ ಪಟಾಲಮ್ಮು ಪುಕಾರೆಬ್ಬಿಸಿದೆ. ಇಂಥಾ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಮೂಲಕ ಬಿಟ್ಟಿ ಪ್ರಚಾರ ಸಿಗುತ್ತದೆಂಬ ಅಂದಾಜು ಝೈದ್‌ನದ್ದಿರಬಹುದು. ಆದರೆ, ಹಳ್ಳಿ ಮೂಲೆಯಲ್ಲಿ ಕೂತು ನೋಡುವವರಿಗೂ ಕೂಡಾ ಅದೊಂದು ಪ್ರಚಾರದ ಗಿಮಿಕ್ಕೆಂಬುದು ಸ್ಪಷ್ಟವಾಗಿಯೇ ಅರಿವಾಗುತ್ತದೆ. ಪ್ರೇಕ್ಷಕರನ್ನು ದಡ್ಡರೆಂದುಕೊಂಡಿರೋ ಝೈದ್ ಖಾನ್ ಇನ್ನೂ ಅದೆಂತೆಂಥಾ ನಾಟಕ ನಿರ್ದೇಶಿಸಲಿದ್ದಾನೋ ಗೊತ್ತಿಲ್ಲ.

ಅಹಂಕಾರ ಇಳಿಯದಿದ್ದರೆ…

ಈ ಹುಡುಗ ಝೈದ್ ಖಾನ್ ಬನಾರಸ್ ಚಿತ್ರದ ಮೂಲಕ ನಾಯಕನಾಗಿ ಬೆಳಕು ಕಂಡಾಗ ಸಿನಿಮಾ ಪ್ರೇಮಿಗಳು ಖುಷಿಗೊಂಡಿದ್ದರು. ಜಯತೀರ್ಥ ಸಾರಥ್ಯದಲ್ಲಿ ಈತ ಒಂದಷ್ಟು ಪಳಗಿದ ಪ್ರದರ್ಶನ ನೀಡಿದ್ದ. ರಾಜಕೀಯ ಭಿನ್ನಾಭಿಪ್ರಾಯದ ನೆಲೆಯಲ್ಲಿ ಒಂದಷ್ಟು ಮಂದಿ ಈತನನ್ನು ಮೂದಲಿಸಿದ್ದರು. ಯಾರೇ ಕಲಾವಿದರಾದರೂ ಜಾತಿ ಧರ್ಮಗಳ ನೆಲೆಯಲ್ಲಿ ವಿರೋಧಿಸೋದು, ಹತ್ತಿಕ್ಕೋದು ತರವಲ್ಲ. ಇಂಥಾ ಮನುಷ್ಯಧರ್ಮದ ನೆಲೆಯಲ್ಲಿ ಬಹಳಷ್ಟು ಮಂದಿ ಈತನನ್ನು ಬೆಂಬಲಿಸಿದ್ದರು. ಅದಾದ ನಂತರ ಈತ ನಟಿಸಿರೋ ಎರಡನೇ ಸಿನಿಮಾಶ ಕಲ್ಟ್. ಈ ಮೂಲಕ ಭ್ರಮೆಯ ಸ್ಟಾರ್‌ಗಿರಿಯನ್ನು ನೆತ್ತಿಗೇರಿಸಿಕೊಂಡ ಝೈದ್ ಪ್ರೇಕ್ಷಕರೆದುರು ಠಳಾಯಿಸುತ್ತಿದ್ದಾನೆ. ಈತನ ಮಾತು ವರ್ತನೆಗಳಲ್ಲಿ ಬನಾರಸ್ ಕಾಲದ ನಯ ವಿನಯ ಮಾಯವಾಗಿಬಿಟ್ಟಿದೆ.

ಸಿನಿಮಾದ ಕಂಟೆಂಟು ಚೆಂದಗಿದ್ದರೆ ಜನ ಖಂಡಿತಾ ಗೆಲ್ಲಿಸುತ್ತಾರೆ. ಇಂಥಾ ಹರತಾಳಗಳ ಅವಶ್ಯಕತೆಯಿಲ್ಲ. ಝೈದ್ ಗೆ ಅಪ್ಪನ ಕಾಸಿನ ಬಲವಿದೆ. ಒಂದು ಸಿನಿಮಾವನ್ನು ಎಲ್ಲ ರೀತಿಯಿಂದಲೂ ಅಚ್ಚುಕಟ್ಟಾಗಿ ರೂಪಿಸೋ ಅವಕಾಶವೂ ಇದೆ.

ಅದನ್ನು ಬಳಸಿಕೊಂಡು ಒಳ್ಳೆ ಸಿನಿಮಾ ಮಾಡೋ ಅವಕಾಶವನ್ನು ಆತ ಕಲ್ಟ್ ಮೂಲಕ ಕಳೆದುಕೊಂಡಿದ್ದಾನೆ. ಬಹುಶಃ ನಿರ್ದೇಶಕರನ್ನೂ ಕೂಡಾ ಕೆಲಸದಾಳುಗಳಂತೆ ಕಾಣುವ ಗುಣದಿಂದಲೇ ಕಲ್ಟ್ ನಲ್ಲಿ ಬೇಬಿ ಕಾಣಿಸುತ್ತಾಳೆ. ಅನಿಮಲ್ ಕುಣಿದಾಡುತ್ತೆ. ಕಳೆದು ಹೋಗಿರೋದು ಸ್ವಂತಿಕೆ ಮಾತ್ರ. ಇಂಥಾ ಸಿನಿಮಾವನ್ನು ಅದ್ಯಾವ ಸೌಭಾಗ್ಯಕ್ಕೆ ಸಿದ್ದರಾಮಯ್ಯ ಹೊಗಳಿದರೋ ಗೊತ್ತಾಗುತ್ತಿಲ್ಲ. ಬಿಜೆಪಿ ಐಟಿ ಸೆಲ್ ಮಂದಿ ಸಿದ್ದರಾಮಯ್ಯನವರ ಒಳ್ಳೆ ಕೆಲಸಗಳನ್ನೂ ಮರೆಮಾಡುವಂತೆ ಟ್ರೋಲುಗಳ ಪ್ರಹಾರ ನಡೆಸುತ್ತಾ ಬರುತ್ತಿದ್ದಾರೆ. ಕಲ್ಟ್‌ನಂತಾ ಕಳಪೆ ಚಿತ್ರವನ್ನು ಪ್ರಮೋಟ್ ಮಾಡೋ ಮೂಲಕ ಸಿದ್ದಣ್ಣ ಸ್ವತಃ ಟ್ರೋಲುಗಳಿಗೆ ಕಂಟೆಂಟು ಒದಗಿಸಿದ್ದಾರೆ. ಇದು ನಿಜಕ್ಕೂ ಚಿತ್ರರಂಗದ ಮಟ್ಟಿಗೆ ಒಳಿತಿನ ಬೆಳವಣಿಗೆಯಲ್ಲ. ಇಂಥಾ ನಾಟಕದ ಪ್ರಚಾರದ ಪಟ್ಟುಗಳ ಮೂಲಕ ಝೈದ್ ಖಾನ್ ಬಿಡಿ; ಯಾವ ನಟನೂ ಬರಖತ್ತಾಗಲು ಸಾಧ್ಯವಿಲ್ಲ!

keywords: zaid khan, siddaramaiah, cult movie, sandalwood, cult controvercy, rachitha ram

The post Cult Movie Controvercy: ಜಮೀರ್ ಮರ್ಜಿಗೆ ಬಿದ್ದು ಇದೆಂಥಾ ಮಾತಾಡಿದರು ಸಿದ್ದರಾಮಯ್ಯ? appeared first on Cini Shodha.

