ashish vidyarthi marriage: ಅದು ದೈಹಿಕ ವಾಂಛೆಯಲ್ಲ; ಮಾನಸಿಕ ಅವಶ್ಯಕತೆ!
ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ (ashish vidyarthi) ಅರವತ್ತನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿರೋ (marriage) ವಿಚಾರವೀಗ ಚರ್ಚೆಯ ಕೇಂದ್ರಬಿಂದು. ಸಾಮಾನ್ಯವಾಗಿ, ಹೀಗೆ ಸಂಧ್ಯಾ ಕಾಲದ ಅಂಚಿನಲ್ಲಿರುವವರ ಅಫೇರುಗಳು, ಮದುವೆ ಮತ್ತಿತ್ಯಾದಿ ಅಂಶಗಳೆಲ್ಲವನ್ನು ಈ ಸಮಾಜ ಮಡಿವಂತಿಕೆಯ ಭೂಮಿಕೆಯಲ್ಲಿ ಒರೆಗೆ ಹಚ್ಚುತ್ತೆ. ಕಾಮದ ಸುತ್ತಲೇ ಟೀಕೆಗಳು ಕೇಳಿ ಬರುತ್ತವೆ. ಸಿನಿಮಾಗಳಲ್ಲಿ ವಿಲನ್‍ಗಿರಿ ಮಾಡಿ ಪ್ರಸಿದ್ಧಿ ಪಡೆದರೂ, ನಿಜಜೀವನದಲ್ಲಿ ಎಂದಿಗೂ ಹೆಸರು ಕೆಡಿಸಿಕೊಳ್ಳದ ಬಹುಭಾಷಾನಟ ಆಶಿಶ್ ವಿದ್ಯಾರ್ಥಿಯೀಗ (ashish vidyarthi) ಅದೇ ತೆರನಾದ ವಿಮರ್ಶೆಗಳಿಗೆ, ಕಟು ಟೀಕೆಗಳಿಗೆ ಗುರಿಯಾಗಿ ಬಿಟ್ಟಿದ್ದಾರೆ. … Continue reading ashish vidyarthi marriage: ಅದು ದೈಹಿಕ ವಾಂಛೆಯಲ್ಲ; ಮಾನಸಿಕ ಅವಶ್ಯಕತೆ!
ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!