Comedy KIhiladigalu Season 5: ಕಾಮಿಡಿ ಕಿಲಾಡಿಗಳ ವಿರುದ್ಧ ಹಬೆಯಾಡಿತು ಆಕ್ರೋಶ!
ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್೫ ಬಗೆಗೀಗ ಭಾರೀ ಚರ್ಚೆಗಳು ನಡೆಯುತ್ತಿವೆ. ಹೆಚ್ಚೇನಲ್ಲ; ಈಗ್ಗೆ ಏಳೆಂಟು ವರ್ಷಗಳ ಹಿಂದೆ ಹೊಸಾ ಹೊಸ ಕಾರ್ಯಕ್ರಮಗಳ ಮೂಲಕ, ರಿಯಾಲಿಟಿ ಶೋಗಳ ಮೂಲಕ ಸಂಚಲನ ಸೃಷ್ಟಿಸಿದ್ದ ವಾಹಿನಿ ಜೀ ಕನ್ನಡ. ಪ್ರತಿಯೊಂದರಲ್ಲಿಯೂ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ಪ್ರೇಕ್ಷಕರ ಮನಗೆಲ್ಲುವಂತೆ ಈ ವಾಹಿನಿಯನ್ನು ಕಟ್ಟಿ ನಿಲ್ಲಿಸಿದ್ದ ಕೀರ್ತಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್‌ಗೆ ಸಲ್ಲುತ್ತೆ. ಎಲ್ಲ ಸ್ಪರ್ಧೆಯನ್ನು ಕ್ರಿಯೇಟಿವಿಟಿಯ ಮೂಲಕವೇ ಎದುರಿಸಿ ಒಂದು ವಾಹಿನಿಯನ್ನು ಕಟ್ಟಿ ನಿಲ್ಲಿಸೋದಿದೆಯಲ್ಲಾ? ಅದು ನಿಜಕ್ಕೂ ಒಂದು ಸಾಹಸ. ಈ ನಿಟ್ಟಿನಲ್ಲಿ ಯುವ ಸಾಹಸಿಯಾಗಿ ಕಂಡಿದ್ದ ರಾಘವೇಂದ್ರ ಬರಬರುತ್ತಾ ಟಿಆರ್‌ಪಿ ಮರ್ಜಿಗೆ ಒರಗಿಕೊಂಡು ಹಂತ ಹಂತವಾಗಿ ಅಧ್ವಾನವೆಬ್ಬಿಸುತ್ತಾ ಬರಲಾರಂಭಿಸಿದ್ದರು. ಈಗಂತೂ ಯಾವ ವಾಹಿನಿಯನ್ನು ಉತ್ತುಂಗಕ್ಕೇರಿಸಿದ್ದರೋ, ಅದನ್ನು ಕೀಳು ಅಭಿರುಚಿಯ ಪಾತಾಳಕ್ಕಿಳಿಸಿದ ಕುಖ್ಯಾತಿಯೂ ರಾಘವೇಂದ್ರ ಹುಣಸೂರ್ ಖಾತೆಗೆ ಜಮೆಯಾಗಿ ಬಿಟ್ಟಿದೆ!

ಅಷ್ಟಕ್ಕೂ ಇತ್ತೀಚಿನ ಸೀಜನ್ನುಗಳ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಥರ್ಡ್‌ಗ್ರೇಡ್ ಹಾಸ್ಯಗಳ ಮೂಲಕ ಮಾನ ಕಳೆದುಕೊಂಡಿತ್ತು. ತೋಳಲ್ಲಿ ರಾಘವೇಂದ್ರ ಸ್ವಾಮಿಗಳ ಭಾವಚಿತ್ರ ಹಚ್ಚೆ ಹಾಕಿಸಿಕೊಂಡು, ಸೋಶಿಯಲ್ ಮೀಡಿಯಾ ಮೂಲಕ ಅಬ್ರಕದಬ್ರ ಕನ್ನಡದಲ್ಲಿ ಏನೇನೋ ಬೋಧಿಸುವ ಜಗ್ಗೇಶ್ ಜಡ್ಜ್ ಆಗಿ ಆ ಕಾರ್ಯಕ್ರಮವನ್ನು ಮತ್ತಷ್ಟು ಹಡಾಲೆಬ್ಬಿಸಿದ್ದು ದುರಂತ ವಾಸ್ತವ. ಇದೆಲ್ಲ ಆಗಿ ಒಂದಷ್ಟು ಕಾಲದ ನಂತರ ಶುರುವಾಗಿದ್ದ ಸೀಜನ್೫ರಲ್ಲಿ ಅಸಲೀ ಹಾಸ್ಯದ ಸ್ವಾದವಿರಬಹುದೆಂಬ ಕ್ಷೀಣ ನಿರೀಕ್ಷೆಯೊಂದು ಪ್ರೇಕ್ಷಕರಲ್ಲಿದ್ದದ್ದು ಸತ್ಯ. ಅದು ಮೊದಲ ಒಂದಷ್ಟು ಎಪಿಸೋಡುಗಳಲ್ಲಿಯೇ ನೇಣು ಹಾಕಿಕೊಂಡಿತ್ತು. ಇದೀಗ ಟಿಆರ್‌ಪಿ ತಲುಬಿಗಾಗಿ ಈ ಕಾರ್ಯಕ್ರಮದ ಆಯೋಜಕರು ತುಳಿದಿರುವ ಹಾದಿ ಇದೆಯಲ್ಲಾ? ಅದರ ವಿರುದ್ಧ ಪ್ರಜ್ಞಾವಂತರೆಲ್ಲ ಕೊತಗುಡಲಾರಂಭಿಸಿದ್ದಾರೆ.

ಇದು ಹೇಳಿಕೇಳಿ ಸೋಶಿಯಲ್ ಮೀಡಿಯಾ ಜಮಾನ. ಇಲ್ಲಿ ಒಳ್ಳೆ ಸರಕುಗಳಿಗಿಂತಲೂ, ಕೆಟ್ಟದ್ದೇ ಹೆಚ್ಚಾಗಿ ಬಿಕರಿಯಾಗುತ್ತವೆ. ಪೆಕರು ಪೆಕರಾಗಿ ಡೈಲಾಗು ಉದುರಿಸಿದಾತ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಎಂಬ ಭ್ರಮೆಗೆ ಬಲಿಯಾಗುತ್ತಾನೆ. ಚೆಂದದ ಹಾಡನ್ನು ದ್ರಾಬೆಯಂತೆ ಹಾಡಿದ ಎಳಸು ಹುಡುಗಿಯೊಬ್ಬಳು ಸೆಲೆಬ್ರಿಟಿಯಂತೆ ಮಿಂಚುತ್ತಾಳೆ. ಅವಳ್ಯಾರೋ ದೆವ್ವ ಮೆಟ್ಟಿಸಿಕೊಂಡವಳಂತೆ ವಿಕಾರವಾಗಿ ಅರಚಾಡುತ್ತಾಳೆ. ಮತ್ಯಾವನೋ ಬಟ್ಟೆ ಹರಿದುಕೊಂಡು ಕುಣಿದಾಡುತ್ತಾನೆ. ಇಂಥಾ ಕಿತಾಪತಿಗಳನ್ನೆಲ್ಲ ನಿರ್ಲಕ್ಷ್ಯ ಮಾಡಿದರೆ, ಈ ಬಗೆಯ ವಿಕೃತಿಗಳಿಗೆ ಮಾರುಕಟ್ಟೆಯಿಲ್ಲ ಎಂಬ ಸಂದೇಶವನ್ನ ತಣ್ಣಗೆ ರವಾನಿಸಿದಂತಾಗುತ್ತೆ. ಮತ್ತೊಂದಷ್ಟು ಕೀಟಬಾಧೆಯಿಂದ ಈ ಸಮಾಜ ತಪ್ಪಿಸಿಕೊಂಡಂತಾಗುತ್ತೆ.

ಆದರೆ, ರಾಘವೇಂದ್ರ ಹುಣಸೂರನ ಸಾರಥ್ಯದಲ್ಲಿ ಇಂಥಾ ಎಳಸುಯ ಕುನ್ನಿಗಳಿಗೆ ಕಾಮಿಡಿ ಕಿಲಾಡಿಯಂಥಾ ದೊಡ್ಡ ವೇದಿಕೆ ಕಲ್ಪಸಲಾಗುತ್ತಿದೆ. ಇದಕ್ಕಿಂತಲೂ ದುರಂತ ಬೇರೇನಿರಲು ಸಾಧ್ಯ? ಅದ್ಯಾರೋ ಹುಡುಗಿಯೊಬ್ಬಳಿ ಹೂವಿನ ಬಾಣದಂತೆ ಎಂಬ ಹಾಡನ್ನು ಅಪಭ್ರಂಶಗೊಳಿಸಿ ಹಾಡುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿದ್ದಳು. ಅದರ ಮೂಲಕ ಆಕೆಗೆ ಸಿಕ್ಕ ಭ್ರಾಮಕ ಪಬ್ಲಿಸಿಟಿ ಕಂಡ ಪ್ರಜ್ಞಾವಂತರು ಸೋಶಿಯಲ್ ಮೀಡಿಯಾ ಮೂಲಕವೇ ತಿಳಿ ಹೇಳಲು ಪ್ರಯತ್ನಿಸಿದ್ದರು. ಆದರೀಗ ಕಾಮಿಡಿ ಕಿಲಾಡಿ ಶೋನಲ್ಲಿ ಆ ಹುಡುಗಿಗೆ ಅವಕಾಶ ಕೊಡಲಾಗಿದೆ. ಇದಕ್ಕಿಂತಲೂ ಭೀಕರ ವಿಚಾರವೆಂದರೆ, ಗಾಂಜಾ ಗಿರಾಕಿಯಂತೆ ಕಾಣುವ ಅಮುಕುಡುಮುಕುವನ್ನು ಕೂಡಾ ಕಾಮಿಡಿ ಕಿಲಾಡಿಗಳ ದೊಡ್ಡಿಗೆ ಸೇರಿಸಿಕೊಳ್ಳಲಾಗಿದೆ.

ಧ್ರುವ ಸರ್ಜಾನ ಮನೆ ಮುಂದೆ ನಿಂತು ಅರ್ಥವಿಲ್ಲದೆ ಅರಚಾಡುವ ಮೂಲಕ ಮುನ್ನೆಲೆಗೆ ಬಂದಿದ್ದವನು ಅಮುಕುಡುಮುಕು. ಇಂಥವನು ಆ ನಂತರ ಸೋಶಿಯಲ್ ಮೀಡಿಯಾದ ಚಪ್ರಿ ಗ್ಯಾಂಗುಗಳ ನಡುವೆ ಕಾಣಿಸಿಕೊಳ್ಳಲಾರಂಭಿಸಿದ್ದ. ಕಷ್ಟಪಟ್ಟು ದುಡಿಯೋ ಯೋಗ್ಯತೆಯಿಲ್ಲದೆ ತಿರ್ಕೆ ಶೋಕಿ ಅಂಟಿಸಿಕೊಂಡಿರೋ ಇವನೊಳಗೆ ಜಗ್ಗೇಶ್, ಯೋಗರಾಜ ಭಟ್ ಥರದವರಿಗೆ ಅದೆಂಥಾ ಪ್ರತಿಭೆ ಕಾಣಿಸಿತೋ ಭಗವಂತನೇ ಬಲ್ಲ. ಕಡೆಗೂ ಈ ಕ್ರಿಮಿ ಕಾಮಿಡಿ ಕಿಲಾಡಿಗಳ ವೇದಿಕೆಯಲ್ಲಿ ಪಿತಗುಡಲಾರಂಭಿಸಿದೆ. ಈತನ ಪುಟಗೋಸಿ ಕಾಮಿಡಿಗೆ ಜಗ್ಗೇಶಿ ಮೈಕುಲುಕಿಸಿ ನಗುತ್ತೆ. ಯೋಗರಾಜ ಭಟ್ಟರ ಮುಖದಲ್ಲೂ ಒಂದು ಯಾಂತ್ರಿಕ ನಗೆ ಕಾಣಿಸಿಕೊಳ್ಳುತ್ತೆ. ಆದರೆ, ದುರ್ಬೀನು ಹಾಕಿ ಹುಡುಕಿದರೂ, ಮನೋರಂಜನೆಯ ಅಭಿರುಚಿಯನ್ನೇ ಹಾಳುಗೆಡವಿದ ಪಾಪಪ್ರಜ್ಞೆ ಮಾತ್ರ ಕಾಣಿಸುತ್ತಿಲ್ಲ.

Love Mocktail3 Song: ಮನಸಿಗೆ ಮುತ್ತಿಟ್ಟ ಲವ್ ಮಾಕ್ಟೇಲ್3ಗೀತೆ!

ಈ ಹಿಂದೆ ಶೋ ಒಂದಕ್ಕೆ ಪ್ರಸಿದ್ಧ ಯೂಟ್ಯೂಬರ್ ಡಾಕ್ಟರ್ ಬ್ರೋನನ್ನು ಏಕೆ ಕರೆಸುತ್ತಿಲ್ಲ ಅಂತೊಂದು ಪ್ರಶ್ನೆ ರಾಘವೇಂದ್ರ ಹುಣಸೂರನಿಗೆ ಎದುರಾಗಿತ್ತು. ಆಗ ಹುಣಸೂರ ನಿಮ್ಮಜ್ಜಿಗೆ ಡಾ ಬ್ರೋ ಗೊತ್ತಾ ಅಂತ ಮರು ಪ್ರಶ್ನೆ ಎಸೆಯುವ ಮೂಲಕ ವಿವಚಾದಕ್ಕೀಡಾಗಿದ್ದರು. ಬಹುಶಃ ಈ ಅಮುಕುಡುಮುಕು ಥರದ ಪೀಡೆಗಳೆಲ್ಲ ರಾಘವೇಂದ್ರದ ಅಜ್ಜಿಗೆ ಗೊತ್ತಿರಬಹುದು. ಆ ಕಾರಣದಿಂದಲೇ ಕಾಮಿಡಿ ಕಿಲಾಡಿಗಳು ಶೋನಲ್ಲಿ ಅವಕಾಶ ಕೊಟ್ಟಿರಬಹುದೇನೋ… ಇಂಥಾ ಅಯೋಗ್ಯ ನಡೆಯ ಮೂಲಕ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಗಂಭೀರವಾಗಿಯೇ ನಗೆಪಾಟಲಿಗೀಡಾಗಿದೆ. ಅಮುಕುಡುಮುಕು ಮುಂತಾದ ಅಯೋಗ್ಯರಿಗೆ ವೇದಿಕೆ ಕಲ್ಪಿಸೋದಿದೆಯಲ್ಲಾ? ಅದು ಕಲೆಗೆ ಮಾಡೋ ಅಸಲಿ ಅವಮಾನ. ಇಂಥಾ ಶೋಗಳ ಆಡಿಷನ್ನಿನಲ್ಲಿ ನಿಂತು ಅವಕಾಶ ಸಿಗದೆ ನೊಂದ ಅದೆಷ್ಟೋ ಜೀವಗಳ ಶಾಪ ಖಂಡಿತವಾಗಿಯೂ ಈ ಶೋನ ಭಾಗವಾಗಿರುವವರಿಗೆ ತಟ್ಟದಿರೋದಿಲ್ಲ.

ಈ ನಡೆಯ ಮೂಲಕ ವಿಕೃತ ವರ್ತನೆ, ಅತಿರೇಕ, ಹಾರಾಟ, ಚೀರಾಟಗಳೇ ಪ್ರಸಿದ್ಧಿಗಿರುವ ಮಾರ್ಗ ಎಂಬ ನಿರ್ಧಾರಕ್ಕೆ ಹೊಸಾ ತಲೆಮಾರು ಒಗ್ಗಿಕೊಳ್ಳುವ ಅಪಾಯವಿದೆ. ಚಿತ್ರ ವಿಚಿತ್ರ ವರ್ತನೆಗಳಿಂದಲೇ ಮುನ್ನೆಲೆಗೆ ಬಂದಿರುವವರನ್ನೇ ಆಯ್ಕೆ ಮಾಡೋದಾದರೆ ಯಾವ ಸೌಭಾಗ್ಯಕ್ಕೆ ಆಡಿಷನ್ನಿನ ನಾಟಕವಾಡುತ್ತೀರಿ? ನಿಜವಾದ ಕಲೆಯನ್ನು ಎದೆಯೊಳಗಿಟ್ಟುಕೊಂಡು ಅವಕಾಶಕ್ಕಾಗಿ ಕಾಯೋ ಜೀವಗಳನ್ನು ಯಾಶಕೆ ನಿರಾಸೆಗೀಡು ಮಾಡುತ್ತೀರಿ? ಹಾಡೊಂದನ್ನು ಮನ ಬಂದಂತೆ ಒರಲುವುದೇ ಪ್ರಸಿದ್ಧಿಯ ಫಾರ್ಮುಲಾಶ ಅಂತಾದರೆ, ಯಾವ ಮುಖವಿಟ್ಟುಕೊಂಡು ನಿಮ್ಮದೇ ವಾಹಿನಿಯಲ್ಲಿ ಸರೆಗಮಪದಂಥಾ ಶೋಗಳನ್ನು ನಡೆಸುತ್ತೀರಿ? ಹಿರಿಯರಾದ ಜಗ್ಗೇಶ್, ಯೋಗರಾಜ ಭಟ್ ಮೆದುಳೇನು ಬಾಟಮ್ಮಿಗಿಳಿದಿದೆಯಾ? ಇಂಥಾ ಅಧ್ವಾನಗಳನ್ನೇ ಕಾಮಿಡಿಯಾಗಿಸಿ ಕಾಸು ಗುಂಜಲು ನಿಂತಿದ್ದೀರೆಂದರೆ ನಿಮ್ಮಂಥಾ ಕಲಾ ದ್ರೋಹಿಗಳು ಮತ್ಯಾರಿರಲು ಸಾಧ್ಯ? ರಾಘವೇಂದ್ರ ಹುಣಸೂರ್‌ಗೆ ಮಾನ ಮರ್ಯಾದೆಗಳ ಪರಿಚಯವಿದ್ದರೆ ಮೊದಲು ಇಂತಾ ಅಧ್ವಾನಗಳಿಗೆ ಬ್ರೇಕ್ ಹಾಕಲಿ. ಹಾಗಂತ ಪ್ರೇಕ್ಷಕರೇ ಒತ್ತಾಯಿಸುತ್ತಿದ್ದಾರೆ!

keywords: comedy, kkhiladigalu, season5, jaggesh, raghavendra, hunasur, yogaraj bhat, amukudumuku, zee kannada, cinishodha

The post Comedy KIhiladigalu Season 5: ಕಾಮಿಡಿ ಕಿಲಾಡಿಗಳ ವಿರುದ್ಧ ಹಬೆಯಾಡಿತು ಆಕ್ರೋಶ! appeared first on Cini Shodha.

Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!
ನಾನಾ ಸರ್ಕಸ್ಸು ನಡೆಸಿ, ಅವಮಾನಗಳನ್ನು ಎದುರಿಸಿ, ಹೆಜ್ಜೆ ಹೆಜ್ಜೆಗೂ ಕಣ್ಣೀರಾಗಿ ದಕ್ಕಿಸಿಕೊಂಡ ಗೆಲುವಿದೆಯಲ್ಲಾ? ಅದನ್ನು ಎಂಥಾ ಮುಠ್ಠಾಳನೇ ಆದರೂ ಮುಕ್ಕಾಗಲು ಬಿಡುವುದಿಲ್ಲ. ಆದರೆ, ಹಾಗೊಂದು ಗೆಲುವು ಸಿಕ್ಕಾಕ್ಷಣವೇ ಮೆರೆದಾಡುತ್ತಾ, ತಾನು ನಡೆದದ್ದೇ ದಾರಿ, ಆಡಿದ್ದೇ ಮಾತೆಂಬಂತೆ ಮೆರೆದವರೆಲ್ಲ ಇತಿಹಾಸದ ಹುದುಲಿನಲ್ಲಿ ದುರಂತಗಾಥೆಗಳಾಗಿ ಹುಗಿದು ಹೋಗಿದ್ದಾರೆ. ಕಡುಗಷ್ಟದಿಂದ ಪುಟಿದೆದ್ದು ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ ಕೂಡಾ ಓರ್ವ ಸ್ಟಾರ್ ನಟನಾಗಿ ಅಂಥಾ ದುರಂತ ಕಥೆಯಾಗುವ ಅಪಾಯದ ಅಂಚಿನಲ್ಲಿದ್ದಾನೆ. ಈಗ ದರ್ಶನ್ ತಲುಪಿಕೊಂಡಿರೋ ಸ್ಥಿತಿ ನೋಡಿದರೆ ಯಾರಿಗಾದರೂ ನೋವಾಗದಿರೋದಿಲ್ಲ. ದರ್ಶನ್ ಥರದ ನಟನೋರ್ವ ಹೇಗೆ ಇಂಥಾ ಪಾತಾಳ ತಲುಪಿದ? ಸಾಮಾಜಿಕ ಜವಾಬ್ದಾರಿ ಮರೆತಂತೆ ಮೆರೆದಾಡಿ ಯಾಕಿಂತಾ ಸ್ಥಿತಿ ತಂದುಕೊಂಡ ಎಂಬ ಪ್ರಶ್ನೆಗೆ ಉತ್ತರವಾಗಿ ನಿಲ್ಲೋದು ಆತನೊಳಗೆ ಸಾಕಿಕೊಂಡಿದ್ದ ಅಹಂ ಮತ್ತು ತನ್ನ ಸುತ್ತಾ ಸಾಕಿಕೊಂಡಿದ್ದ ಸೂಕ್ಷ್ಮತೆಯ ಪಸೆಯಿಲ್ಲದ ಅಡ್ನಾಡಿಗಳದ್ದೊಂದು ಕೂಟ!

ದೆವಿಲ್ ಸಿನಿಮಾಕ್ಕಾಗಿ ಇಂಥಾ ಪಟಾಲಮ್ಮಿಗೆ ಸೇರಿಕೊಂಡಿದ್ದ ನಿರ್ದೇಶಕ ಮಿಲನಾ ಪ್ರಕಾಶ್ ಕೂಡಾ ಸೂಕ್ಷ್ಮವಂತಿಕೆ ಕಳೆದುಕೊಂಡರಾ? ನವಿರು ಭಾವದ ರಾಯಭಾರಿಯಂತೆ ದೃಷ್ಯ ಕಟ್ಟಿ ಗೆದ್ದಿದ್ದ ಪ್ರಕಾಶ್ ಕೂಡಾ ಡೆವಿಲ್ ಅಡ್ಡೆಯಲ್ಲಿ ನಿಂತು ಬದಲಾಗಿ ಬಿಟ್ಟರಾ? ತಿಂಗಳ ಹಿಂದೆ ಇದ್ರೆ ನೆಮ್ದಿಯಾಗಿರ್ಬೇಕ್ ಅಂತೊಂದು ಡೆವಿಲ್ ಚಿತ್ರದ ಹಾಡು ಹೊರಬಂದಾಗಲೇ ಅನೇಕರನ್ನು ಇಂಥಾ ಹತ್ತಾರು ಪ್ರಶ್ನೆಗಳು ಕಾಡಿದ್ದವು. ಇದೀಗ ದರ್ಶನ್ ಅನುಪಸ್ಥಿತಿಯಲ್ಲಿ ನಡೆದಿರುವ ಡೆವಿಲ್ ಪತ್ರಿಕಾಗೋಷ್ಠಿಯಲ್ಲಿಯೂ ಈ ಹಾಡಿನ ಕುರಿತಾದೊಂದು ಪ್ರಶ್ನೆ ಪ್ರಕಾಶ್ ಅವರನ್ನು ಎದುರುಗೊಂಡಿದೆ. ಇದಕ್ಕೆ ಅತ್ಯಂತ ಸಮಚಿತ್ತದಿಂದ ಉತ್ತರಿಸಿರುವ ಪ್ರಕಾಶ್, ತೀರಾ ಇತ್ತೀಚಿಬನವರೆಗೂ ಆ ಹಾಡಿನ ಹಿನ್ನೆಲೆಯಲ್ಲಿರುವ ಕಥೆಯೇ ತನಗೆ ಗೊತ್ತಿರಲಿಲ್ಲ ಎಂದಿದ್ದಾರೆ. ಆ ಹಾಡು ರಚನೆಯಾದಾಗ, ಅದಕ್ಕೆ ಅಜನೀಶ್ ಸಂಗೀತ ಸಂಯೋಜನೆ ಮಾಡಿದಾಗ ಇಷ್ಟವಾಗಿ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಮಿಲನಾ ಪ್ರಕಾಶ್ ಒಂಥರಾ ಮೂಡಿ ಮನುಷ್ಯ. ಒಂದಷ್ಟು ಕಾಲ ಎಲ್ಲಿಯೋ ಕಳೆದು ಹೋಗಿ, ಮತ್ಯಾವಾಗಲೋ ಧುತ್ತನೆದುರಾಗುವಂಥಾ ಅವಧೂತ ಪ್ರಜ್ಞೆಯ ಮೂಲಕ ಆತ ಭಿನ್ನವಾಗಿ ಕಾಣಿಸುತ್ತಾರೆ. ಅಂಥಾ ಪ್ರಕಾಶ ಹಿನ್ನೆಲೆ ಗೊತ್ತಿದ್ದಿದ್ದರೆ ಈ ಹಾಡನ್ನು ಒಪ್ಪಿಕೊಳ್ಳುತ್ತಿರಲಿಲ್ಲವೇನೋ. ಈ ವಿಚಾರದಲ್ಲಿ ಅವರು ಕೊಟ್ಟಿರೋ ಸಮಜಾಯಿಷಿಯನ್ನು ನಂಬಲಡ್ಡಿಯಿಲ್ಲ. ಆದರೆ, ದರ್ಶನ್ ಸುತ್ತಾ ಪಿತಗುಡುತ್ತಿರುವ ಕೆಲ ಮಂದಿಗಾದರೂ ಇದ್ರೆ ನೆಮ್ದಿಯಾಗಿರ್ಬೇಕ್ ಎಂಬ ದರ್ಶನ್ ಡೈಲಾಗಿನ ಹಿನ್ನೆಲೆ ಗೊತ್ತಿರದಿರಲು ಸಾಧ್ಯವೇ? ದರ್ಶನ್ ಬದುಕೇ ಹಡಾಲೆದ್ದಿರುವ ಈ ಘಳಿಗೆಯಲ್ಲಿ, ಆತ ತನ್ನ ಹೆಂಡತಿ ವಿಜಲಕ್ಷ್ಮಿಗೆ ಒಂದು ಕಾಲದಲ್ಲಿ ಬೈದಿದ್ದ ಬೈಗುಳದ ಸಾಲೇ ಹಾಡಾಗೋದು ಬೇಡ ಅಂತ ಯಾರಿಗಾದರೂ ಅನ್ನಿಬೇಕಿತ್ತಲ್ಲಾ? ಯಾರಿಗೂ ಅನ್ನಿಸಿಲ್ಲವೆಂದರೆ, ದರ್ಶನ್ ಸುತ್ತ ಈ ಕ್ಷಣಕ್ಕೂ ಮನುಷ್ಯಮಾತ್ರರು ಇಲ್ಲವೆಂದೇ ಅರ್ಥ!

ಇನ್ನು ದರ್ಶನ್ ಮೈಸವರಿ ಸಾಕಿಕೊಂಡಿರುವ ಅಭಿಮಾನಿಗಳ ವಿಚಾರ. ಈವತ್ತಿಗೂ ದರ್ಶನ್ ಮಾಡಿರೋದು ಸರಿಯಿಲ್ಲವೆಂಬುದೂ ಸೇರಿದಂತೆ, ಆತನ ಠೇಂಕಾರಗಳ ಬಗ್ಗೆ ತಕರಾರಿಟ್ಟುಕೊಂಡಿರುವ ಅಭಿಮಾನಿ ವರ್ಗವಿದೆ. ಅಂಥವರ ಅಭಿಪ್ರಾಯದ ಎದೆ ಮೇಲೆ ಸವಾರಿ ನಡೆಸುತ್ತಿರೋದು ಪಕ್ಕಾ ಅಯೋಗ್ಯದ ದಂಡು. ದರ್ಶನ್ ಪರ ಅಂಧಾಭಿಮಾನ ಹೊಮ್ಮಿಸುತ್ತಲೇ, ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿಸುವಲ್ಲಿಯೂ ಈ ಅಯೋಗ್ಯರ ಪಾಲಿದ್ದೇ ಇದೆ. ಒಂದು ವೇಳೆ ಇವರೆಲ್ಲರ ಜಾಗದಲ್ಲಿ ತಲೆ ನೆಟ್ಟಗಿರುವವರಿದ್ದಿದ್ದರೆ ಇಂಥಾ ಹಾಡಿನ ಬಗ್ಗೆ ವಿಮರ್ಶೆ ಮಾಡುತ್ತಿದ್ದರು. ಇದು ಬೇಡವಾಗಿತ್ತೆಂಬಂಥಾ ಮಾತುಗಳನ್ನಾದರೂ ಆಡುತ್ತಿದ್ದರು. ವಿಜಯಲಕ್ಷ್ಮಿಯನ್ನು ಅತ್ತಿಗೆ ಅಂತಲೇ ಕರೆಯೋ ಈ ಮಂದಿಗೆ, ಅದೇ ಹೆಣ್ಣುಮಗಳಿಗೆ ಬೈದಿದ್ದ ಬೈಗುಳದ ಹಿಂಚುಮುಂಚಿನ ಸಾಲೊಂದು ಹಾಡಾದಾಗ ಅಸಹ್ಯ ಅನ್ನಿಸಲೇ ಇಲ್ಲ. ಅದು ಅವರ ಮನಃಸ್ಥಿತಿಗೆ ಹಿಡಿದ ಕನ್ನಡಿಯೂ ಹೌದು. ಕಾನೂನು ಪ್ರಕಾರ ಮುಂದೇನಾಗುತ್ತದೋ ಗೊತ್ತಿಲ್ಲ. ಒಂದು ವೇಳೆ ದರ್ಶನ್ ಈ ಕೇಸಿನಿಂದ ಹೊರ ಬರುವ ಅವಕಾಶ ಸಿಕ್ಕರೆ, ಆತ ಕೂಡಲೆ ತನ್ನ ಸುತ್ತಲಿರೋ ಬಳಗವನ್ನು ಫಿಲ್ಟರ್ ಮಾಡಿಕೊಳ್ಳುವತ್ತ ಗಮನ ಹರಿಸಬೇಕಿದೆ. ಸೋ ಕಾಲ್ಡ್ ಸೆಲೆಬ್ರಿಟಿಗಳನ್ನು ಹದ್ದುಬಸ್ತಲಿಲಿಡಬೇಕಿದೆ. ಇಲ್ಲದೇ ಹೋದರೆ ಆತ ಮತ್ತೊಮ್ಮೆ ಜೈಲುಪಾಲಾಗಿ ನೆಮ್ಮದಿ ಕಳಕೊಳ್ಳೋದು ಶತಃಸ್ಸಿದ್ಧ!

The post Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು! appeared first on Cini Shodha.

Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ?
ಪರಪ್ಪನ ಅಗ್ರಹಾರ ಜೈಲಿನ ಅಧ್ವಾನಗಳು ಆಗಾಗ ಹೊರಜಗತ್ತಿಗೆ ಪರಿಚಯವಾಗುತ್ತಿರುತ್ತವೆ. ಆದರೀಗ ವೈರಲ್ ವೀಡಿಯೋವೊಂದರ ಮೂಲಕ ನಮ್ಮ ದುಷ್ಟ ವ್ಯವಸ್ಥೆಯ ಭಯಾನಕ ಹುಳುಕೊಂಡು ಬಟಾಬಯಲಾಗಿದೆ. ಪರಪ್ಪನ ಅಗ್ರಹಾರವೆಂಬುದು ಕೂಳುಬಾಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ಉಗ್ರಾಣದಂತಾಗಿ ಬಹುಕಾಲ ಕಳೆದಿದೆ. ಈ ಮೂಲಕ ಜೈಲೆಂಬುದರ ಅಸಲೀ ರೂಪುರೇಷೆಯೇ ತಲೆಕೆಳಗಾಗಿ ಬಿಟ್ಟಿದೆ. ಇದೀಗ ಹಬ್ಬಿಕೊಂಡಿರುವ ವೀಡಿಯೋಗಳ ಮೂಲಕ ಪರಪ್ಪನ ಅಗ್ರಹಾರ ಅದೆಂಥಾ ಅಧೋಗತಿಯ ಸ್ಥಿತಿ ತಲುಪಿದೆ ಎಂಬ ಸ್ಪಷ್ಟ ಚಿತ್ರಣ ರವಾನೆಯಾಗಿದೆ. ಹೆಣ್ಣುಮಕ್ಕಳನ್ನು ಅತ್ಯಾಚಾರವೆಸಗಿ ಕೊಂದ ಪಾಪಿಷ್ಟ ಉಮೇಶ್ ರೆಡ್ಡಿ, ದೇಶದ್ರೋಹಿ ಭಯೋತ್ಪಾದಕರು, ದಂಧೆಕೋರರೆಲ್ಲ ಪರಪ್ಪನ ಅಗ್ರಹಾರದಲ್ಲಿ ಬಿಂದಾಸಾಗಿರುವ ಈ ವೀಡಿಯೋಗಳ ಮೂಲಕ ಹಾಲಿ ಸರ್ಕಾರದ ಮಾನ ರಾಷ್ಟ್ರಾದ್ಯಂತ ಮೂರಾಬಟ್ಟೆಯಾಗಿದೆ!

ಜೈಲೆಂಬುದು ಕ್ರಿಮಿನಲ್ಲುಗಳ ಎದೆಯಲ್ಲೂ ಪಶ್ಚಾತ್ತಾಪದ ಪಸೆ ಮೂಡಿಸಿ ಬದಲಾವಣೆಗೆ ದಾರಿ ಮಾಡಿಕೊಡುವ ಸ್ಥಳ. ಅದು ಈ ನೆಲದ ಜನಸಾಮಾನ್ಯರಲ್ಲಿದ್ದ ನಂಬಿಕೆ. ಆದರೆ, ಈಗ ಸಣ್ಣಪುಟ್ಟ ಕೇಸುಗಳಲ್ಲಿ ಬಂಧಿಯಾದವರನ್ನೂ ಸಹ ಲೋಕಕಂಟಕರನ್ನಾಗಿ ಮಾರ್ಪಡಿಸುವ ಕೇಂದ್ರವಾಗಿ ಪರಪ್ಪನ ಅಗ್ರಹಾರದಂಥಾ ಜೈಲುಗಳು ಮಾರ್ಪಾಟುಗೊಂಡಿವೆ. ಕಾಸು ಕೊಟ್ಟರೆ ಎಂಥಾ ಸೌಕರ್ಯ ಒದಗಿಸಲೂ ಹಿಂದೇಟು ಹಾಕದಷ್ಟು ಲಜ್ಜೆಗೆಟ್ಟು ನಿಂತಿದ್ದಾರೆ. ಇಂಥಾ ಅಧಿಕಾರಿ ಮತ್ತು ಸಿಬ್ಬಂಧಿ ವರ್ಗ ಇರೋದರಿಂದಲೇ ವಿಕೃತ ಕಾಮಿ ಉಮೇಶ್ ರೆಡ್ಡಿ ಆರಾಮಾಗಿ ಆಂಡ್ರಾಯ್ಡ್ ಫೋನಲ್ಲಿ ಮಾತಾಡುತ್ತಾ, ಎಣ್ಣೆ ಹೊಡೆದುಕೊಂಡು ಆರಾಮಾಗಿದ್ದಾನೆ. ಐಸಿಸಿ ಉಗ್ರ ಶಕೀಲ್ ಮುನ್ನಾನಂಥಾ ಕ್ರಿಮಿಗಳನ್ನೂ ಸಖಲ ಸೌಕರ್ಯ ಕಲ್ಪಿಸಿ ಸಾಕಲಾಗುತ್ತಿದೆ. ಬೇರೆ ಬೇರೆ ಕೇಸುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಎಣ್ಣೆ ಪಾರ್ಟಿ ನಡೆಸುತ್ತಾ, ಕುಣಿದು ಕುಪ್ಪಳಿಸುತ್ತಿದ್ದಾರೆ!

ಯಾವಾಗ ಇಂಥಾದ್ದೊಂದು ವೀಡಿಯೋ ವೈರಲ್ ಆಯ್ತೋ, ಆ ಕ್ಷಣದಿಂದಲೇ ರಾಜ್ಯ ಸರ್ಕಾರ ಡ್ಯಾಮೇಜ್ ಕಂಟ್ರೋಲಿಗಾಗಿ ನಾನಾ ಸ್ವರೂಪಗಳಲ್ಲಿ ಸರ್ಕಸ್ಸು ನಡೆಸಲಾಗಿದೆ. ಏಕಾಏಕಿ ಸಿಸಿಬಿ ಅಧಿಕಾರಿಗಳು ನಟ ಧನ್ವೀರನನ್ನು ವಿಚಾರಣೆಗೊಳಪಡಿಸಿದ್ದೂ ಕೂಡಾ ಅಂಥಾ ಸರ್ಕಸ್ಸಿನ ಭಾಗ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಧನ್ವೀರ್‌ನನ್ನು ಹೀಗೆ ವಿಚಾರಣೆಗೊಳಪಡಿಸಿದ ಅಧಿಕಾರಿಗಳು ಆಳೋ ಸರ್ಕಾರದ ಆಜ್ಞೆಯಂತೆಯೇ ನಡೆದುಕೊಂಡಿದ್ದಾರೆ. ಪರಪ್ಪನ ಅಗ್ರಹಾರದೊಳಗಿನ ಅಸಹ್ಯ ಬೀದಿಗೆ ಬರುತ್ತಲೇ ಕಂಗಾಲಾದ ಸರ್ಕಾರ, ಈ ವೀಡಿಯೋ ಹೊರ ಬಂದಿದ್ದರ ಮೂಲ ಯಾವುದು ಎಂಬುದುದರ ಬಗ್ಗೆ ಸಹಜವಾಗಿಯೇ ತಲೆ ಕೆಡಿಸಿಕೊಂಡಿದೆ. ಈ ಹಂತದಲ್ಲಿ ಥಟ್ಟನೆ ಗೊತ್ತಿಲ್ಲ ಖ್ಯಾತಿಯ ಗೃಹಸಚಿವರ ತಲೆಗೆ ದರ್ಶನ್ ಹೆಸರು ಹೊಳೆಯಿತಾ? ಲೀಕಾದ ವೀಡಿಯೋ ಕಿಸುರನ್ನು ನಸೀಬುಗೇಡಿ ನಟನ ತಲೆಗೆ ಕಟ್ಟಿ ಆ ಕ್ಷಣಕ್ಕೆ ಜನರ ಗಮನವನ್ನ ಬೇರೆಡೆಗೆ ವರ್ಗಾಯಿಸುವ ಷಡ್ಯಂತ್ರ ನಡೆಯಿತಾ? ಸಿಸಿಬಿ ಪೊಲೀಸರ ನಡೆಯೇಕೋ ಇಂಥಾ ಗುಮಾನಿಯನ್ನು ತೀವ್ರವಾಗಿಸುವಂತಿದೆ.

ದರ್ಶನ್ ಎರಡನೇ ಬಾರಿ ಜೈಲುಪಾಲಾದ ನಂತರ ಪರಿಸ್ಥಿತಿ ಬಿಗಡಾಯಿಸಿದೆ. ಆತ ಒಂದು ತಲೆದಿಂಬಿಗಾಗಿ, ಕೊಂಚ ಬಿಸಿಲಿಗೆ ಮೈಯೊಡ್ಡುವದಕ್ಕಾಗಿಯೂ ಕೋರ್ಟ್ ಮೊರೆ ಹೋಗುವಂಥಾ ಸ್ಥಿತಿ ಬಂದೊದಗಿದೆ. ಹೀಗಿರುವಾಗ ಅದೇ ಜೈಲಿನ ಬ್ಯಾರಕ್ಕುಗಳಲ್ಲಿರುವ ವಿಕೃತಕಾಮಿ ಉಮೇಶ್ ರೆಡ್ಡಿ, ಶಕೀಲ್ ಮುನ್ನಾನಂಥಾ ಭಯೋತ್ಪಾದಕರು ಎಲ್ಲ ಸೌಕರ್ಯ ಪಡೆದು ಹಾಯಾಗಿದ್ದರು. ಇದನ್ನು ಹೊರಜಗತ್ತಿಗೆ ಜಾಹೀರು ಮಾಡುವ ಮೂಲಕ ದರ್ಶನ್ ಸೂತ್ರಧಾರಿಕೆ ವಹಿಸಿಕೊಂಡನಾ? ಅಂಥಾ ವೀಡಿಯೋ ಧನ್ವೀರ್ ಕಡೆಯಿಂದ ಮೀಡಿಯಾಗಳಿಗೆ ಸರಬರಾಜಾಯಿತಾ? ಇಂಥಾ ಅನುಮಾನಗಳಿರೋದರಿಂದಲೇ ಧನ್ವೀರ್‌ನನ್ನು ವಿಚಾರಣೆಗೊಳಪಡಿಸಿ, ಆತನ ಮೊಬೈಲ್ ಅನ್ನು ಪರಿಶೀಲಿಸಲಾಗಿದೆ. ಆದರೆ, ಅಲ್ಲಿ ಯಾವ ಸಾಕ್ಷಿಗಳೂ ಸಿಗದೆ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ!

ಒಂದು ವೇಳೆ ಧನ್ವೀರ್ ದರ್ಶನ್‌ಗೆ ಸಹಕಾರಿಯಾಗಲೆಂಬ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿ, ಈ ವೀಡಿಯೋ ಲೀಕ್ ಸೂತ್ರಧಾರನಾಗಿದ್ದಾನೆ ಅಂತಿಟ್ಟುಕೊಳ್ಳಿ; ಅದರಲ್ಲಿ ಅಪರಾಧವೇನೂ ಇಲ್ಲ. ಯಹಾಕೆಂದರೆ, ಇಲ್ಲಿ ಮುಖ್ಯವಾಗೋದು ವೀಡಿಯೋ ಲೀಕ್ ಮಾಡಿರೋದು ಯಾರೆಂಬುದಲ್ಲ. ಆ ವೀಡಿಯೋದಲ್ಲಿರುವ ಭೀಕರ ವಾಸ್ತವಕ್ಕೆ ಕಾರಣರ್‍ಯಾರೆಂಬುದೇ ಚರ್ಚಿಸಬೇಕಾದ ವಿಚಾರ. ಪರಪ್ಪನ ಅಗ್ರಹಾರದಂಥಾ ಜೈಲುಗಳ ಮೇಲೆ ಗೃಹ ಇಲಾಖೆ ಸದಾ ಕಾಲವೂ ಕಣ್ಣಿಡಬೇಕಾಗುತ್ತೆ. ಇಂಥಾ ಕಣ್ಗಾವಲಿನಲ್ಲೇ ವಿಕೇತ ಕಾಮಿಗಳು, ದೇಶದ್ರೋಹಿ ಭಯೋತ್ಪಾದಕರು ರಾಜವೈಭೋಗ ಅನುಭವಿಸುತ್ತಾರೆಂದರೆ ಅದಕ್ಕಿಂತ ನಾಚಿಕೆಗೇಡಿನ ವಿಚಾರ ಮತ್ಯಾವುದಿದೆ? ಗೃಹಸಚಿವ ಜಿ ಪರಮೇಶ್ವರ್ ಆ ಖಾತೆಗೆ ಯೋಗ್ಯರಲ್ಲ ಅನ್ನೋದಕ್ಕೆ ಮತ್ಯಾವ ಪುರಾವೆ ಬೇಕಿದೆ? ಕ್ರಿಮಿನಲ್ಲುಗಳನ್ನು ಜೈಲೊಳಗೆ ಕೊಬ್ಬಲು ಬಿಡುವ ಯಾವುದೇ ಪಕ್ಷದ ಸರ್ಕಾರದಿಂದ ಜನ ಏನನ್ನು ನಿರೀಕ್ಷಿಸಲು ಸಾಧ್ಯ? ನಾಗರಿಕರ ನಡುವೆ ಹುಟ್ಟಿಕೊಂಡಿರುವ ಆಕ್ರೋಶಭರಿತ ಪ್ರಶ್ನೆಗಳಿಗೆ ಉತ್ತರಿಸೋ ನೈತಿಕತೆ ಈ ಸರ್ಕಾರಕ್ಕಿದೆಯಾ?

The post Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ? appeared first on Cini Shodha.

Biggboss Ashwini Controvercy: ದುರಹಂಕಾರ ಕಾರಿಕೊಂಡವಳಿಗೆ ಕಾನೂನು ಕಂಟಕ!
ಬಿಗ್ ಬಾಸ್ ಸೀಜನ್೧೨ರ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಿಚ್ಚಾ ಸುದೀಪ್ ಈ ಎರಡ್ಮೂರು ವಾರಗಳಲ್ಲಿಯೇಒಂದಷ್ಟು ಮೆಚ್ಚುಗೆ ಗಳಿಸುವಂತೆಯೂ ನಡೆದುಕೊಂಡಿದ್ದಾರೆ. ರಕ್ಷಿತಾ ಎಂಬ ಪುಟ್ಟ ಹುಡುಗಿಯನ್ನು ಕಾಡಿಸಿದವರಿಗೆ ಮುಲಾಜಿಲ್ಲದೆ ಬೆವರಿಳಿಸುವ ಮೂಲಕ ಕಿಚ್ಚನ ನಡೆ ಎರಲ್ಲರಿಗೂ ಹಿಡಿಸಿದೆ. ಆರಂಭದಲ್ಲಿ ಸಪ್ಪೆ ಸಪ್ಪೆಯೆಂಬಂತೆ ಬಿಂಬಿಸಿಕೊಂಡಿದ್ದ ಈ ಸೀಜನ್ ಒಂದಷ್ಟು ಸ್ಪರ್ಧಿಗಳ ಕಾರಣದಿಂದ ಕಳೆಗಟ್ಟಿಕೊಂಡಿದೆ. ಸುಖಾಸುಮ್ಮನೆ ಬಿಲ್ಡಪ್ಪು ಕೊಟ್ಟುಕೊಂಡು, ಕೋಟಿಗಳ ಕಥೆ ಪುಂಗಿದ್ದ ನಾಯಿ ಸತೀಶನಂಥವರು ಹೊರಬಿದ್ದು ಮತ್ತೊಂದಷ್ಟು ಹೊಸಾ ಸ್ಪರ್ಧಿಗಳ ಎಂಟ್ರಿಯಾಗಿದೆ. ಇದೆಲ್ಲದರ ನಡುವೆ ಅತ್ತ ನಟಿಯೂ ಅಲ್ಲದ ಇತ್ತ ಹೋರಾಟಗಾರ್ತಿಯೂ ಅಲ್ಲದ ಅಶ್ವಿನಿ ಎಂಬಾಕೆಯ ಅಟಾಟೋಪ ಮೇರೆ ಮೀರಿದೆ.

ಬಿಗ್‌ಬಾಸ್ ಎಂಬುದು ವ್ಯಕ್ತಿತ್ವಗಳ ನಡುವಿನ ಆಟ ಎಂಬಂತೆ ಆಯೋಜಕಲರು ಹೇಳುತ್ತಾರೆ. ಇಂಥಾ ವ್ಯಕ್ತಿತ್ವಗಳ ನಡುವೆ ಇಷ್ಟೂ ಸೀಜನ್ನುಗಳಲ್ಲಿ ವಿಕೃತಿಗಳೂ ಅನಾವರಣಗೊಂಡಿವೆ. ಆದರೆ, ಮನುಷ್ಯರನ್ನು ಮನುಷ್ಯರಂತೆ ಕಾಣಲಾರದ ಜಾತಿ ಬೇಸಿನ ವಿಕೃತಿ ಮಾತ್ರ ಇದುವರೆಗೂ ಕಾಣಿಸಿರಲಿಲ್ಲ. ಅಂಥಾದ್ದೊಂದು ಅಸಹ್ಯಕರ ವಿದ್ಯಮಾನದ ಕೇಂದ್ರಬಿಂದುವಾಗಿರುವಾಕೆ ಅಶ್ವಿನಿ. ಒಂದು ಕಾಲದಲ್ಲಿ ನಟಿಯಂತಿದ್ದು, ನಂತರದ ದಿನಗಳಲ್ಲಿ ಕನ್ನಡ ಪರ ಹೋರಾಟಗಾರ್ತಿಯಾಗಿ ರೂಪಾಂತರಗೊಂಡಿದ್ದಾಕೆ ಅಶ್ವಿನಿ. ಒಂದಷ್ಟು ಪ್ರೌಢಿಮೆ ಹೊಂದಿರುವಂತೆ ಕಾಣಿಸುತ್ತಿದ್ದ ಈಕೆ ಪುಟ್ಟ ಹುಡುಗಿ ರಕ್ಷಿತಾಳನ್ನು ಟಾರ್ಗೆಟ್ ಮಾಡಿದ ರೀತಿ, ತನಗೆ ಪರಿಶಿಷ್ಟ ಜಾತಿಯವರನ್ನ ಕಂಡರಾಗೋದಿಲ್ಲ, ಅವುಗಳ ಕಥೆ ಇಷ್ಟೆ ಎಂಬಂಥಾ ಪಿಸುಮಾತುಗಳ ಮೂಲಕ ಈಕೆಯ ಅಸಲೀ ವ್ಯಕ್ತಿತ್ವ ಅನಾವರಣಗೊಂಡಿದೆ.

ಹೀಗೆ ಬಿಗ್ ಬಾಸ್‌ನಂಥಾ ದೊಡ್ಡ ಶೋ ಮೂಲಕ ಜಾತಿ ನಿಂದನೆ ಮಾಡಿದ ಅಶ್ವಿನಿ ವಿರುದ್ಧ ಈಗ ದೂರು ದಾಖಲಾಗಿದೆ. ಆಕೆ ಬಿಗ್ ಬಾಸ್ ಮನೆಯ ಹಿತ್ತಿಲಿಂದ ಹೊರ ಬಂದು ಕ್ಷಮೆ ಕೇಳಿ ಮತ್ತೆ ತೂರಿಕೊಳ್ಳಬಹುದು. ಆದರೆ, ತನ್ನ ಮಾತುಗಳಿಂದಲೇ ಆಸ್ವಿನಿ ಮಾಡಿಕೊಂಡ ಯಡವಟ್ಟು ಬಿಗ್ ಬಾಸಿಂದ ಬಂದ ಮೇಲೂ ಕಾಡಲಿದೆ. ಕೆಲ ಅವಿವೇಕಿಗಳು ಈಗ ಎಲ್ಲಿದೆ ಜಾತಿ ಅಂತೆಲ್ಲ ಹ್ಞೂಂಕರಿಸುತ್ತಾರೆ.. ಜಗತ್ತು ಮುಂದುವರೆದರೂ ಜಾತಿ ವಿಷ ಮನಸುಗಳಿಗೆ ಹೇಗೆ ಬೆರೆಸಲ್ಪಟ್ಟಿದೆ ಅನ್ನುವುದಕ್ಕೆ ಅಶ್ವಿನಿಯ ಮೆಂಟಾಲಿಟಿಯೇ ಸಾಕ್ಷಿ.ತನ್ನ ಜೊತೆಗಾರ ಸ್ಪರ್ಧಿಯ ಮೇಲೆ ಜಾತಿ ಭೂಮಿಕೆಯಲ್ಲಿ ಹೇಸಿಗೆ ವ್ಯಕ್ತಪಡಿಸುತ್ತಾಳೆಂದರೆ, ಈಕೆಯನ್ನು ಹೋರಾಟಗಾರ್ತಿ ಅಂತಿರಲಿ; ಮನುಷ್ಯಳಾಗಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ!

The post Biggboss Ashwini Controvercy: ದುರಹಂಕಾರ ಕಾರಿಕೊಂಡವಳಿಗೆ ಕಾನೂನು ಕಂಟಕ! appeared first on Cini Shodha.